ಈಗ ಯೂಟ್ಯೂಬ್ ನಲ್ಲಿ (YouTube) ವಿಡಿಯೋಗಳನ್ನು ನೋಡುವುದು ಎಂದರೆ ಅದು ಒಂದು ರೀತಿ ಟಿವಿಯನ್ನು ನೋಡಿದ ಹಾಗೆ. ಯಾಕೆಂದರೆ ಅಷ್ಟೊಂದು ಜಾಹೀರಾತುಗಳು ಒಂದರ ಹಿಂದೆ ಒಂದರಂತೆ ಬರುತ್ತಾ ಇರುತ್ತವೆ. ವಿಡಿಯೋವನ್ನು ಸತತವಾಗಿ ನೋಡಲು ಸಾಧ್ಯವೇ ಇಲ್ಲ. ಏನಾದರು ಅಗತ್ಯವಾದ ಅಥವಾ ಕುತೂಹಲಕಾರಿ ವಿಡಿಯೋವನ್ನು ನೋಡುತ್ತಿರುವಾಗ ಅದರ ಮಧ್ಯೆ 15, 30 ಸೆಕಂಡ್ಗಳ ಜಾಹೀರಾತು (Advertisement) ಬಂದರೆ ಮೂಡ್ ಆಫ್ ಆಗಿ ಬಿಡುತ್ತದೆ.
ಇಷ್ಟೇಲ್ಲಾ ಇರುವ ಯೂಟ್ಯೂಬ್‌ನ ಆದಾಯದ ಪ್ರಮುಖ ಮೂಲ ಜಾಹೀರಾತುಗಳೇ. ಯೂಟ್ಯೂಬ್‌ನಲ್ಲಿ ವಿಡಿಯೋ ವೀಕ್ಷಣೆ ಮಾಡುವಾಗ ಮಧ್ಯ ಮಧ್ಯ ಬರುವ ಜಾಹೀರಾತುಗಳನ್ನು ಕಾಣಿಸದಂತೆ ಬ್ಲಾಕ್ ಮಾಡಬಹುದಾಗಿದೆ. ಹಾಗಾದ್ರೆ ಯೂಟ್ಯೂಬ್‌ನಲ್ಲಿ ವಿಡಿಯೋ ವೀಕ್ಷಿಸುವಾಗ ಜಾಹೀರಾತು ಬಂದೇ ಇಲ್ಲ ಎಂದರೆ ಹೇಗೆ..?. ಇದಕ್ಕೆ ಇಲ್ಲಿದೆ ನೋಡಿ ಟ್ರಿಕ್ (Tech Tips).

ಆಯಡ್ಬ್ಲಾಕರ್ಉಪಯೋಗಿಸಿ:
ಬ್ರೌಸರ್‌ನಲ್ಲಿ ಯೂಟ್ಯೂಬ್ ವಿಡಿಯೋಗಳನ್ನು ವೀಕ್ಷಿಸುತ್ತೀರಿ ಎಂದಾದರೆ ಗುಣಮಟ್ಟದ ಜಾಹೀರಾತು ಬ್ಲಾಕರ್‌ಗಳನ್ನು ಉಪಯೋಗಿಸಿದರೆ ನಿಮಗೆ ಆಯಡ್‌ಫ್ರೀ ಯೂಟ್ಯೂಬ್ ವೀಕ್ಷಣೆ ಸಿಗುತ್ತದೆ. ಆಡ್‌ಬ್ಲಾಕ್, ಸ್ಟಾಪ್ ಆಡ್‌ಗಳಂತಹ ಆಡ್ ಬ್ಲಾಕರ್‌ಗಳು ಬ್ರೌಸರ್ ಎಕ್ಸಟೆನ್ಷನ್ ಆಗಿ ದೊರೆಯುತ್ತವೆ. ಇನ್‌ಸ್ಟಾಲ್ ಮಾಡಿಕೊಂಡು ನೀವು ಜಾಹೀರಾತು ಮುಕ್ತ ಯೂಟ್ಯೂಬ್ ಆನಂದಿಸಬಹುದು. ಆಯಡ್‌ಬ್ಲಾಕರ್‌ಗಳಿಗಿಂತ ಬೇರೆ ಆಯ್ಕೆಗಳೂ ಕೂಡ ಇವೆ. ಆಡ್‌ಬ್ಲಾಕರ್ ಬಳಸಲು ಆಗಿಲ್ಲವೆಂದರೆ, ಯೂಟ್ಯೂಬ್ ವಿಡಿಯೋದ URL ಮತ್ತು ಪದಗಳ ಮೂಲಕ AdlessTube, ViewPure ಮತ್ತು Voilaದಂತಹ ಸರ್ಚ್ ಇಂಜಿನ್‌ಗಳಲ್ಲಿ ನೀವು ಜಾಹೀರಾತಯ ಮುಕ್ತ ವಿಡಿಯೋಗಳನ್ನು ನೋಡಬಹುದು.
ಯೂಟ್ಯೂಬ್ಪರ್ಯಾಯಆಯಪ್ಗಳನ್ನುಬಳಸಿ:
ಜಾಹೀರಾತು ಬೇಡ ಎಂದರೆ ಯೂಟ್ಯೂಬ್‌ನಂತೆಯೇ ಇರುವ ಪರ್ಯಾಯ ಆಯಪ್‌ಗಳನ್ನು ಬಳಸಬಹುದು. OGYoutube, DNS66, NewPipe, YT Vanced, Ad Clearನಂತಹ ಆಯಪ್‌ಗಳು ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, ಅವುಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವ ಮೂಲಕ ನೀವು ಜಾಹೀರಾತು ಮುಕ್ತ ಯೂಟ್ಯೂಬ್ ವಿಡಿಯೋಗಳನ್ನು ನೋಡಬಹುದು. ಬೇಕಾದಲ್ಲಿ ಡೌನ್‌ಲೋಡ್ ಮಾಡಿಕೊಂಡು ವೀಕ್ಷಿಸಬಹುದು. ಸ್ವತಃ ಯೂಟ್ಯೂಬ್ ಡೌನ್ಲೋಡ್ ಆಯ್ಕೆ ನೀಡಿದ್ದು, ನಿಮ್ಮ ಬಳಿ ಇಂಟರ್ನೆಟ್ ಕನೆಕ್ಷನ್ ಇಲ್ಲ ಎಂದಾದರು ಡೌನ್ಲೋಡ್ ಮಾಡಿದ್ದರೆ ಆರಾಮವಾಗಿ ಯಾವುದೇ ಜಾಹೀರಾತು ಇಲ್ಲದೆ ವೀಕ್ಷಿಸಬಹುದು.
ಅಂತೆಯೆ ಕೇವಲ ಒಂದು ಡಾಕ್ ಹಾಕುವುದರಿಂದ ಯೂಟ್ಯೂಬ್‌ನಲ್ಲಿ ಬರುವ ಜಾಹೀರಾತುಗಳನ್ನು ಬ್ಲಾಕ್ ಮಾಡಬಹುದು. ಯಾವುದೇ ಯೂಟ್ಯೂಬ್ ಲಿಂಕ್‌ನಲ್ಲಿ youtube.com ನಂತರದಲ್ಲಿ ಬರುವ ‘/’ ಚಿಹ್ನೆಗೂ ಮೊದಲು ಒಂದು ಚುಕ್ಕಿ (.) ಹಾಕಿ ಪ್ಲೇ ಮಾಡಿದರೆ, ಆ ವಿಡಿಯೋದಲ್ಲಿ ಮುಂದೆ ಕಾಣಿಸಿಕೊಳ್ಳಬಹುದಾದ ಎಲ್ಲ ಜಾಹೀರಾತುಗಳನ್ನು ಬ್ಲಾಕ್ ಮಾಡುತ್ತದೆ. ಇದು ಕೇವಲ ಡೆಸ್ಕ್‌ಟಾಪ್ ಬ್ರೌಸರ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ.
ಚಂದಾದಾರಿಕೆಪಡೆದುಕೊಳ್ಳಿ:
ಜಾಹೀರಾತುಗಳ ಕಿರಿಕಿರಿ ಬೇಡ ಎನ್ನುವವರು, ಹಣ ತೆತ್ತು ಯೂಟ್ಯೂಬ್ ಪ್ರೀಮಿಯಂ ಖಾತೆಯ ಚಂದಾದಾರಿಕೆ ಪಡೆದುಕೊಳ್ಳಬಹುದು. ಫ್ರೀ ಖಾತೆಯಲ್ಲಿ ಇಲ್ಲದ ಸವಲತ್ತುಗಳು, ಯೂಟ್ಯೂಬ್ ಪ್ರೀಮಿಯಂನಲ್ಲಿವೆ. ಇದುವರೆಗೂ ಅದಕ್ಕೆ ಹಣ ತೆರಲು ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್‌ಆಯ್ಕೆಗಳು ಮಾತ್ರವೇ ಇದ್ದವು. ಆದರೆ ಈಗ ಯುಪಿಐ ಮೂಲಕವೂ ಶುಲ್ಕ ಸಂದಾಯ ಮಾಡಬಹುದಾಗಿದೆ. ಇದರಲ್ಲಿ ಯೂಟ್ಯೂಬ್ ಮ್ಯೂಸಿಕ್‌ನ ಭಂಡಾರದಲ್ಲಿರುವ ಹಾಡುಗಳನ್ನು ಕೇಳಬಹುದು. ಜೊತೆಗೆ ಯೂಟ್ಯೂಬ್ ಒರಿಜಿನಲ್ಸ್ ಸರಣಿಯಲ್ಲಿರುವ ಧಾರಾವಾಹಿಗಳನ್ನು ವೀಕ್ಷಿಸಬಹುದು.
