ಬೆಳಗ್ಗೆಯ ರುಚಿಯಾದ ತಿಂಡಿ ಇಡೀ ದಿನವನ್ನು ಖುಷಿಯಾಗಿಡುತ್ತದೆ. ಬಿಸಿ ಬಿಸಿಯಾದ ಪೂರಿ ಇದ್ರೆ ಅಂತೂ ಅದರ ರುಚಿಯೇ ಬೇರೆ. ಆದ್ರೆ ಎಷ್ಟೋ ಜನರು ಮಾಡೋ ಪೂರಿ ಮೃದುವಾಗಿರಲ್ಲ. ನಮ್ಮಲ್ಲಿ ಅನೇಕರು ಹೋಟೆಲ್ಗಳ ರೀತಿಯಲ್ಲಿ ದೊಡ್ಡ ದೊಡ್ಡ ಪೂರಿ ಮಾಡಲು ವಿಫಲರಾಗುತ್ತಾರೆ. ಮನೆಗಳಲ್ಲಿ ಪೂರಿ ಉಬ್ಬಲ್ಲ ಎಂಬ ಮಾತೂ ಸಹ ಕೇಳಿರುತ್ತವೆ.
ಇಂದು ನಾವು ರುಚಿಯಾದ ಮಲ್ಲಿಗೆಯಂತೆ ಅರಳುವ ಮತ್ತು ಹತ್ತಿಯಂತೆ ಸಾಫ್ಟ್ ಆಗಿರೋ ಪೂರಿ ಹೇಗೆ ಮಾಡಬೇಕು ಎಂದು ಹೇಳುತ್ತಿದ್ದೇವೆ. ಆದ್ರೆ ಇಲ್ಲೊಂದು ಟ್ವಿಸ್ಟ್ ಇದೆ. ಎಣ್ಣೆ ಬಳಸದೆಯೇ ಪೂರಿಗಳನ್ನು ಕರಿಯಬಹುದು ಗೊತ್ತಾ..? ಇಲ್ಲಿದೆ ಮಾಹಿತಿ
ಎಣ್ಣೆ ಬಳಸದೆ ಪೂರಿ ಮಾಡುವುದು ಹೇಗೆ: ಪೂರಿಗಳನ್ನು ಎಣ್ಣೆಯಲ್ಲಿ ಮಾತ್ರವಲ್ಲದೆ ಹಬೆಯಲ್ಲೂ ಬೇಯಿಸಿಬಹುದು. ಆದರೆ ಅವು ಗರಿಗರಿಯಾಗುವ ಬದಲು ಮೃದುವಾಗಿ ಇರುತ್ತವೆ. ಹಾಗಂತ ಅದರ ಸ್ವಾದಕ್ಕೆ ಧಕ್ಕೆಯೇನೂ ಬರುವಿದಿಲ್ಲ. ಥೇಟ್ ಎಣ್ಣೆಯಲ್ಲಿ ಕರಿದ ಪೂರಿಯಂತೆ ಇರುತ್ತದೆ ಅದರ ರುಚಿ. ಇದಕ್ಕಾಗಿ, ಸ್ಟೀಮರ್ ಅನ್ನು ಮುಂಚಿತವಾಗಿ ರೆಡಿ ಮಾಡಿಟ್ಟುಕೊಳ್ಳಿ. ಈಗ ಅದರಲ್ಲಿ ಲಟ್ಟಿಸಿದ ಪೂರಿಯನ್ನು ಇಡಿ. ಸ್ವಲ್ಪವೇ ಸಮಯದಲ್ಲಿ ಅದಯ ಇಡಿಯಾಗಿ, ಪೂರ್ತಿ ಊದಿಕೊಳ್ಳುತ್ತದೆ.
ಪರಿಪೂರ್ಣ ತೈಲ ಮುಕ್ತ ಪೂರಿ: ಮೈಕ್ರೋವೇವ್ ನಲ್ಲೂ ಪೂರಿಗಳನ್ನು ತಯಾರಿಸಬಹುದು. ಇದಕ್ಕಾಗಿ, ಪೂರಿಗಳನ್ನು ಮೊದಲೇ ಲಟ್ಟಿಸಿಟ್ಟುಕೊಳ್ಳಬೇಕು. ನಂತರ ಮೈಕ್ರೋವೇವ್ ಅನ್ನು ಬಿಸಿ ಮಾಡಿ ಅದರಲ್ಲಿ ಪೂರಿಗಳನ್ನು ಇರಿಸಿ. 30-60 ಸೆಕೆಂಡುಗಳ ಕಾಲ ತಾಪಮಾನವನ್ನು ಹೆಚ್ಚಿಸಿ, ಪೂರಿಗಳು ತನ್ನಷ್ಟಕ್ಕೆತಾನೇ ಉಬ್ಬಿಕೊಂಡು ಸಿದ್ಧವಾಗುತ್ತವೆ.
ಎಣ್ಣೆ ಇಲ್ಲದೆ ಪೂರಿ ಮಾಡಿ: ಹಾಗೆಯೇ ಪೂರಿಗಳನ್ನು ಅಗಲವಾದ ತವಾ ದಲ್ಲೂ ತಯಾರಿಸಬಹುದು. ಮೊದಲು ಪ್ಯಾನ್ ಅನ್ನು ಬಿಸಿ ಮಾಡಿಕೊಳ್ಳಿ. ಲಟ್ಟಿಸಿಟ್ಟುಕೊಂಡಿರುವ ಪೂರಿಯನ್ನು ತವಾ ಮೇಲಿಟ್ಟು ಮೂರ್ನಾಲ್ಕು ಬಾರಿ ತಿರುವಿ ಹಾಕಿ. ಅಂದರೆ ಪೂರಿಗಳನ್ನು ಎರಡೂ ಬದಿಗಳಲ್ಲಿ ಫ್ರೈ ಮಾಡಿಕೊಳ್ಳಿ. ನಾನ್ ಸ್ಟಿಕ್ ಪ್ಯಾನ್ ಗಳಲ್ಲಿ ಇದು ಚೆನ್ನಾಗಿ ಮೂಡುತ್ತದೆ ಎಂಬುದನ್ನು ಗಮನಿಸಿ.