ಬೆಂಗಳೂರು: ರಾಜ್ಯದಲ್ಲಿ ಮಳೆರಾಯನ ಆರ್ಭಟ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ ಆದರೆ ಬುಧವಾರ ಸುರಿದ ಸಿಲಿಕಾನ್ ಸಿಟಿಯಲ್ಲಿ ಭಾರಿ ಮಳೆಗೆ ಸುಮಾರು 10 ಕಡೆಗಳಲ್ಲಿ ಧರೆಗುರುಳಿದ ಮರ ಹಾಗೂ ಕೊಂಬೆಗಳು. ಹಾಗೆ ಜಯನಗರ, ಪುಲಿಕೇಶಿ ನಗರ, ಯಲಹಂಕ ಸೇರಿದಂತೆ 10 ಕಡೆಗಳಲ್ಲಿ ಬಿದ್ದ ಮರ ಹಾಗೂ ಕೊಂಬೆಗಳು5 ಕಡೆಗಳಲ್ಲಿ ನೀರು ತುಂಬಿ ಸಮಸ್ಯೆ
ರಾಜ್ಯದಲ್ಲಿ ಎಲ್ಲಾ ಕಡೆಯಲ್ಲೂ ಅಬ್ಬರಿಸುತ್ತಿರುವ ವರುಣ: ಇನ್ನೂ ಮೂರು ದಿನಗಳ ಕಾಲ ಮಳೆ ಸಾಧ್ಯತೆ
ವಿದ್ಯಾರಣ್ಯಪುರ, ಕೆ.ಆರ್. ಮಾರ್ಕೆಟ್, ಓಕಳಿಪುರ ಸೇರಿ 5 ಕಡೆಗಳಲ್ಲಿ ನೀರು ತುಂಬಿ ಸಮಸ್ಯೆ ಕಾಣುತ್ತಿದ್ದು ಸದ್ಯ ಮರಗಳನ್ನ ತೆರವುಗೊಳಿಸಿರೋ ಪಾಲಿಕೆ ಸಿಬ್ಬಂದಿ
ನಿನ್ನೆ ಮಂಗಳೂರು ಹಾಗೂ ಹೊನ್ನಾವಾರದಲ್ಲಿ ಅತಿ ಹೆಚ್ಚು ಮಳೆ ಹಾಗೆ ಹೊನ್ನಾವಾರದಲ್ಲಿ 100.8 ಮಿಮಿ ಮಳೆ ದಾಖಲು ಮಂಗಳೂರಿನಲ್ಲಿ 90.8 ಮಿಮಿ ಮಳೆಯಾಗಿದೆ.
ಬೆಂಗಳೂರಿನಲ್ಲಿ ಎಲ್ಲೆಲ್ಲಿ ಎಷ್ಟು ಮಳೆ
* ಬೆಂಗಳೂರು ಹೆಚ್ ಎಎಲ್ – 34.4 ಮಿಮೀ ಮಳೆ
*
* ಬೆಂಗಳೂರು ನಗರ – 27.8 ಮಿಮೀ ಮಳೆ
*
* ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ – 12.7 ಮಿಮೀ ಮಳೆ
*
* ಎಲೆಕ್ಟ್ರಾನಿಕ್ ಸಿಟಿ – 23.5 ಮಿಮೀ ಮಳೆ