ಬೆಂಗಳೂರು:- ನಮ್ಮ ಮೆಟ್ರೋ ಹಳದಿ ಮೆಟ್ರೋ ಕಾಮಗಾರಿ ಪೂರ್ಣ ಹಿನ್ನೆಲೆ ಒಂದೊಂದೇ ಮೆಟ್ರೋಬೋಗಿ ಹಳಿಗೆ ಎಂಟ್ರಿ ಕೊಡುತ್ತಿವೆ.
ಹಳದಿ ಮಾರ್ಗಕ್ಕೆ ಇನ್ನೆರಡು ಮೆಟ್ರೋ ಬೋಗಿ ಆಗಮಿಸಿದ್ದು, ರಸ್ತೆ ಮೂಲಕವಾಗಿ BMRCL ಹಳದಿ ಮಾರ್ಗದ ಮೆಟ್ರೋ ಬೋಗಿ ತರೆಸಿಕೊಂಡಿದೆ. ಹಳದಿ ಮಾರ್ಗದ ಕೊನೆಯ ಪರೀಕ್ಷಾರ್ಥ ಕಾಮಗಾರಿ ಬಾಕಿ ಉಳಿದಿವೆ. ಬಾಕಿ ಇರುವಾಗಲೇ ಎರಡು ಬೋಗಿಗಳು ಬೆಂಗಳೂರಿಗೆ ಎಂಟ್ರಿ ಕೊಟ್ಟಿವೆ.
ನಮ್ಮ ಮೆಟ್ರೋ, ಮಾರ್ಚ್ ಗೆ ಸಿಗ್ನಲಿಂಗ್ ಪರೀಕ್ಷೆ ಪೂರ್ಣಗೊಳಿಸಲಿವೆ. ಮಾರ್ಚ್ ಮೊದಲ ವಾರದಿಂದ ಇತರೆ ರೈಲು ಪರೀಕ್ಷೆಗಳು ಪ್ರಾರಂಭವಾಗಲಿದೆ. ಮೂರನೇ ರೈಲಿನ ಬೋಗಿ ಮಾರ್ಚ್ 2025 ರ ಅಂತ್ಯದಲ್ಲಿ ಆಗಮಿಸಲಿದೆ.
ಈ ಬಗ್ಗೆ BMRCL ಅಧಿಕಾರಿಗಳಿಂದ ಮಾಹಿತಿ ನೀಡಿದೆ.