ರಾಜ್ಯ ಬಿಜೆಪಿಯ ಬಣ ಬಡಿದಾಟದ ದೆಹಲಿ ಫೈಟ್ ಮತ್ತೊಂದು ಟಾಕ್ ವಾರ್ ಗೆ ವೇದಿಕೆಯಾಗಿದೆ, ಅಮಿತ್ ಶಾ ಭೇಟಿಗೆ ಯತ್ನಾಳ್ ಟೀಂ ದೆಹಲಿಯಲ್ಲಿ ಬೀಡು ಬಿಟ್ಟಿದ್ದು ರಣತಂತ್ರ ರೂಪಿಸ್ತಿದ್ದಾರೆ. ಈ ಮಧ್ಯೆ ಯತ್ನಾಳ್ ಬಣಕ್ಕೆ ವಿಜಯೇಂದ್ರ ಪರವಾಗಿ ನಿಂತಿರೋ ರೇಣುಕಾಚಾರ್ಯ ಬಣ ಟಾಂಗ್ ಕೊಟ್ಟಿದ್ದು ಯತ್ನಾಳ್ ಸೇರಿ ಟೀ ಸದಸ್ಯರ ನಿಜ ಬಣ್ಣ ಬಯಲು ಮಾಡೋದಾಗಿ ಸವಾಲೆಸೆದಿದೆ. ಇನ್ನು ರೇಣುಕಾಚಾರ್ಯ ಬಣ ಮುಂದಿನ ಬುಧವಾರ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು ತಾವು ದೆಹಲಿ ಪರೇಡ್ ಗೆ ಪ್ಲಾನ್ ಮಾಡಿದ್ದಾರೆ…..
ಜಾತ್ರೆಯ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಸೂತಕದ ಛಾಯೆ: ಥಿನ್ನರ್ ಸೇವಿಸಿ ಬಾಲಕ ದುರ್ಮರಣ!
ರಾಜ್ಯ ಬಿಜೆಪಿಯ ಬಣ ಬಡಿದಾಟ ಒಂತರ ಸೀರಿಯಲ್ ರಾಮಾಯಣದಂತಿದೆ ಒಬ್ಬರ ಮೇಲೊಬ್ರು ತಂತ್ರ , ಕುತಂತ್ರ, ಪ್ರತಿತಂತ್ರ, ದೂರು, ಪ್ರತಿದೂರು, ಸವಾಲು ಅನ್ನೋ ತರ ಆಟ ಆಡ್ತಿದ್ದಾರೆ. ವಿಜಯೇಂದ್ರ ವಿರುದ್ಧ ಹೈಕಮಾಂಡ್ ಗೆ ದೂರು ಕೊಡಲು ಯತ್ನಾಳ್ ಟೀಂ ದೆಹಲಿಯಲ್ಲಿ ಬೀಡು ಬಿಟ್ಟಿದ್ದು ಕೇಂದ್ರ ನಾಯಕರನ್ನ ಭೇಟಿಯಾಗ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನ ಭೇಟಿಯಾಗಲೇ ಬೇಕು ಅಂತ ರಾಜ್ಯದ ಹಿರಿಯ ನಾಯಕರು ಸೇರಿದಂತ ಹಲವು ನಾಯಕರ ಮೂಲಕ ಒತ್ತಡ ಹೇರ್ತಿದ್ದಾರೆ…
ದೆಹಲಿಯಲ್ಲಿ ಮಾತನಾಡಿದ ಮಾಜಿ ಸಂಸದ ಜಿಎಂ ಸಿದ್ದೇಶ್ವರ್ ನಾವು ವಿಜಯೇಂದ್ರ ವಿರುದ್ಧ ನಮ್ಮ ಹೈಕಮಾಂಡ್ ನಾಯಕರಿಗೆ ದೂರು ಕೊಟ್ಟಿದ್ದೀವಿ. ಈಗಾಗ್ಲೆ ಹಲವು ನಾಯಕರನ್ನು ಭೇಟಿಯಾಗಿ ರಾಜ್ಯದ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೀವಿ, ಆದಷ್ಟು ಬೇಗ ಶುಭ ಸುದ್ದಿ ಹೊರಬರುತ್ತೆ. ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನದಿಂದ ಸದ್ಯದಲ್ಲೇ ಕೆಳಗಿಳಿಯುತ್ತಾರೆ ನಮ್ಮ ಹೋರಾಟಕ್ಕೆ ಜಯ ಸಿಗುತ್ತೆ, ನಮ್ಮ ಹಿರಿಯ ಮತ್ತಷ್ಟು ನಾಯಕರನ್ನು ಭೇಟಿಯಾಗಿ ಇನ್ನು 2 ದಿನ ದೂರು ಕೊಡ್ತೀವಿ. ವಿಜಯದೊಂದಿಗೆ ರಾಜ್ಯಕ್ಕೆ ಬರ್ತೀವಿ ಎಂದಿದ್ದಾರೆ ಸಿದ್ದೇಶ್ವರ್….
ದೆಹಲಿಯಲ್ಲಿ ಯತ್ನಾಳ್ ಟೀಂ ಹೈಕಮಾಂಡ್ ಭೇಟಿ ಮಾಡ್ತಿರೋದಕ್ಕೆ ವಿಜಯೇಂದ್ರ ಪರವಾದ ರೇಣುಕಾಚಾರ್ಯ ಟೀಂ ಗರಂ ಆಗಿದೆ. ಸದಾಶಿವನಗರದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮನೆಯಲ್ಲಿ ಸಭೆ ನಡೆಸಿದ ರೇಣು ಟೀಂ ಯತ್ನಾಳ್ ಸೇರಿ ಅವರ ಬಣದ ನಾಯಕರ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಮಾತನಾಡಿದ ರೇಣುಕಾಚಾರ್ಯ
ಯತ್ನಾಳ್ ಬಸ್ ನಲ್ಲಿ ಟಿಕೆಟ್ ಹರಿತಿದ್ದೆ, ಟಿಪ್ಪರ್ ಡ್ರೈವರ್ ಆಗಿದ್ದ, ನಿನಗೆ ಸಾವಿರಾರು ಕೋಟಿ, ಸಕ್ಕರೆ ಕಾರ್ಖಾನೆ ಹೇಗೆ ಬಂತು, ನಿನ್ನ ಭ್ರಷ್ಟಾಚಾರ ಹೇಗೆ ಬಂತು ಹೇಳಬೇಕಾ. ರಮೇಶ್ ಜಾರಕಿಹೊಳಿ ಮನೆಯಲ್ಲಿ ಅಣ್ಣ ತಮ್ಮಂದಿರು ಮಕ್ಕಳು ಎಲ್ಲಾ ರಾಜಕೀಯ ಮಾಡ್ತಿದ್ದಾರೆ ನೀವು ಕುಟುಂಬ ರಾಜಕಾರಣದ ಬಗ್ಗೆ ಮಾತಾಡ್ತೀರಾ. ನೀವೆಲ್ಲಾ ಯಾರು ಬಿಜೆಪಿಯನ್ನು ಕಟ್ಟಿ ಬೆಳೆಸಿಲ್ಲ, ಪಕ್ಷಕ್ಕೆ ನಿಮ್ಮ ಕೊಡುಗೆ ಏನು ಇಲ್ಲ. ನಿಮ್ಮನ್ನೆಲ್ಲಾ ಗೆಲ್ಲಿಸಿ MLA ಮಾಡಿದ್ದೇ ಯಡಿಯೂರಪ್ಪ ,ನಿಮ್ಮೆಲ್ಲಾ ಹಗರಣಗಳನ್ನು ಬಿಚ್ಚಿಡಬೇಕಾಗುತ್ತೆ ಎಚ್ಚರ ಅಂತ ಯತ್ನಾಳ್ ಟೀಂಗೆ ಸವಾಲೆಸೆದಿದ್ದಾರೆ ರೇಣುಕಾಚಾರ್ಯ….
ಇನ್ನು ಯತ್ನಾಳ್ ಟೀಂ ನ ದೆಹಲಿ ಭೇಟಿ ಬಗ್ಗೆ ರೇಣು ಟೀಂ ವ್ಯಂಗ್ಯವಾಡಿದೆ ದೆಲ್ಲಿಗೆ ಹೋಗಿ ಬರೋದು ಅವರನ್ನು ಭೇಟಿ ಮಾಡ್ದೊ ಇವರನ್ನು ಭೇಟಿ ಮಾಡ್ದೊ ಅಂತ ಸುಳ್ಳು ಹೇಳ್ತಿದ್ದಾರೆ. ಯಾರನ್ನಾದ್ರು ಭೇಟಿ ಆದ್ರಾ, ಪೋಟೊ ಹಾಕುದ್ರಾ ನೀವು, ಅವರು ಯಾವ ಹೈಕಮಾಂಡ್ ನಾಯಕರನ್ನು ಭೇಟಿ ಆಗಲ್ಲ ಎಲ್ಲವು ಷಡ್ಯಂತ್ರ. ಮುಂದಿನ ಬುಧವಾರ ನಾವು ಮಾಜಿ ಶಾಸಕರು, ಸಚಿವರು ಸೇರಿ 100 ಕ್ಕೂ ಹೆಚ್ಚು ಜನ ಸಭೆ ಮಾಡ್ತೀವಿ, ಯತ್ನಾಳ್ ಟೀಂನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು, ಅಲ್ಲಿವರೆಗು ನಾವು ಬಿಡಲ್ಲ. ನಾವು ದೆಹಲಿಗೆ ಹೋಗಬೇಕು ಅಂತ ತೀರ್ಮಾನ ಮಾಡಿದ್ದೀವಿ ಯತ್ನಾಳ್ ಟೀಂ ವಿರುದ್ಧ ದೂರು ಕೊಡ್ತೀವಿ ಅಂತ ಕಿಡಿ ಕಾರಿದ್ದಾರೆ ರೇಣುಕಾಚಾರ್ಯ ಟೀಂ….
ಒಟ್ನಲ್ಲಿ ರಾಜ್ಯ ಬಿಜೆಪಿಯ ಬಂಡಾಯದ ಭೇಗುದಿ ಈಗ ದೆಹಲಿಯಲ್ಲೇ ಇತ್ಯರ್ಥ ವಾಗಬೇಕು ಅನ್ನೋ ಹಂತಕ್ಕೆ ಬಂದು ನಿಂತಿದೆ. ಯತ್ನಾಳ್ ಟೀಂ ದೆಹಲಿಯಲ್ಲಿ ರಣತಂತ್ರ ರೂಪಿಸ್ತಾ ವಿಜಯದ ಹುಮ್ಮಸ್ಸಿನಲ್ಲಿದ್ರೆ, ರೇಣುಕಾಚಾರ್ಯ ಟೀಂ ಯತ್ನಾಳ್ ಟೀಂ ಹೈಕಮಾಂಡ್ ಭೇಟಿ ಅನ್ನೋದೇ ಒಂದು ಸುಳ್ಳು ಕಥೆ. ಇವರು ಯಾರನ್ನು ಭೇಟಿಯಾಗಲ್ಲ ಎಲ್ಲಾ ಕಥೆ ಹೊಡಿತಾರೆ ಅಂತ ಟಾಂಗ್ ಕೊಟ್ಟಿದೆ, ರೇಣು ಟೀಂ ನ ಶಕ್ತಿ ಪ್ರದರ್ಶನಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು ಮುಂದೇನಾಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ….