ಬೆಳಗಾವಿ : ನಾನು ಮೊದಲು ಏನು ಮಾತಾಡಿದ್ದೇನೆ ನನಗೆ ಗೊತ್ತಾಗುತ್ತಿಲ್ಲ. ನಾನು ಮಾತಾಡಿದ್ದರಲ್ಲಿ ಅವರ ಹೆಸರಿದ್ದರೆ ತೋರಿಸಿಕೊಡಿ. ಅಕ್ಕಾಬಾಯಿ ಎಂದರೆ ಅವರೇ ಅಂತ ನೀವ್ಯಾಕೆ ತಿಳಿದುಕೊಳ್ಳುತ್ತೀರಿ. ಎಕ್ಸಟ್ರಾ ಪೆಗ್ ಎಂದರೆ ಎನರ್ಜಿ ಡ್ರಿಂಕ್ ಎನ್ನುವ ಮೂಲಕ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ವಿಚಾರದಲ್ಲಿ ಪೆಗ್ಗೆ ಮಾಜಿ ಶಾಸಕ ಸಂಜಯ್ ಪಾಟೀಲ್ ಸಮರ್ಥನೆ ನೀಡಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಕನಸು ಸಾಕಾರಗೊಳಿಸಿದ ವಿದ್ಯಾರ್ಥಿಗಳು- ಉದಯಕುಮಾರ ಯಲಿವಾಳ
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಚುನಾವಣೆ ಸೋಲಿನ ಭಯದಿಂದ ಅವರಿಗೆ ಹೆದರಿಕೆ ಶುರುವಾಗಿದೆ. ನನ್ನ ತಾಯಿ ಮಹಿಳೆ, ಮಗಳು, ಹೆಂಡತಿಯೂ ಮಹಿಳೆ. ಭಾರತದ ಸಂಸ್ಕೃತಿ ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎನ್ನುವುದನ್ನು ಕಲಿಸಿದೆ ಎಂದು ಹೇಳಿದರು.
ನಾನು ತಪ್ಪು ಮಾಡಿದ್ದರೆ ಚುನಾವಣಾ ಆಯೋಗವಿದೆ, ಪೊಲೀಸರಿದ್ದಾರೆ. ಅಲ್ಲಿ ಹೋಗಿ ನೀವು ದೂರು ನೀಡಿ. ನಾನು ತಪ್ಪು ಮಾಡಿದ್ರೆ ಶಿಕ್ಷೆ ಆಗಲಿ. ಯಾರದ್ದೋ ಮನೆಗೆ ಹೋಗಿ ರಾತ್ರಿ ವೇಳೆ ಪ್ರತಿಭಟನೆ ಮಾಡೋದು ಎಷ್ಟು ಸರಿ?. ನಾನು ಹಾರ್ಟ್ ಪೇಶೆಂಟ್ ಇದ್ದೇನೆ. ಬೈಪಾಸ್ ಸರ್ಜರಿ ಸಹ ಆಗಿದೆ. ಹಾರ್ಟ್ ವೀಕ್ ಇದ್ದರೆ ಗತಿ ಏನು? ಅವರು ಹೀಗೆ ಮಾಡೋದು ಎಷ್ಟು ಸರಿ? ಎಂದು ಸಂಜಯ್ ಪಾಟೀಲ್ ಪ್ರಶ್ನಿಸಿದರು.
ಪೃಥ್ವಿ ಸಿಂಗ್ ಮೇಲೆ ಹಲ್ಲೆ ಆಯ್ತು. ಈ ಬಗ್ಗೆ ನಾವು ದೂರು ಕೊಟ್ಟರೂ ಏನೂ ಆಗಲಿಲ್ಲ. ಸಚಿವೆಯವರು ತಮ್ಮ ಸ್ವಾರ್ಥಕ್ಕಾಗಿ ಇಲಾಖೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಬಿಜೆಪಿಯವರು ನಾಲಾಯಕರು ಅಂತಾರೆ. ಹಾಗಾಗಿ, ಇದನ್ನು ಸ್ಪೋರ್ಟಿವ್ ಆಗಿ ತೆಗೆದುಕೊಳ್ಳಬೇಕು. ಇದು ಚುನಾವಣೆ ನೀವು ಮಾತಾಡ್ತಿರಿ, ನಾವು ಮಾತಾಡ್ತಿವಿ. ಬೈ ಮಿಸ್ಟೇಕ್ ಏನಾದ್ರು ಆಗಿರಬಹುದು. ಹೋರಾಟಕ್ಕೆ ಒಂದು ಪ್ರಕ್ರಿಯೆ ಇದೆ. ಅದನ್ನು ಬಿಟ್ಟು ಮನೆಬಾಗಿಲಿಗೆ ಬಂದು ಕುಳಿತು ಪ್ರತಿಭಟನೆ ಮಾಡೋದು ಎಷ್ಟು ಸರಿ? ಎಂದು ಸಂಜಯ್ ಪಾಟೀಲ್ ಪ್ರಶ್ನಿಸಿದರು.
ನಾನು ಅವರ ಹೆಸರು ತೆಗೆದುಕೊಂಡಿದ್ದೇನಾ. ಹೆಸರು ತೆಗೆದುಕೊಂಡಿದ್ದರೆ ನೀವೇ ಇಲ್ಲೆ ಶಿಕ್ಷೆ ಕೊಡಿ. ಯಾರಿಗೂ ನಾನು ಅಪಮಾನ ಮಾಡಿಲ್ಲ. ಅವರದ್ದೇ ಸರ್ಕಾರ ಇದೆ. ಸಿಬಿಐ ತನಿಖೆ ಮಾಡಿಸಲಿ. ನಾನು ಅವರ ಬಗ್ಗೆ ಮಾತಾಡಿಲ್ಲ, ನಮ್ಮ ಮನೆಯಲ್ಲಿರುವರ ಬಗ್ಗೆ ನಾನು ಮಾತಾಡಿರುವೆ. ವಿಡಿಯೋ ಪೂರ್ತಿ ಪರಿಶೀಲನೆ ಮಾಡಿ ಎಂದು ಸಂಜಯ್ ಪಾಟೀಲ್ ಹೇಳಿದರು. ಬಿಜೆಪಿ ಕಾರ್ಯಕ್ರಮಕ್ಕೆ ಹೋಗಬೇಡಿ ಎಂದು ಅವರು ತಡೆಯುತ್ತಿದ್ದಾರೆ ಅಂತ ಹೇಳಿದ್ದೇನೆ. ಗೋಹತ್ಯೆ ಕಾನೂನು ಹಾಗೂ ಮತಾಂತರ ನಿಷೇಧ ಕಾನೂನಿಗೆ ಸಪೋರ್ಟ್ ಮಾಡಲಿ ಎಂದು ಹೇಳಿರುವೆ. ವಾತಾವರಣ ಕೆಡಿಸುವ ಕೆಲಸ ಆಗ್ತಿದೆ. ಅವರಿಗೆ ನಾನು ಮಾತಾಡಿಲ್ಲ. ಇದರ ಅಡ್ವಾಂಟೇಜ್ ತೆಗೆದುಕೊಳ್ಳುವ ಕೆಲಸವನ್ನು ಅವರು ಮಾಡ್ತಿದ್ದಾರೆ ಎಂದು ಆರೋಪಿಸಿದರು.
ಸಂಜಯ್ ಪಾಟೀಲ್ ಹೇಳಿಕೆ ಬಗ್ಗೆ ಪ್ರಿಯಾಂಕಾ ಜಾರಕಿಹೊಳಿ, ಅಂಜಲಿ ನಿಂಬಾಳ್ಕರ್ ಯಾಕೆ ಮಾತಾಡ್ತಿಲ್ಲ. ನನ್ನ ವಿರುದ್ಧ ಅವರು ಯಾಕೆ ಮಾತಾಡ್ತಿಲ್ಲ. ಇವರು ಸ್ವಂತ ಲಾಭ ತೆಗೆದುಕೊಳ್ಳಲು ನೋಡ್ತಿದ್ದಾರೆ. ಅಂಜಲಿ ಕಾಂಗ್ರೆಸ್ನಲ್ಲಿದ್ದರೂ ನಾನು ಅವರಿಗೆ ತಂಗಿ ಅಂತ ಕರೆಯುತ್ತೇನೆ. ಮಹಿಳೆಯರ ಬಗ್ಗೆ ನಾನು ಕೆಟ್ಟದಾಗಿ ಮಾತಾಡಿದ್ದೇನೆ ಎಂದು ಅಂಜಲಿ ನಿಂಬಾಳ್ಕರ್, ಪ್ರಿಯಾಂಕಾ ಜಾರಕಿಹೊಳಿ ಹೇಳಲಿ ನೋಡೋಣ. ಜಗತ್ತಿನಲ್ಲಿ ಒಬ್ಬರೇ ಮಹಿಳೆಯರಿದ್ದಾರಾ? ಎಂದು ಪ್ರಶ್ನಿಸಿದರು.
ನನ್ನ ತಾಯಿಗೆ 90 ವರ್ಷ. ಅವರು ಬೆಡ್ನಲ್ಲಿದ್ದಾರೆ. ತಾಯಿಗೆ ಹೆಚ್ಚು ಕಮ್ಮಿಯಾದರೆ ಯಾರು ಜವಾಬ್ದಾರಿ?. ರಾಜಕೀಯ ಲಾಭ ತೆಗೆದುಕೊಳ್ಳಲು ಇದೊಂದು ಷಡ್ಯಂತ್ರ. ಘಾಸಿ ಆಗುವ ರೀತಿ ನಾನು ಏನೂ ಮಾತನಾಡಿಲ್ಲ. ಚುನಾವಣೆಗೆ ಇನ್ನೂ 20 ದಿನ ಇದೆ. ನೀವು ಮಾತಾಡ್ತಿರಿ, ನಾವು ಮಾತಾಡ್ತಿವಿ ಎಂದು ಹೇಳಿದರು.
ನಿಮ್ಮ ಮನೆಯ ಮುಂದೆ ಬಂದು ಪ್ರತಿಭಟನೆ ಮಾಡಿದ್ದಕ್ಕೆ ಕಾನೂನು ಹೋರಾಟ ಮಾಡ್ತಿರಾ? ಎಂಬ ಪ್ರಶ್ನೆಗೆ, ಕೋರ್ಟ್ನಲ್ಲಿ ಕ್ರಿಮಿನಲ್ ಕೇಸ್ ಮಾಡ್ತಿನಿ. ಎಲ್ಲಾ ಸಂಪೂರ್ಣ ವಿಡಿಯೋ ರೆಕಾರ್ಡ್ ಇದೆ. ಕೋರ್ಟ್ನಲ್ಲಿ ಕ್ರಿಮಿನಲ್ ಕೇಸ್ ದಾಖಲು ಮಾಡ್ತಿನಿ ಎಂದು ಸಂಜಯ್ ಪಾಟೀಲ್ ಹೇಳಿದರು.