ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನಡುವಿನ ಸೂಕ್ಷ್ಮ ಸಭೆಯು ವಿಷಮ ಪರಿಸ್ಥಿತಿಗೆ ಬದಲಾಗಿದೆ. ಇದಕ್ಕೆ ಕಾರಣ ಜಿನ್ಪಿಂಗ್ ಅವರನ್ನು ಬೈಡನ್ ‘ಸರ್ವಾಧಿಕಾರಿ’ ಎಂದು ಕರೆದಿರುವುದು. ಕ್ಸಿ ಜಿನ್ಪಿಂಗ್ ವಿರುದ್ಧ ಬೈಡನ್ ಅವರು ಸರ್ವಾಧಿಕಾರಿ ಪರ ಬಳಸಿರುವುದು ಇದು ಎರಡನೇ ಸಲವಾಗಿದೆ. ಇದು ಚೀನಾ ಅಸಮಾಧಾನಕ್ಕೆ ಕಾರಣವಾಗಿದೆ.
ಬೈಡನ್ ಹೇಳಿಕೆಯು ‘ತೀವ್ರ ಅಸಂಬದ್ಧ ಮತ್ತು ಬೇಜವಾಬ್ದಾರಿಯಿಂದ ಕೂಡಿದೆ’ ಎಂದು ಕಿಡಿಕಾರಿದೆ. ಸ್ಯಾನ್ ಫ್ರಾನ್ಸಿಸ್ಕೋದ ದಕ್ಷಿಣದಲ್ಲಿನ ತಮ್ಮ ಫಿಲೋಲಿ ಎಸ್ಟೇಟ್ಗೆ ಆಗಮಿಸಿದ ಕ್ಸಿ ಜಿನ್ಪಿಂಗ್ ಅವರನ್ನು ಸ್ವಾಗತಿಸಿದ್ದ ಬೈಡನ್, ಅವರೊಂದಿಗೆ ಏಷ್ಯಾ- ಪೆಸಿಫಿಕ್ ಆರ್ಥಿಕ ಸಹಕಾರ (ಎಪಿಇಸಿ) ವೇದಿಕೆ ಕಡೆಗೆ ತೆರಳಿದ್ದರು.
https://ainlivenews.com/what-happens-if-tea-coffee-is-given-to-children/
ಸಭೆಯ ಅಂತ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೈಡನ್, ‘ಕ್ಸಿ ಜಿನ್ಪಿಂಗ್ ಅವರನ್ನು ಸರ್ವಾಧಿಕಾರಿ ಎಂದು ಈಗಲೂ ಪರಿಗಣಿಸುತ್ತೀರಾ?’ ಎಂಬ ಪ್ರಶ್ನೆಗೆ, “ಹೌದು, ಅವರು ಸರ್ವಾಧಿಕಾರಿ” ಎಂದು ಬೈಡನ್ ಪ್ರತಿಕ್ರಿಯೆ ನೀಡಿದ್ದಾರೆ. “ಅವರು ಒಬ್ಬ ಸರ್ವಾಧಿಕಾರಿ. ಅವರು ಕಮ್ಯುನಿಸ್ಟ್ ದೇಶವನ್ನು ನಡೆಸುತ್ತಿರುವ ವ್ಯಕ್ತಿ. ಚೀನಾ ಸರ್ಕಾರವು ನಮಗಿಂತ ಸಂಪೂರ್ಣ ವಿಭಿನ್ನ” ಎಂದು ಹೇಳಿದ್ದಾರೆ.