ಮಹದೇವಪುರ: ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗು ಇತರೆ ರಾಸಾಯನಿಕ ಪದಾರ್ಥಗಳಿಂದ ತಯಾರಿಸಿದ ಗಣಪತಿ ಮೂರ್ತಿಗಳನ್ನು ವಿಸರ್ಜಿಸುವುದರಿಂದ ಕೆರೆ, ಬಾವಿಗಳು ಕಲುಷಿತಗೊಳ್ಳುತ್ತಿವೆ ಎಂದು ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅಭಿಪ್ರಾಯಪಟ್ಟರು.
ಕಿತ್ತಗನೂರು ಪಂಚಾಯಿತಿಯ 2024-25 ನೇ ಸಾಲಿನ ಮೊದಲನೇ ಗ್ರಾಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು .
ಇತ್ತೀಚಿನ ದಿನಗಳಲ್ಲಿ ಆಡಂಬರ, ಆಧುನಿಕತೆಯ ಹೆಸರಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ಗಣಪತಿ ಮೂರ್ತಿಗಳನ್ನು ತಯಾರಿಸಿ, ಆರೋಗ್ಯಕರವಲ್ಲದ ರಾಸಾಯನಿ ಬಣ್ಣ ಬಳಿದು ಮಾರಾಟ ಮಾಡಲಾಗುತ್ತದೆ. ಅಂತಹ ಮೂರ್ತಿಗಳನ್ನು ತಂದು ಪೂಜಿಸಿ ಕುಡಿಯುವ ಜಲಚರ ಪ್ರಾಣಿಗಳಿರು ಬಾವಿ,ಕೆರೆ, ಕುಂಟೆಗಳಲ್ಲಿ ವಿಸರ್ಜಿಸಲಾಗುತ್ತಿದೆ. ಆದರಿಂದ ಗೌರಿ-ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಮನವಿ ಮಾಡಿದರು.
ಕಿತ್ತಗನೂರು ಗ್ರಾಮ ಪಂಚಾಯಿತಿ ನಗರಕ್ಕೆ ಹೊಂದಿಕೊಂಡಿರುವುದರಿಂದ ನಗರ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದರು. ಪಂಚಾಯಿತಿ ವ್ಯಾಪ್ತಿಯಲ್ಲಿ ಹತ್ತಾರು ಬಡವಣೆಗಳು ನಿರ್ಮಾಣ ಮಾಡಿದ್ದು ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳ ಸಮರ್ಪಕವಾಗಿ ನೀಡದೇ ಜನರು ಜೈನ ಪ್ರತಿನಿಧಿಗಳ ಮೊರೆ ಹೋಗಿದ್ದಾರೆ ಎಂದರು.
ಮಹದೇವಪುರ ಗ್ರಾಮಾಂತರ ಪ್ರದೇಶಗಳಲ್ಲಿ ಕಳೆದ ಒಂದುವರೆ ದಶಕಗಳಿಂದ ಅರವಿಂದ ಲಿಂಬಾವಳಿಯವರ ಇದ್ದಾಗ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿದೆ.ಇನ್ನೂ ಹೋಗಬೇಕಾದ ಕೆಲಸಗಳು ಇವೆ ಟಾಸ್ಕ್ ಫೋರ್ಸ್ ಸಭೆಯಲ್ಲಿ ಎಲ್ಲಾವನ್ನೂ ಚರ್ಚಿಸಿ ಒಂದೊಂದಾಗಿ ಮಾಡುವುದಾಗಿ ಭರವಸೆ ನೀಡಿದರು.
ಇಲ್ಲಿ ಸಾಕಷ್ಟು ಕುಂದುಕೊರತೆಗಳ ದೂರುಗಳು ಬಂದಿದ್ದು ಪ್ರಮುಖವಾಗಿ ಕುಡಿಯುವ ನೀರು,ರಸ್ತೆ,ಕಸ, ಸಮಾಧಿಗಳಿಗೆ ಜಾಗ, ಸಮುದಾಯ ಭವನ ನಿರ್ಮಾಣ ಇದರ ಬಗ್ಗೆ ಕೇಳಿದ್ದಾರೆ ಆದಷ್ಟು ಬೇಗ ಸಮಸ್ಯೆಗಳ ನಿವಾರಣೆ ಮಾಡುವ ಭರವಸೆಯನ್ನು ನೀಡಿದ್ದೆನೆ ಎಂದರು.
ಪಂಚಾಯಿತಿಗಳ ಆಶ್ರಯದಲ್ಲಿ ವಿಕಲಚೇತನರಿಗೆ ಸಹಾಯ ಧನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಸಂತಕುಮಾರ್, ಪಿಡಿಒ ನರ್ಮದಾ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಅಂಗನವಾಡಿ,ಮತ್ತು ಆಶಾ ಕಾರ್ಯಕರ್ತೆಯರು ಸೇರಿದಂತೆ ಗ್ರಾ.ಪಂ ಸದಸ್ಯರು ಗ್ರಾಮಸ್ಥರು ಪಂಚಾಯತಿ ಅಧಿಕಾರಿಗಳು ಭಾಗವಹಿಸಿದ್ದರು