ಬಳ್ಳಾರಿ:- ಇಂದು ವಿಶ್ವಕಪ್ ಕ್ರಿಕೇಟ್ ಫೈನಲ್ ಪಂದ್ಯವಳಿ ಹಿನ್ನೆಲೆ ಟೀಮ್ ಇಂಡಿಯಾಗೆ ಕ್ರೀಡಾ ಸಚಿವ ನಾಗೇಂದ್ರ ಅವರು ಶುಭ ಕೋರಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಟೀಂ ಇಂಡಿಯಾ ಗೆದ್ದು ಬರಲಿ, ೩ನೇ ಬಾರಿ ವಿಶ್ವಕಪ್ ಭಾರತ ಮೂಡಿಗೆರಿಸಿಕೊಳ್ಳಲಿ ಎಂದು ಹೇಳುವ ಮೂಲಕ ಸಮಸ್ತ ೭ ಕೋಟಿ ಕನ್ನಡಿಗರ ಪರವಾಗಿ ಸಚಿವರು ಶುಭಾಶಯಗಳನ್ನು ತಿಳಿಸಿದ್ದಾರೆ.
ಈಗಾಗಲೇ ೯ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಭಾರತ ತಂಡ, ಇಂದು ಅಂತಿಮ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ನೀಡಲಿ. ಉತ್ತಮ ಪ್ರದರ್ಶನ ನೀಡಿ, ವಿಶ್ವಕಪ್ ಗೆದ್ದು ಬರಲಿ ಎಂದು ಸಚಿವ ನಾಗೇಂದ್ರ ಹಾರೈಸಿದ್ದಾರೆ.