ಲಖನೌ: ಕಾಂಗ್ರೆಸ್ ಪಕ್ಷದ “ಲಡ್ಕಿ ಹೂಂ, ಲಡ್ ಸಕ್ತೀ ಹೂಂ (ನಾನು ಹುಡುಗಿ, ಹೋರಾಡಬಲ್ಲೆ)” ಚುನಾವಣಾ ಪ್ರಚಾರದ ಭಾಗವಾಗಿ ಉತ್ತರ ಪ್ರದೇಶದಲ್ಲಿಕಾಂಗ್ರೆಸ್ ನಾಯಕರೊಬ್ಬರು ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿ ಕಾಲ್ತುಳಿತವಾಗುವಂತ ಸನ್ನಿವೇಶ ಕಾಣಿಸಿತ್ತು. ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ಮ್ಯಾರಥಾನ್‌ನಲ್ಲಿ ನೂರಾರು ಮಹಿಳೆಯರು ಮತ್ತು ಹದಿಹರೆಯದ ಹುಡುಗಿಯರು ಮಾಸ್ಕ್ ಗಳಿಲ್ಲದೆ ಕಾಣಿಸಿಕೊಂಡಿರುವುದು ದೃಶ್ಯಗಳಲ್ಲಿ ಕಾಣಿಸಿದೆ. ಹೆಚ್ಚುತ್ತಿರುವ ಕೊವಿಡ್-19 ) ಪ್ರಕರಣಗಳ ಮಧ್ಯೆ ಮ್ಯಾರಥಾನ್ ಭಾಗವಹಿಸುವವರ ಬೃಹತ್ ಗುಂಪು ಕಂಡುಬಂದಿದ್ದು ಹೆಚ್ಚಿನವರು ಮಾಸ್ಕ್ ಧರಿಸದೆ ರಸ್ತೆಗಿಳಿದಿದ್ದರು.
ಮ್ಯಾರಥಾನ್ ಪ್ರಾರಂಭಿಸಿದಾಗ, ಮುಂಭಾಗದಲ್ಲಿದ್ದ ಕೆಲವು ಮಹಿಳೆಯರು ಮುಗ್ಗರಿಸಿ ನೆಲಕ್ಕೆ ಬಿದ್ದರು. ಹಿಂದಿನಿಂದ ಹೆಚ್ಚಿನ ಜನಸಂದಣಿಯು ಮುಂಭಾಗದಲ್ಲಿದ್ದವರನ್ನು ತಳ್ಳಿದ್ದರಿಂದ ಅನಾಹುತ ಸಂಭವಿಸುವಂತೆ ಭಯದ ವಾತಾವರಣ ಸೃಷ್ಟಿಯಾಗಿತ್ತು. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಈ ಕಾರ್ಯಕ್ರಮವನ್ನು ಆಯೋಜಿಸಿದ್ದ ಕಾಂಗ್ರೆಸ್ ನಾಯಕಿ ಮತ್ತು ಬರೇಲಿ ಮಾಜಿ ಮೇಯರ್ ಸುಪ್ರಿಯಾ ಅರೋನ್, ಆತಂಕಪಡುವ ಅಗತ್ಯವಿಲ್ಲ.

#WATCH | Stampede occurred during Congress' 'Ladki hoon, Lad Sakti hoon' marathon in Bareilly, Uttar Pradesh today pic.twitter.com/nDtKd1lxf1
— ANI UP/Uttarakhand (@ANINewsUP) January 4, 2022
“ಸಾವಿರಾರು ಜನಸಂದಣಿಯಲ್ಲಿ ವೈಷ್ಣೋದೇವಿಯ ಬಳಿಗೆ ಹೋದರು. ಅದರ ಬಗ್ಗೆ ಏನಂತೀರಿ? ನೋಡಿ, ಇದು ತುಂಬಾ ಮಾನವೀಯ ವಿಷಯ. ಇವರು ಶಾಲಾಮಕ್ಕಳು ಮತ್ತು ಅವರು ಸ್ವಲ್ಪ ಸಮಯದವರೆಗೆ ಹೊರಬರಲು ಬಯಸುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಯಾರಿಗಾದರೂ ನೋವಾಗಿದ್ದರೆ ಕಾಂಗ್ರೆಸ್ ಪರವಾಗಿ ನಾನು ಕ್ಷಮೆಯಾಚಿಸಲು ಬಯಸುತ್ತೇನೆ ಎಂದು ಆರೋನ್ ಹೇಳಿದರು.
ಕೊವಿಡ್-19 ಮತ್ತು ವೇಗವಾಗಿ ಹರಡುತ್ತಿರುವ ಒಮಿಕ್ರಾನ್ ರೂಪಾಂತರವು ಪಂಜಾಬ್ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳ ಚುನಾವಣೆಗಳ ಮೇಲೆ ಪರಿಣಾಮದ ಮೋಡ ಆವರಿಸುವಂತೆ ಮಾಡಿದೆ. ಅಲ್ಲಿ ರಾಜಕೀಯ ಪಕ್ಷಗಳು ರ್ಯಾಲಿಗಳನ್ನು ನಡೆಸುವುದನ್ನು ಮುಂದುವರೆಸಿವೆ. ಕಟ್ಟುನಿಟ್ಟಾದ ಕೊವಿಡ್-19 ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಿ ಚುನಾವಣೆಗಳನ್ನು ನಡೆಸಬೇಕೆಂದು ರಾಜಕೀಯ ಪಕ್ಷಗಳಲ್ಲಿ ಚುನಾವಣಾ ಆಯೋಗ ಹೇಳಿದೆ.