ಸವದತ್ತಿಯ ಜೋಗುಳ ಬಾವಿಯಲ್ಲಿ ಕಾಲು ಜಾರಿ ಬಿದ್ದು ಮಹಿಳೆ ಸಾವು

ಬೆಳಗಾವಿ: ಸವದತ್ತಿಯ ಜೋಗುಳ ಬಾವಿಯಲ್ಲಿ ಕಾಲು ಜಾರಿ ಬಿದ್ದು ಮಹಿಳೆ ಸಾವನ್ನಪ್ಪಿದ್ದಾರೆ. ತುಮಕೂರು ಮೂಲದ ಗೌರಮ್ಮ (35) ಸಾವನ್ನಪ್ಪಿದ್ದಾರೆ.  ಧಾರವಾಡದಲ್ಲಿ ಕೆಲಸ ಮಾಡುತ್ತಿದ್ದ ಗೌರಮ್ಮ, ಐವರ ಜೊತೆ ಬೆಳಗಾವಿ ಜಿಲ್ಲೆ ಸವದತ್ತಿ ಯಲ್ಲಮ್ಮದೇವಿ ದರ್ಶನಕ್ಕೆ ಬಂದಿದ್ದರು. ಈ ವೇಳೆ ಜೋಗುಳ ಬಾವಿಗೆ ತೆರಳಿದ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ಸದ್ಯ ಅಗ್ನಿಶಾಮಕ ಸಿಬ್ಬಂದಿ ಗೌರಮ್ಮ ಮೃತದೇಹ ಹೊರತೆಗೆದಿದ್ದಾರೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಮನೆಗೆ ಡಿಕ್ಕಿ ಹೊಡೆದ ಪೊಲೀಸ್ ಅಧಿಕಾರಿ … Continue reading ಸವದತ್ತಿಯ ಜೋಗುಳ ಬಾವಿಯಲ್ಲಿ ಕಾಲು ಜಾರಿ ಬಿದ್ದು ಮಹಿಳೆ ಸಾವು