ಕೋಲಾರ: ಬಡ್ಡಿ ಹಣ ಕಟ್ಟಲಾಗದೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ವಿಡಿಯೋ ಮಾಡಿದ್ದು, ವೀಡಿಯೋದಲ್ಲಿ ಸಾಲ ನೀಡಿದ್ದ ವೀಣಾ ಎಂಬಾಕೆ ಮನಬಂದಂತೆ ಬಡ್ಡಿ ಹಣ ಕೇಳುತ್ತಿದ್ದಾಳೆ ಎಂದು ಆರೋಪ ಮಾಡಿ ಮಾತ್ರೆ ಕುಡಿದು ಸಾವನಪ್ಪಿದ್ದಾರೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಅತ್ತಗಿರಿಕೊಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹುಲಿಬೆಲೆ ಗ್ರಾಮದ ವೀಣಾ ಬಳಿ ಲಕ್ಷ್ಮೀದೇವಮ್ಮ ಸಾಲ ಪಡೆದಿದ್ದರು,
ಸಾವಿಗೂ ಮುನ್ನ ಲಕ್ಷ್ಮೀದೇವಮ್ಮ ವೀಡಿಯೋ ಮಾಡಿದ್ದು, ವೀಡಿಯೋದಲ್ಲಿ ಸಾಲ ನೀಡಿದ್ದ ವೀಣಾ ಮನಬಂದಂತೆ ಬಡ್ಡಿ ಹಣ ಕೇಳುತ್ತಿದ್ದಳು, ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದಳು ಎಂದು ಆರೋಪ ಮಾಡಿದ್ದಾರೆ. ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಬಳಿಕ ಲಕ್ಷ್ಮೀದೇವಮ್ಮರನ್ನ ಸಂಬಂಧಿಕರು ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕೆತ್ಸೆ ಫಲಿಸದೆ ಲಕ್ಷ್ಮೀದೇವಮ್ಮ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ. ಸದ್ಯ ವಿಡಿಯೋ ಆಧರಿಸಿ ವೀಣಾ, ಅರುಣ್ ವಿರುದ್ಧ ಬೂದಿಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
