ಧಾರವಾಡ: ಪ್ರಜ್ಞಾವಂತರ ನಗರ ಎನಿಸಿಕೊಂಡಿರುವ ಅದರಲ್ಲೂ ಪ್ರತಿಷ್ಠಿತ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಚೇಂಬರ್ನಲ್ಲೇ ವಾಮಾಚಾರ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಕವಿವಿಯ ಪ್ರಾಚೀನ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ರಮಾ ಗುಂಡೂರಾವ್ ಎಂಬುವವರ ಚೇಂಬರ್ನಲ್ಲೇ ಕಿಡಿಗೇಡಿಗಳು ವಾಮಾಚಾರ ಮಾಡಿದ್ದಾರೆ.
ಈ ಘಟನೆಯಿಂದ ಆ ವಿಭಾಗದ ಪ್ರಾಧ್ಯಾಪಕರು ಬೆಚ್ಚಿಬಿದ್ದಿದ್ದಾರೆ. ಡಾ.ರಮಾ ಅವರ ಚೇಂಬರ್ನಲ್ಲಿ ಕಪ್ಪು ಬಣ್ಣದ ಮಾಟದ ಗೊಂಬೆ, ಮೂರು ಲಿಂಬೆಹಣ್ಣು ಹಾಗೂ ಅರಿಶಿನ, ಕುಂಕುಮ ಇಡಲಾಗಿದೆ. ಕಿಟಕಿಂದ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಡಾ.ರಮಾ ಅವರು ರಜೆ ಮೇಲೆ ಹೋಗಿದ್ದರು. ಶುಕ್ರವಾರ ಬೆಳಿಗ್ಗೆ ತಮ್ಮ ಚೇಂಬರ್ ತೆಗೆದು ನೋಡಿದಾಗ ಅಲ್ಲಿ ವಾಮಾಚಾರ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ.
MS Dhoni News car: 3.30 ಕೋಟಿಯ ಕಾರು ಖರೀದಿಸಿದ MS ಧೋನಿ: ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್!
ಇದನ್ನು ಕಂಡು ಗಾಬರಿಯಿಂದ ಹೊರ ಬಂದ ರಮಾ ಅವರು ಇದರ ವಿರುದ್ಧ ಕುಲಪತಿಗಳಿಗೆ ದೂರು ನೀಡಿದ್ದಾರೆ. ಅದೇ ವಿಭಾಗದ ಪ್ರಾಧ್ಯಾಪಕರೊಬ್ಬರ ಮೇಲೆ ಅನುಮಾನ ಹುಟ್ಟಿಕೊಂಡಿದ್ದು, ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಆ ಚೇಂಬರ್ ಬಿಟ್ಟುಕೊಡುವ ವಿಚಾರವಾಗಿ ತಿಕ್ಕಾಟ ನಡೆದಿತ್ತು. ಆ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.