ದೆಹಲಿ: ಅನರ್ಹತೆ ವಿಚಾರದಲ್ಲಿ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ಗೆ ಮತ್ತೊಮ್ಮೆ ಹಿನ್ನಡೆಯಾಗಿದೆ. ತಮ್ಮ ಅನರ್ಹತೆ ಪ್ರಶ್ನಿಸಿ ವಿನೇಶ್ ಫೋಗಟ್ (Vinesh Phogat) ಸಲ್ಲಿಸಿದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಕ್ರೀಡಾ ಮಧ್ಯಸ್ಥ ಮಂಡಳಿ, ಅನರ್ಹತೆ ತೆರವು ಮಾಡಲು ನಿರಾಕರಿಸಿದೆ.
ರಾತ್ರೋರಾತ್ರಿ ವಿನೇಶ್ ಫೋಗಟ್ ತೂಕ ಹೆಚ್ಚಾಗಲು ಇದೇ ಕಾರಣ: ಕುಸ್ತಿ ಕೋಚ್ ಬಿಚ್ಚಿಟ್ರೂ ರಹಸ್ಯ!
ವಿನೇಶ್ ಪರ ಹಿರಿಯ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದರು. ಆದರೆ ಯಾವುದೇ ಪ್ರಯೋಜನ ಆಗಲಿಲ್ಲ. ಒಲಿಂಪಿಕ್ಸ್ ನಿಯಮಗಳನ್ನು ಬದಲಿಸುವ ಅವಕಾಶ ಇಲ್ಲ ಎಂದು ಈಗಾಗಲೇ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ ಫೆಡರೇಷನ್ ಸ್ಪಷ್ಟಪಡಿಸಿತ್ತು.
ಈ ಮಧ್ಯೆ, ಫೋಗಟ್ ವಿಚಾರದಲ್ಲಿ ರಾಜಕೀಯ ಮುಂದುವರೆದಿದೆ. ಫೋಗಟ್ಗೆ ಭಾರತ ರತ್ನ ನೀಡಬೇಕು. ಇಲ್ಲವೇ ರಾಜ್ಯಸಭೆಗೆ ನಾಮಿನೇಟ್ ಮಾಡಬೇಕು ಎಂದು ಒತ್ತಾಯಿಸಿ ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದಾರೆ.
ಇದಕ್ಕೆ ಕೆಲ ನೆಟ್ಟಿಗರು, ನಿಮಗೆ ಅಷ್ಟು ಗೌರವ ಇದ್ರೆ ಮೊದಲು ವಿನೇಶ್ರನ್ನು ಬಂಗಾಳ ಸಿಎಂ ಮಾಡಿ ಎಂದು ಸವಾಲ್ ಹಾಕಿದ್ದಾರೆ.