ಧಾರವಾಡ: ಧಾರವಾಡದ ಜಿ.ಪಂ. ಸಭಾಭನದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿಗಳು ಅಧಿಕಾರಿಗಳಿಗೆ ನೀತಿ ಪಾಠ ಹೇಳಿದರು. ಧಾರವಾಡ ಜಿಲ್ಲೆಯಲ್ಲಿ ಎಲ್ಲ ಇಲಾಖೆಗಳಲ್ಲಿ ಥರ್ಡ ಪಾರ್ಟಿಗಳು ಕೆಲಸ ಮಾಡುತ್ತಿದ್ದಾರೆ. ಥರ್ಡ ಪಾರ್ಟಿ ವ್ಯಕ್ತಿಯನ್ನು ಬಳಸಿ ಜನರಿಂದ ಹಣ ವಸೂಲಿ ಮಾಡಿದ್ರೆ ನಾನು ಸುಮ್ಮನೆ ಬಿಡಲ್ಲ ಎಂದು ಜಿಲ್ಲೆಯ ತಹಶಿಲ್ದಾರ ಕಚೇರಿ, ಸಬ್ ರೆಜಿಸ್ಟರ್ ಕಚೇರಿಗಳು, ಎಡಿಎಲ್ ಆರ್ , ಡಿಡಿಎಲ್ಆರ್ ಅಧಿಕಾರಿಗಳಿಗೆ ಪುಲ್ ಕ್ಲಾಸ್ ತೆಗೆದುಕೊಂಡರು.
ಏಜಂಟರುಗಳನ್ನ ಇಟ್ಟುಕ್ಕೊಂಡು ಹಣ ವಸೂಲಿ ಮಾಡುತ್ತಿರುವ ದೂರುಗಳನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿ ಎಲ್ಲ ಅಧಿಕಾರಿಗಳು ಪ್ರಮಾಣಿಕವಾಗಿ ಜನತೆಯ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ಹೇಳಿದರು. ಥರ್ಡ್ ಪಾರ್ಟಿಗಳಿಂದ ದೂರ ಇರಬೇಕು, ಇದನ್ನು ಜಿಲ್ಲೆಯ ಎಲ್ಲ ಅಧಿಕಾರಿಗಳಿಗೆ ಹೇಳುತ್ತಿದ್ದೇನೆ ಎಂದು ಸಭೆಯಲ್ಲಿ ಜಿಲ್ಲೆಯ ಗ್ರಾಮ ಪಂಚಾಯತಿ, ಆರೋಗ್ಯ ಇಲಾಖೆ, ತಹಶಿಲ್ದಾರ, ಸಬ್ ರೆಜಿಸ್ಟರ್ , ಎಡಿಎಲ್ಆರ್, ಡಿಡಿಎಲ್ಆರ್, ಗಳಿಗೆ ಖಡಕ್ ಎಚ್ಚರಿಕೆ ನೀಡಿದರು.