ಎಂಪಿ ರೇಣುಕಾಚಾರ್ಯ (MP Renukacharya) ಅವರು ಭಾರತೀಯ ಜನತಾ ಪಾರ್ಟಿಗೆ (BJP) ಗುಡ್ ಬೈ ಹೇಳ್ತಾರಾ ಅನ್ನೋ ಅನುಮಾನವೊಂದು ಇದೀಗ ಎದ್ದಿದೆ.
CCB Team: ಹೈದ್ರಾಬಾದ್’ನಲ್ಲಿ ಅಡಗಿ ಕುಳಿತಿರುವ ಹಾಲಾಶ್ರೀ ಸ್ವಾಮೀಜಿ: ಬಂಧನಕ್ಕೆ ತೆರಳಿರುವ ಸಿಸಿಬಿ ಟೀಂ!
ರೇಣುಕಾಚಾರ್ಯ ಅವರು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ (SS Mallikarjun) ಮನೆಗೆ ಭೇಟಿ ನೀಡಿ ಸಂಚಲನ ಮೂಡಿಸಿದ್ದಾರೆ. ಕಾಂಗ್ರೆಸ್ (Congress) ಸೇರ್ಪಡೆ ವದಂತಿ ಬೆನ್ನಲ್ಲೆ ಶಾಮನೂರು ಮನೆಗೆ ಕೂಡ ದಿಢೀರ್ ಭೇಟಿಯಾಗಿದ್ದಾರೆ. ಎಸ್ ಎಸ್ ಮಲ್ಲಿಕಾರ್ಜುನ್, ಶಾಮನೂರು ಶಿವಶಂಕರಪ್ಪ ಜೊತೆ ರಹಸ್ಯ ಮಾತುಕತೆ ನಡೆಸಿದ್ದು, ಈ ಮೂಲಕ ಬಿಜೆಪಿಗೆ ಮತ್ತೊಂದು ಆಘಾತ ಎದುರಾಗುತ್ತಾ ಅನ್ನೋ ಪ್ರಶ್ನೆ ಮೂಡಿದೆ.
