ಬೆಂಗಳೂರು: ಬಿಎಂಟಿಸಿ ಬಸ್ ನಲ್ಲಿ ಸಂಚಾರ ಮಾಡಿದ ಮಾಜಿ ಸಚಿವ ಸುರೇಶ್ ಕುಮಾರ್ ಸರಳತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇಂದು ಮುಂಜಾನೆಯೇ ಬೆಂಗಳೂರು ನಗರದಿಂದ ಮಾಗಡಿ ರಸ್ತೆಯಲ್ಲಿ ಬಿಎಂಟಿಸಿ ಬಸ್ ಮೂಲಕ ಸಂಚರಿಸಿ ಮಾಜಿ ಸಚಿವ ಸುರೇಶ್ ಕುಮಾರ್ ಸರಳತೆಯನ್ನು ಮೆರೆದಿದ್ದಾರೆ. ಸುರೇಶ್ ಕುಮಾರ್ ಅವರ ಈ ನಡೆಗೆ ಸದ್ಯ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಇನ್ನೂ ಬಸವೇಶ್ವರ ನಗರದ ತಮ್ಮ ಮನೆಯಿಂದ ಮಾಗಡಿ ರಸ್ತೆಯ ಸುಮನಹಳ್ಳಿ ಬಸ್ ನಿಲ್ದಾಣದವರೆಗೂ ಒಬ್ಬರೇ ನಡೆದು ಬಂದು, ಅಲ್ಲಿಂದ ತಮ್ಮೊಬ್ಬ ಸ್ನೇಹಿತರೊಂದಿಗೆ ಬಿಎಂಟಿಸಿ ಬಸ್ ಹತ್ತಿದ್ದಾರೆ. ತಾವರೆಕೆರೆಯವರೆಗೂ ಬಸ್ನಲ್ಲಿ ಸಂಚರಿಸಿದ ಸುರೇಶ್ ಕುಮಾರ್, ಈ ಮಧ್ಯೆ ಬಸ್ ಪ್ರಯಾಣಿಕರ ಕುಶಲೋಪರಿ ವಿಚಾರಿಸಿದ್ದಾರೆ. ಅಲ್ಲದೇ ತಮ್ಮೊಂದಿಗೆ ಅಂಗರಕ್ಷಕರನ್ನು ಸಹ ಕರೆದೊಯ್ಯದೇ ಸುರೇಶ್ ಕುಮಾರ್ ಸರಳ ನಡೆಯನ್ನು ಅನುಸರಿಸಿದ್ದಾರೆ ಎಂದು ಹೇಳಲಾಗಿದೆ.
