ನವಜಾತ ಶಿಶುವನ್ನು ಚರಂಡಿಗೆ ಬಿಸಾಡಿ ಹೋಗಿರುವ ದುಷ್ಟರು

ಹಾಸನ : ನವಜಾತ ಶಿಶುವನ್ನು ಚರಂಡಿಗೆ ಬಿಸಾಡಿ ಹೋಗಿರುವ ಘಟನೆ ಹಾಸನದ ಹೇಮಾವತಿನಗರದ ಬಳಿ ನಡೆದಿದೆ. ಆಗ ತಾನೇ ಹುಟ್ಟಿದ ಮಗುವನ್ನ ಚರಂಡಿಗೆ ಎಸೆದಿದ್ದು, ಹೆಣ್ಣು ಮಗು ಎಂಬ ಕಾರಣಕ್ಕೆ ಬಿಸಾಡಿ ಹೋಗಿರುವ ಶಂಕೆ ವ್ಯಕ್ತವಾಗಿದೆ.  ಪ್ಲಾಸ್ಟಿಕ್ ‌ಕವರ್‌ನಲ್ಲಿ ಕಸದ ಜೊತೆ ತುಂಬಿ ಮಗುವನ್ನ ಎಸೆದು ಹೋಗಿದ್ದಾರೆ. ಮೃತಪಟ್ಟಿರುವ ಶಿಶುವನ್ನು ಕಂಡು ಪೊಲೀಸರಿಗೆ ವಿಷಯ ತಿಳಿಸಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಹಾಸನ ಪೆನ್‌ಷನ್‌ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.