ರಾಂಚಿ: ಮಹೇಂದ್ರ ಸಿಂಗ್ ಧೋನಿ ಹೆಸರು ಕೇಳಿದ್ರೆ ಸಾಕು ನೆನಪಾಗೋದು ಒಂದೆ ಅದುವೆ ಕ್ಯಾಪ್ಟನ್ ಒಬ್ಬ ಚಾಣಾಕ್ಷ ಆಟಗಾರ ಆದರೆ ಧೋನಿ ಅವರಿಗೆ ಒಬ್ಬ ಅಣ್ಣನಿದ್ದಾನೆ. ಈ ವಿಷಯ ಇಲ್ಲಿ ತನಕ ಎಲ್ಲೂ ಬಾಯ್ಬಿಟ್ಟಿಲ್ಲ ಹಾಗಾದ್ರೆ ಅವರಿಗೆ ಅಣ್ಣನ ಮೇಲೆ ಎಂಥಾ ಕೋಪಾ ಏನು ವಿಷಯ ನೋಡೋಣ ಬನ್ನಿ..
ಮಹೇಂದ್ರ ಸಿಂಗ್ ಧೋನಿ ಅವರ ಅಣ್ಣನ ಹೆಸರು ನರೇಂದ್ರ ಸಿಂಗ್ ಧೋನಿ. ಮಹೇಂದ್ರ ಸಿಂಗ್ ಧೋನಿಗಿಂತಲೂ 10 ವರ್ಷ ಹಿರಿಯರು. ಕುಮಾನ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪೂರೈಸಿದ್ದು, ರಾಜಕೀಯದಲ್ಲೂ ಸೇವೆ ಸಲ್ಲಿಸಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಭಾರತಕ್ಕೆ ಮೂರು ಐಸಿಸಿ ಗೆದ್ದುಕೊಟ್ಟ ಎಂಎಸ್ ಧೋನಿ ಅವರು, ಐಪಿಎಲ್ನಲ್ಲೂ 5 ಟ್ರೋಫಿ ಜಯಿಸಿದ್ದಾರೆ. 16ನೇ ಆವೃತ್ತಿಯ ಐಪಿಎಲ್ನಲ್ಲೂ ಧೋನಿ ನೇತೃತ್ವದ ಸಿಎಸ್ಕೆ ತಂಡವು, 5ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು.
ಜುಲೈ 7, 1981ರಂದು ಜಾರ್ಖಂಡ್ನ ರಾಂಚಿಯಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಧೋನಿ, ಡಿಸೆಂಬರ್ 23, 2004 ರಂದು ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಎಂಎಸ್ ಧೋನಿ ಅಣ್ಣ ನರೇಂದ್ರ ರಾಂಚಿ ಬಿಟ್ಟು, ಉತ್ತರಾಖಂಡದ ತಮ್ಮ ಸ್ಥಳೀಯ ಗ್ರಾಮದಲ್ಲಿ ನೆಲೆಸಿದ್ದಾರೆ. ಸಾದಾಸೀದಾ ಜೀವನ ನಡೆಸುತ್ತಾರೆ ಎಂದು ವರದಿಯಾಗಿದೆ. ಕೌಟುಂಬಿಕ ಕಲಹದಿಂದಾಗಿ ಇಬ್ಬರು ಸಹೋದರರು ಬಹಳ ದಿನಗಳಿಂದ ಮಾತನಾಡುತ್ತಿಲ್ಲ. 2008-2009ರಲ್ಲಿ ಎಂಎಸ್ ತಮ್ಮ ವೃತ್ತಿಜೀವನದ ಆರಂಭಿಕ ಹಂತದಲ್ಲಿದ್ದಾಗ ಹಣದ ವಿಚಾರದಲ್ಲಿ ಎಂಎಸ್ ಮತ್ತು ನರೇಂದ್ರ ನಡುವೆ ವಿವಾದವಿತ್ತು ಎಂಬ ಊಹಾಪೋಹವಿದೆ.
ಮಾಹಿ ರಾಂಚಿಯಲ್ಲಿ ವೃದ್ಧಾಶ್ರಮವನ್ನು ತೆರೆಯಲು ಬಯಸಿದ್ದರು. ಆದರೆ ಅವರ ಸಹೋದರ ಹಣವನ್ನು ತನ್ನ ಅತ್ತೆಯವರಿಗೆ ನೀಡಿದ್ದರು. ಇದರ ಪರಿಣಾಮ ಎಂಎಸ್ ತನ್ನ ಸಹೋದರನೊಂದಿಗೆ ಮಾತು ಬಿಟ್ಟಿದ್ದರು. ಈ ಘಟನೆಗೆ ಸಂಬಂಧಿಸಿ ಪುರಾವೆಗಳಿಲ್ಲ ಮತ್ತು ಇದು ವದಂತಿಯೂ ಆಗಿರಬಹುದು. ಆದರೆ ಎಂಎಸ್ ಧೋನಿ ಅವರಿಗೆ ಅಣ್ಣ ಇದ್ದಾರೆ ಎಂಬುದೇ ಅನೇಕ ಅಭಿಮಾನಿಗಳಿಗೆ ತಿಳಿದಿರಲಿಲ್ಲ.
ನರೇಂದ್ರ ಧೋನಿ ಅವರು ಸಂದರ್ಶನವೊಂದರಲ್ಲಿ ತಮ್ಮ ಕಿರಿಯ ಸಹೋದರ ಮಾಹಿ ಜೊತೆ ಉತ್ತಮ ಸಂಬಂಧವನ್ನು ಹೊಂದಿರುವುದಾಗಿ ಹೇಳಿದ್ದಾರೆ. ಧೋನಿಯಂತೆ, ನರೇಂದ್ರ ಕೂಡ ತನ್ನ ಶಾಲಾ ದಿನಗಳಲ್ಲಿ ಕ್ರೀಡೆಗಳನ್ನು ಆಡುತ್ತಿದ್ದಾಗಿ ಹೇಳಿದ್ದಾರೆ. ಧೋನಿ ಬಯೋಪಿಕ್ನಲ್ಲಿ ತಾವು ಎಲ್ಲಿಯೂ ಕಾಣಿಸಿಕೊಳ್ಳದ ಕುರಿತ ಪ್ರಶ್ನೆಗೆ ಉತ್ತರಿಸಿದ ನರೇಂದ್ರ ಅವರು, ನಾನು ಸಿನಿಮಾದಲ್ಲಿ ಇಲ್ಲದಿರಬಹುದು. ಆದರೆ ಮಾಹಿ ಬಾಲ್ಯ ಜೀವನದಲ್ಲಿ ಇದ್ದೇನೆ ಎಂದು ಉತ್ತರಿಸಿದರು.
