ಬೆಂಗಳೂರು: ಸರ್ಕಾರ ಯಾಕೆ ಕೊಟ್ಟ ಮಾತು ಉಳಿಸಿಕೊಂಡು ಪ್ರತಿ ತಿಂಗಳು ದುಡ್ಡು ಹಾಕುತ್ತಿಲ್ಲ ಅಂತ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ರು. ನಗರದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟ ಮಾತಿನಂತೆ ಕೃಷಿ ಸಮ್ಮಾನ್ ಯೋಜನೆ ಹಣವನ್ನ ರೈತರ ಖಾತೆಗೆ ಪ್ರತಿ ತಿಂಗಳು ಹಾಕ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಯಾಕೆ ಕೊಟ್ಟ ಮಾತು ಉಳಿಸಿಕೊಂಡು ಪ್ರತಿ ತಿಂಗಳು ದುಡ್ಡು ಹಾಕುತ್ತಿಲ್ಲ ಅಂತ ಪ್ರಶ್ನೆ ಮಾಡಿದ್ರು.
ಸಿಎಂ ಸಿದ್ದರಾಮಯ್ಯ ಸೇರಿ ಈ ಸರ್ಕಾರದಲ್ಲಿ ಇರೋ ಎಲ್ಲರೂ ನಾವು ನುಡಿದಂತೆ ನಡೆಯುತ್ತೇವೆ… ನಡೆಯುತ್ತಿದ್ದೇವೆ ಅಂತೀರಾ… ನೀವು ನುಡಿದಿದ್ದು ಏನು? ನಡೆಯುತ್ತಿರೋದು ಏನು? ಅಂತ ಪ್ರಶ್ನೆ ಮಾಡಿದ ನಿಖಿಲ್, ನಾವೇ ಈ ವರ್ಷ ಕ್ಯಾಲೆಂಡರ್ ನಾವೇ ತರುತ್ತೇವೆ. ಯಾವ ದಿನಾಂಕದಂದು ಈ ಎಲ್ಲಾ ಯೋಜನೆ ಹಣ ಪೂರೈಸುತ್ತೀರಾ ಅಂತ ದಿನಾಂಕ ನಿಗದಿ ಮಾಡಿ ಅಂತ ಸರ್ಕಾರವನ್ನ ಆಗ್ರಹಿಸಿದ್ರು.