ಮೈಸೂರು:ಈ ಬಾರಿಯ ದಸರಾ ಉದ್ಘಾಟಕರು ಯಾರು ಎಂಬ ಮಾಧ್ಯಮಗಳ ಪ್ರಶ್ನೆಗೆ ಸಚಿವ ಹೆಚ್ ಸಿ ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಹಾವೇರಿ ನಗರಸಭೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಬಿಜೆಪಿ ತೆಕ್ಕೆಗೆ
ಈಗಾಗಲೇ ದಸರಾ ಆಚರಣೆ ಕುರಿತು 19 ದಸರಾ ಉಪ ಸಮಿತಿಗಳ ತಂಡದ ಜತೆ ಸಭೆ ಮಾಡಿದ್ದೇನೆ. ಅದ್ಧೂರಿಯಾಗಿ ದಸರಾ ಆಚರಣೆಗೆ ಬೇಕಾದ ಎಲ್ಲಾ ರೂಪು ರೇಷಗಳ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.
ಕಳೆದ ಬಾರಿ ಆಗಿರುವ ನ್ಯೂನತೆ ಸರಿ ಪಡಿಸಿಕೊಂಡು ಅಚ್ಚುಕಟ್ಟಾಗಿ ದಸರಾ ಆಚರಣೆ ಮಾಡಲಾಗುವುದು. ಜೊತೆಗೆ ಅರಮನೆ ಆವರಣದಲ್ಲಿ 4 ಗಂಟೆಯಿಂದಲೇ ಸಂಗೀತ ಕಾರ್ಯಕ್ರಮ ನಡೆಯಬೇಕು ಎಂದು ಹೇಳಿದ್ದೇನೆ. ಈ ಬಾರಿ ದಸರಾ ಉದ್ಘಾಟಕರ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ, ಅದರ ಬಗ್ಗೆ ತೀರ್ಮಾನ ಮಾಡುವುದು ಸಿಎಂ ಸಿದ್ದರಾಮಯ್ಯ, ಅವರ ವಿವೇಚನೆಗೆ ಬಿಟ್ಟಿದ್ದೇವೆ ಎಂದರು.