RR vs SRH Qualifier 2 ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ರಾಜಸ್ಥಾನ್ ಎದುರಿಸಲಿದೆ. ಪಂದ್ಯದಲ್ಲಿ ರಾಜಸ್ಥಾನ 4 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ರಾಜಸ್ಥಾನ್ ರಾಯಲ್ಸ್ ಕ್ವಾಲಿಫೈಯರ್ 2ಕ್ಕೆ ಲಗ್ಗೆ ಇಟ್ಟಿದೆ
Breaking News: ಕಾಲೇಜಿನ ಪ್ರೇಮಾಂಕುರದ ಕಹಾನಿ ಬಿಚ್ಚಿಟ್ಟ CM ಸಿದ್ದು…!
ಇದೀಗ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ರಾಜಸ್ಥಾನ್ ಎದುರಿಸಲಿದೆ. ಈ ಎರಡು ತಂಡಗಳ ನಡುವಿನ ಎರಡನೇ ಕ್ವಾಲಿಫೈಯರ್ ಪಂದ್ಯ ಶುಕ್ರವಾರ, ಮೇ 24ರಂದು ಚೆನ್ನೈನಲ್ಲಿ ನಡೆಯಲಿದೆ. ಒಂದು ವೇಳೆ ಈ ಎರಡು ತಂಡಗಳ ನಡುವಿನ ಪಂದ್ಯ ರದ್ದಾದರೆ ಯಾವ ತಂಡ ಫೈನಲ್ಗೆ ಲಗ್ಗೆ ಇಡಲಿದೆ ಎಂಬುದು ಇಂದು ತಿಳಿಯಲಿದೆ.
ಶುಕ್ರವಾರದಂದು ಚೆನ್ನೈನಲ್ಲಿ ಹವಾಮಾನವು ಸ್ಪಷ್ಟವಾಗಿದೆ, ಆದ್ದರಿಂದ ಅಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆ. ಆದರೆ ಪಂದ್ಯದಲ್ಲಿ ಮಳೆ ಬಂದರೆ 5 ಓವರ್ ಕೂಡ ಪಂದ್ಯ ನಡೆಯದಿದ್ದರೆ ಪಂದ್ಯ ರದ್ದಾಗುತ್ತದೆ. ಇದೇ ವೇಳೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡ ಫೈನಲ್ಗೆ ಪ್ರವೇಶಿಸಲಿದೆ.
ಅಂದರೆ ಮಳೆಯಿಂದ ಪಂದ್ಯ ರದ್ದಾದರೆ ಸನ್ರೈಸರ್ಸ್ ಹೈದರಾಬಾದ್ ತಂಡವು ಫೈನಲ್ಗೆ ಪ್ರವೇಶಿಸಲಿದ್ದು ಅಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ನಿವ್ವಳ ರನ್ ರೇಟ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ರಾಜಸ್ಥಾನಕ್ಕಿಂತ ಮುಂದಿದ್ದು, ಫೈನಲ್ ಪ್ರವೇಶಿಸಲಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)