ಚಂಡೀಗಢ: ಬಿಜೆಪಿ (BJP) ಮತ್ತು ಜೆಜೆಪಿ (JJP) ನಡುವೆ ಸೀಟು ಹಂಚಿಕೆ ಬಿಕ್ಕಟ್ಟು ತಾರಕಕ್ಕೇರಿದ ಹೊತ್ತಲ್ಲಿಯೇ ಹರಿಯಾಣ ಸರ್ಕಾರವೇ (Haryana Government) ಬದಲಾಗಿ ಹೋಗಿದೆ.
ದಿಢೀರ್ ಬೆಳವಣಿಗೆಯಲ್ಲಿ ಸಿಎಂ ಮನೋಹರ್ಲಾಲ್ ಖಟ್ಟರ್ (Manohar Lal Khattar) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಸಂಪುಟ ವಿಸರ್ಜನೆ ಆಗಿದೆ. ಈ ಬೆನ್ನಲ್ಲೇ ಹರಿಯಾಣದ ನೂತನ ಸಿಎಂ ಆಗಿ ಪಕ್ಷದ ರಾಜ್ಯಾಧ್ಯಕ್ಷ ನಯಾಬ್ ಸಿಂಗ್ ಸೈನಿ ಆಯ್ಕೆಯಾಗಿದ್ದಾರೆ.
ಫಟಾಫಟ್ ಎಂಬಂತೆ ಮಂಗಳವಾರ ಸಂಜೆ ಐದು ಗಂಟೆಗೆ ನೂತನ ಸಿಎಂ ನಯಾಬ್ ಸಿಂಗ್ (Nayab Singh Saini) ಮತ್ತು ಐವರು ಶಾಸಕರು ಮಾಣವಚನ ಕಾರ್ಯಕ್ರಮವೂ ಮುಗಿದುಹೋಗಿದೆ. ಮೂಲಗಳ ಪ್ರಕಾರ ಮನೋಹರ್ ಲಾಲ್ ಖಟ್ಟರ್ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಬಹುದು ಎನ್ನಲಾಗಿದೆ.
ನಯಾಬ್ ಸಿಂಗ್ ಸೈನಿ ಓಬಿಸಿ ಮುಖಂಡರಾಗಿದ್ದು (OBC Leader) ಲೋಕಸಭೆ ಚುನಾವಣೆ (Lok Sabha Election) ದೃಷ್ಟಿಯಿಂದಲೇ ಬಿಜೆಪಿ ಹೈಕಮಾಂಡ್ (BJP High Command) ಈ ಬದಲಾವಣೆ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
Ayodhya Ram Mandir: ಇನ್ಮುಂದೆ ದೂರದರ್ಶನದಲ್ಲಿ ಬಾಲ ರಾಮನ ಬೆಳಗ್ಗಿನ ಪೂಜೆ ನೋಡಲು ಅವಕಾಶ!
ಯಾರು ನಯಾಬ್ ಸಿಂಗ್ ಸೈನಿ?
ಕುರುಕ್ಷೇತ್ರದ ಲೋಕಸಭಾ ಸಂಸದರಾಗಿರುವ ಸೈನಿ ಒಬಿಸಿ ಸಮುದಾಯದ ಪ್ರಭಾವಿ ನಾಯಕರಾಗಿದ್ದು ಕಳೆದ ವರ್ಷ ಅಕ್ಟೋಬರ್ನಲ್ಲಿ ಹರ್ಯಾಣ ಬಿಜೆಪಿ ಮುಖ್ಯಸ್ಥರಾಗಿ ನೇಮಕವಾಗಿದ್ದರು.
ನಿರ್ಗಮಿತ ಮುಖ್ಯಮಂತ್ರಿ ಎಂಎಲ್ ಖಟ್ಟರ್ಗೆ ಆಪ್ತರಾಗಿರುವ ಸೈನಿ 2002ರಲ್ಲಿ ಅಂಬಲದಲ್ಲಿ ಬಿಜೆಪಿ ಯುವ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, 2005ರಲ್ಲಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದರು. ನಂತರ ರೈತ ಘಟಕವಾದ ಕಿಸಾನ್ ಮೋರ್ಚಾದ ಕಾರ್ಯದರ್ಶಿ ಸೇರಿದಂತೆ ಪಕ್ಷದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ.
2014ರ ವಿಧಾನಸಭಾ ಚುನಾವಣೆಯಲ್ಲಿ ನಾರಾಯಣಗಢದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಕುರುಕ್ಷೇತ್ರದಿಂದ ಸ್ಪರ್ಧಿಸಿ ಸುಮಾರು 4 ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್ನ ನಿರ್ಮಲ್ ಸಿಂಗ್ ಅವರನ್ನು ಸೋಲಿಸಿದ್ದರು.