ಆರನೇ ವಾರದ ವಾರಾಂತ್ಯಕ್ಕೆ ಬಿಗ್ ಬಾಸ್ ಸ್ಪರ್ಧಿಗಳು ಲಗ್ಗೆಯಿಟ್ಟಿದ್ದು, ನಟ ಸುದೀಪ್ ಅವರ ಆಗಮನಕ್ಕಾಗಿ ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.
ಅರ್ಥವಾಗದ, ಅರ್ಥೈಸಲಾಗದ ಒಂದಷ್ಟು ವಿಚಾರಗಳನ್ನು ಸುದೀಪ್ ಹೇಗೆ ಆಯಾ ಸ್ಪರ್ಧಿಗಳಿಗೆ ತಲುಪಿಸುವುದರ ಜತೆಗೆ ಮನೆಯಿಂದ ಹೊರಹೋಗುವವರ ಹೆಸರನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಈ ವಾರ ದೀಪಾವಳಿ ಹಬ್ಬವಾದ ಹಿನ್ನಲೆ ಟಾಸ್ಕ್ಗಳು ಅಷ್ಟು ಕಠಿಣವಾಗಿರಲಿಲ್ಲ ಹಾಗೂ ಮನೆಯವರಿಂದ ಬಂದ ವಿಶೇಷ ಪತ್ರಗಳನ್ನು ಪಡೆಯುವಲ್ಲಿ ಸ್ಪರ್ಧಿಗಳು ಹೆಚ್ಚು ಸಕ್ರಿಯರಾಗಿ ಪಾಲ್ಗೊಂಡರು. ಕೆಲವರಿಗೆ ತಮ್ಮ ಪ್ರೀತಿ ಪಾತ್ರರಿಂದ ಪತ್ರ ದೊರಕಿತು. ಆದ್ರೆ, ಇನ್ನೂ ಕೆಲವರಿಗೆ ಪತ್ರ ಸಿಗದೆ ಬೇಸರದಿಂದಲೇ ದಿನ ಕಳೆಯುವಂತಾಯಿತು.
ಇದರೊಟ್ಟಿಗೆ ವಾರದ ಕ್ಯಾಪ್ಟನ್ ಆಗಿ ಕಾರ್ತಿಕ್ ಆಯ್ಕೆಯಾದರೆ, ಉತ್ತಮ ಪಟ್ಟವನ್ನು ತುಕಾಲಿ ಸಂತೋಷ್ ಪಡೆದುಕೊಂಡರು. ಕಳಪೆ ಪಟ್ಟವನ್ನು ತನಿಷಾ ತೆಗೆದುಕೊಂಡರು. ಮನೆಯವರೆಲ್ಲಾ ತನಗೆ ಕಳಪೆ ಕೊಟ್ಟು ಜೈಲಿಗೆ ಕಳುಹಿಸಿದ ಹಿನ್ನಲೆ ತನಿಷಾ ಕೆಲ ಸಮಯ ಕಣ್ಣೀರಾಕಿದರು.
ಆರನೇ ವಾರಂತ್ಯಕ್ಕೆ ಬಂದಿರುವ ಸ್ಪರ್ಧಿಗಳ ಪೈಕಿ ವಿನಯ್, ತನಿಷಾ, ಕಾರ್ತಿಕ್, ಭಾಗ್ಯಶ್ರೀ, ಇಶಾನಿ, ತುಕಾಲಿ ಸಂತೋಷ್, ನೀತು, ನಮ್ರತಾ ನಾಮಿನೇಟ್ ಆಗಿ ಮನೆಯಿಂದ ಹೊರಹೋಗಲು ಹಾಟ್ಸೀಟ್ನಲ್ಲಿ ಕುಳಿತ್ತಿದ್ದಾರೆ. ಇದೀಗ ವೀಕ್ಷಕರಲ್ಲಿ ಆರನೇ ವಾರದಲ್ಲಿ ಮನೆಯಿಂದ ಹೊರ ಉಳಿಯುವ ಆರನೇ ಸ್ಪರ್ಧಿ ಯಾರು ಎಂಬ ಕುತೂಹಲ ತೀವ್ರವಾಗಿ ಕಾಡುತ್ತಿದೆ. ಸದ್ಯ ಈ ಎಲ್ಲಾ ಪ್ರಶ್ನೆಗಳಿಗೆ ಇಂದಿನ ವಾರದ ಕಥೆ ಕಿಚ್ಚನ ಕಥೆ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.