ಭಾರತ ವಿರುದ್ಧ ಸೋಲಿಗೆ ಪಾಕ್ ನಾಯಕ ಕಾರಣ ಕೊಟ್ಟಿದ್ದಾರೆ. ನಾಸಾ ಕೌಂಟಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ 6 ರನ್ಗಳ ಜಯ ಸಾಧಿಸಿದೆ.
3 ನೇ ಬಾರಿಗೆ ಪ್ರಧಾನಿಯಾಗಿ ಮೋದಿ ಪದಗ್ರಹಣ..ಬನಹಟ್ಟಿಯಲ್ಲಿ ಕಾರ್ಯಕರ್ತರ ಸಂಭ್ರಮ!
ಪಂದ್ಯದ ಕೊನೆಯ ಎಸೆತದ ವರೆಗೂ ರೋಚಕವಾಗಿದ್ದ ಪಂದ್ಯದಲ್ಲಿ ದುರ್ಬಲ ಪಿಚ್ ಕಾರಣದಿಂದ ಬ್ಯಾಟರ್ಗಳು ತತ್ತರಿಸಿದರು. ಟೀಂ ಇಂಡಿಯಾ ಬೌಲರ್ ಗಳು ಅಮೋಘ ಪ್ರದರ್ಶನ ನೀಡಿ ತಂಡಕ್ಕೆ ಜಯ ತಂದುಕೊಟ್ಟರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 19 ಓವರ್ಗಳಲ್ಲಿ 119 ರನ್ಗಳಿಗೆ ಆಲೌಟಾಯಿತು. ಆ ಮೂಲಕ ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲೇ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಬೇಡದ ದಾಖಲೆಯನ್ನು ನಿರ್ಮಿಸಿತು. ಟೀ ಇಂಡಿಯಾ ಪರ ರಿಷಬ್ ಪಂತ್ 31 ಎಸೆತಗಳಲ್ಲಿ 42 ರನ್ ಗಳಿಸಿ ಮಿಂಚಿದರು. ಇದರಲ್ಲಿ 6 ಬೌಂಡರಿ ಕೂಡ ಸೇರಿದೆ.
ಉಳಿದಂತೆ ಪಾಕಿಸ್ತಾನದ ಪರ ನಸೀಮ್ ಶಾ (3/21), ಹ್ಯಾರಿಸ್ ರೌಫ್ (3/21) ತಲಾ ಮೂರು ಮತ್ತು ಮೊಹಮ್ಮದ್ ಅಮೀರ್ (2/23) ಎರಡು ವಿಕೆಟ್ ಪಡೆದರು ಟೀಂ ಇಂಡಿಯಾವನ್ನು ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಿದರು.
ಸುಲಭ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 113 ರನ್ ಮಾತ್ರ ಗಳಿಸಿತು. ಟೀಂ ಇಂಡಿಯಾ ಪರ ಬುಮ್ರಾ ಕೇವಲ 14 ರನ್ ನೀಡಿ 3 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ 24 ರನ್ ನೀಡಿ 2 ವಿಕೆಟ್ ಗಳಿಸಿದರು. ಉಳಿದಂತೆ ಅರ್ಷದೀಪ್ ಸಿಂಗ್ ಹಾಗೂ ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು. ಪಾಕ್ ಪರ ಮೊಹಮ್ಮದ್ ರಿಜ್ವಾನ್ 44 ಎಸೆತಗಳಲ್ಲಿ ತಲಾ ಒಂದು ಸಿಕ್ಸರ್, ಬೌಂಡರಿ ನೆರವಿನಿಂದ 31 ರನ್ ಗಳಿಸಿದರು.
ಟೀಂ ಇಂಡಿಯಾ ಮತ್ತೊಮ್ಮೆ ಮೇಲುಗೈ ಸಾಧಿಸಿದೆ. ಪಂದ್ಯದ ಬಳಿಕ ಮಾತನಾಡಿದ ಪಾಕಿಸ್ತಾನ ನಾಯಕ ಬಾಬರ್ ಅಜಮ್ ಪಂದ್ಯದ ನಂತರ ತಮ್ಮ ತಂಡದ ಸೋಲಿಗೆ ಕಾರಣಗಳನ್ನು ವಿವರಿಸಿದರು. ನಾವು ಹೆಚ್ಚು ಡಾಟ್ ಬಾಲ್ ಆಡುವ ಮೂಲಕ ಪಂದ್ಯವನ್ನು ಕಳೆದುಕೊಂಡಿದ್ದೇವೆ ಎಂದು ಹೇಳಿದರು. ಅಲ್ಲದೇ ಪಂದ್ಯ ಆರಂಭಕ್ಕೂ ಮುನ್ನವೇ ಚರ್ಚೆಗೆ ಗ್ರಾಸವಾದ ಪಿಚ್ ಬಗ್ಗೆ ಮಾತನಾಡಿದ್ದು, ಪಿಚ್ ಉತ್ತಮವಾಗಿದ್ದು, ಯಾವುದೇ ದೂರುಗಳಿಲ್ಲ ಎಂದು ಅವರು ಹೇಳಿದರು. ಆದರೆ ಕೆಲವು ಎಸೆತಗಳಿಗೆ ಹೆಚ್ಚುವರಿ ಬೌನ್ಸ್ ಸಿಕ್ಕಿತು ಎಂದು ತಿಳಿಸಿದ್ದಾರೆ
ನಾವು ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವೆ. ಆದರೆ ಬ್ಯಾಟಿಂಗ್ನಲ್ಲಿ ವಿಫಲವಾಗಿದ್ದೇವೆ. ಸತತವಾಗಿ ವಿಕೆಟ್ ಗಳನ್ನು ಕಳೆದುಕೊಂಡಿದ್ದು ಹಾಗೂ ಹೆಚ್ಚು ಡಾಟ್ ಬಾಲ್ಗಳನ್ನು ಆಡಿದ್ದು ನಮಗೆ ಮುಳುವಾಯಿತು. ಬ್ರೇಕ್ಔಟ್ಗಾಗಿ ಯಾವುದೇ ವಿಶೇಷ ಯೋಜನೆಗಳೊಂದಿಗೆ ಕಣಕ್ಕೆ ಇಳಿಯಲಿಲ್ಲ. ನಾವು ಸರಳ ಮತ್ತು ಸಾಧಾರಣವಾಗಿ ಆಡಲು ಬಯಸಿದ್ದೇವೆ. ನಾವು ಸ್ಟ್ರೈಕ್ ಅನ್ನು ತಿರುಗಿಸಲು ಮತ್ತು ಸಾಧ್ಯವಾದಾಗಲೆಲ್ಲಾ ಬೌಂಡರಿಗಳನ್ನು ಗಳಿಸಲು ಬಯಸಿದ್ದೇವೆ. ಆದರೆ ಈ ಪ್ರಕ್ರಿಯೆಯಲ್ಲಿ ನಾವು ಅನೇಕ ಡಾಟ್ ಬಾಲ್ಗಳನ್ನು ಎದುರಿಸಿದ್ದೇವೆ ಎಂದರು.
![](https://ainlivenews.com/wp-content/uploads/2024/01/Ad-Banner-copy-scaled.jpg)