Facebook Twitter Instagram YouTube
    ಕನ್ನಡ     English     తెలుగు
    Sunday, January 29
    Facebook Twitter Instagram YouTube
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ     English     తెలుగు
    Facebook Twitter Instagram YouTube
    Home » ಸಮಾಜಕ್ಕೆ ಕಾನೂನು ಪಾಠ ಹೇಳುವ ಅಧಿಕಾರಿಗಳೇ ತಪ್ಪನ್ನ ಮಾಡಿದಾಗ ಪ್ರಶ್ನೆ ಮಾಡುವವರು ಯಾರು…?

    ಸಮಾಜಕ್ಕೆ ಕಾನೂನು ಪಾಠ ಹೇಳುವ ಅಧಿಕಾರಿಗಳೇ ತಪ್ಪನ್ನ ಮಾಡಿದಾಗ ಪ್ರಶ್ನೆ ಮಾಡುವವರು ಯಾರು…?

    ain userBy ain userJanuary 5, 2022
    Share
    Facebook Twitter LinkedIn Pinterest Email

    ಅಧಿಕಾರಿಗಳ ವಾಹನ ವಿಮೆ ಕೊನೆಗೊಂಡರು ನವೀಕರಣ ಮಾಡದ ಪೊಲೀಸರು.

    ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸುವ ಅಧಿಕಾರಿಗಳೇ ಕಾನೂನು ನಿಯಮವನ್ನು ಉಲ್ಲಂಘಿಸಿದ್ದಾರೆ. ಅಧಿಕಾರಿಗಳನ್ನ ಪ್ರಶ್ನೆ ಮಾಡುವವರು ಯಾರು ಇಲ್ಲವೆಂದು ನಿಯಮಗಳನ್ನೆ ಗಾಳಿಗೆ ತೂರಿದ್ದಾರೆ.

    Demo

    ಸರ್ಕಾರಿ ಅಧಿಕಾರಿಗಳ ಸಂಚಾರಕ್ಕೆ
    ಅನುಕೂಲವಾಗಲೆಂದು ಸರ್ಕಾರ ವಾಹನ ಸೌಲಭ್ಯಗಳನ್ನು ಕಲ್ಪಿಸಿದೆ ಅದರೆ ಕಾನೂನು ಸುವ್ಯವಸ್ಥೆಯ ಬಗ್ಗೆ ಸಮಾಜಕ್ಕೆ ತಿಳಿ ಹೇಳುವ ಪೊಲೀಸ್ ಅಧಿಕಾರಿಗಳ ವಾಹನಗಳ ವಿಮೆ, ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರಗಳ ಅವಧಿ ಮುಕ್ತಾಯ ಗೊಂಡು ವರ್ಷಗಳೇ ಕಳೆದರೂ ನವೀಕರಣಗೊಳಿಸದೆ ಬೇಜವಾಬ್ದಾರಿ ತೋರುತ್ತಿದ್ದಾರೆ.

    ಬೆಂಗಳೂರು ನಗರದ ವೈಟ್ ಫೀಲ್ಡ್ ಉಪ ವಿಭಾಗದ ಕಾಡು ಗುಡಿ, ವೈಟ್ ಫೀಲ್ಡ್, ಕೆ.ಆರ್.ಪುರಂ ಸಂಚಾರಿ ಠಾಣೆ ಸೇರಿದಂತೆ ವಿವಿಧ ಪೋಲಿಸ್ ಠಾಣೆಗಳಲ್ಲಿ ಪೋಲಿಸರು ಉಪಯೋಗಿಸುವಂತಹ ವಾಹನಗಳ ವಿಮೆ ಕೊನೆಗೊಂಡಿದರೂ ನವೀಕರಿಸಿದೆ ವಾಹನಗಳನ್ನು ಉಪಯೋಗಿಸುತ್ತಿದ್ದಾರೆಂದು ಆರ್ ಟಿಐ ಕಾರ್ಯಕರ್ತರಾದ ಬೆಳತ್ತೂರು ನಿವಾಸಿ ಪರಮೇಶ್ ಹಾಗೂ ವಕೀಲ ಜಗನ್ ಕುಮಾರ್ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದಾರೆ.

    ವೈಟ್ ಫೀಲ್ಡ್ ಉಪ ವಿಭಾಗದ ಡಿಸಿಪಿ ಬಳಸುವ ಇನೋವ ಕಾರ್ ಸಂಖ್ಯೆ KA 02 G 1290 ಹಾಗೂ ವೈಟ್ ಫೀಲ್ಡ್ ಠಾಣೆಯ ದ್ವಿಚಕ್ರ ಚೀತಾ ಮೋಟಾರು ಬೈಕ್ ಗಳು ಹಾಗೂ ಕಾಡುಗುಡಿಯ ಠಾಣೆಯ ಇನ್ಸ ಪೆಕ್ಟರ್ ಬಳಸುವ ವಾಹನ ಸಂಖ್ಯೆ KA 02 G 1995 ಕೂಡ ‌ವಿಮೆ ಅವಧಿ ಮುಗಿದಿದೆ ಅದೇ ರೀತಿ
    ಕೆ.ಆರ್.ಪುರ ಸಂಚಾರ ಠಾಣೆಯಲ್ಲಿ ಬಳಸುವ 10 ಕ್ಕೂ ಹೆಚ್ಚು ವಾಹನಗಳ ಮತ್ತು ಇನ್ಸ್ ಪೆಕ್ಟರ್ ಸಂಖ್ಯೆ KA 02 G 1991 ಸಂಖ್ಯೆಯ ವಾಹನಕ್ಕೆ ವಿಮೆ ಅವಧಿ ಮುಗಿದಿರುವುದು ಸರ್ಕಾರಿ ಅಪ್ಲಿಕೇಶನ್ ಎಂ ಪರಿವಾಹನ್ ನಲ್ಲಿ ಕಂಡುಬಂದಿದೆ.ಇದರ ವಿರುದ್ದ ಆರ್ಟಿಐ ಕಾರ್ಯಕರ್ತರು ದೂರನ್ನ ನೀಡಿದ್ದಾರೆ.

    ಅಪಘಾತವಾದಲ್ಲಿ ಯಾರು ಹೊಣೆ:

    ವಿಮೆ ಮುಕ್ತಾಯಗೊಂಡು ಎರಡು ವರ್ಷಗಳೇ ಕಳೆಯುತ್ತಿದ್ದರು ವಿಮೆ ನವೀಕರಣಕ್ಕೆ ಮುಂದಾಗದ ಅಧಿಕಾರಿಗಳು ರಸ್ತೆಯಲ್ಲಿ ಸಂಚರಿಸುವ ವೇಳೆ ಆಕಸ್ಮಿಕವಾಗಿ ಅಪಘಾತದಲ್ಲಿ ಮೃತ್ತಪಟ್ಟರೆ ಹಾಗೂ ಗಂಭೀರ ಸ್ವರೂಪದ ಗಾಯಗೊಂಡಲ್ಲಿ ಯಾರು ಇದ್ದಕೆ ಹೊಣೆ ಎನ್ನುವಂತಾಗಿದೆ.

    ಅನಗತ್ಯ ತಪಾಸಣೆ ಮತ್ತು ದಂಡ:

    ತುರ್ತು ಪರಿಸ್ಥಿತಿಯಲ್ಲಿ ಮತ್ತು ಕೆಲಸ ಕಾರ್ಯಗಳಿಗೆ ತೆರಳುತ್ತಿರುವ ಸಂದರ್ಭದಲ್ಲಿ ವಾಹನ ಸವಾರರನ್ನು ತಪಾಸಣೆಗೆ ಒಳಪಡಿಸಿ ದಾಖಲೆಗಳು ಸರಿಯಿದ್ದರೂ ಏನಾದರೂ ಒಂದು ದೋಷ ಹೇಳಿ ದಂಡ ವಸೂಲಿಗೆ ಮುಂದಾಗುತ್ತಾರೆ. ಸವಾರರು ತುರ್ತು ಪರಿಸ್ಥಿತಿಯನ್ನು ಒತ್ತಡವನ್ನು ಹೇಳಿಕೊಂಡು ಯಾವುದನ್ನೂ ಪರಿಗಣಿಸದೆ ದಂಡ ಹಾಕುತ್ತಾರೆ. ಅದರೆ ಇವರ ತಪ್ಪುಗಳನ್ನು ಪ್ರಶ್ನೆ ಮಾಡುವವರೇ ಇಲ್ಲಾದಂತಾಗಿದೆ.

    ತನಿಕೆಯಾಗಬೇಕು:

    ಸರ್ಕಾರದ ವಾಹನಗಳಿಗೆ ವಿಮೆ ನವೀಕರಣಕ್ಕೆ ಪ್ರತಿ ವರ್ಷ ಹಣ ಬಿಡುಗಡೆ ಯಾಗುತ್ತಿದೆಯೂ ಇಲ್ಲವೋ, ಹಣ ಬಿಡುಗಡೆಯಾದರೂ ಅಧಿಕಾರಿಗಳ ಹಣವನ್ನು ದುರ್ಬಳಕೆ ಮಾಡಿಕೊಂಡು ಕಟ್ಟುತ್ತಿದ್ದರೂ ಇಲ್ಲವೋ ಎಂಬುದನ್ನು ಸರ್ಕಾರ ತನಿಖೆ ಮಾಡಬೇಕಾಗಿದೆ.

    ಆರ್ ಟಿ ಐ ಕಾರ್ಯಕರ್ತ ಪರಮೇಶ್ ಈ ಟಿವಿ ಭಾರತ್ ಜೊತೆಗೆ ಮಾತನಾಡಿ, ಕಾನೂನು ಪಾಲನೆ ಮಾಡುವ ಪೊಲೀಸರೇ ತಪ್ಪು ಎಸಗಿದರೆ ದಂಡಿಸುವವರು ಯಾರು ? ಪ್ರತಿ ದಿನ ಸಾವಿರಾರು ತಪಾಸಣೆ ಮಾಡುವ ಮತ್ತು ತಪ್ಪು ಮಾಡಿದದವರಿಗೆ ಬುದ್ದಿ ಮಾತು ಹೇಳುವ ಕಾನೂನಿನ ರಕ್ಷಕರೇ ವಾಹನಗಳ ವಿಮೆಯನ್ನು ನವೀಕರಿಸಿದೆ ಸಂಚಾರಿಸುವ ಮೂಲಕ ಅಸಡ್ಡೆ ತೊರುತ್ತಿದ್ದಾರೆ ಎಂದು ದೂರಿದರು.ಹಲವು ಕಡೆ ಸಂಚಾರ ಮಾಡುವ ಇವರು ಯಾವುದಾದರೂ ಅಪಘಾತಗಳು ಆದಲ್ಲಿ ಯಾರು ಹೊಣೆಯಾಗುತ್ತಾರೆ ಎಂದು ಪ್ರಶ್ನೆ ಮಾಡಿದರು.

    ವಕೀಲ ಜಗನ್ ಕುಮಾರ್ ಜೊತೆ ಮಾತನಾಡಿದ ರಾಜ್ಯಾದ್ಯಂತ ಸರ್ಕಾರಿ ಅಧಿಕಾರಿಗಳ ವಾಹನಗಳ ವಿಮೆ ನವೀಕರಣಕ್ಕೆ ಹಣ ಬಿಡುಗಡೆಯಾಗಿದೆಯಾ ಅಧಿಕಾರಿಗಳು ಭ್ರಷ್ಟಾಚಾರ ಮಾಡಿದ್ದರಾ ಎಂದು ತನಿಖೆ ಮಾಡಿ ಹಗರಣವನ್ನು ಬಯಲು ಮಾಡಬೇಕು. ಪಾಠ ಮಾಡುವ ಮೇಷ್ಟ್ರುಗಳೆ ಪಾಠವನ್ನು ಕಲಿಯದಿದ್ದರೆ ಹೇಗೆ ಎಂದರು.ಕೆ.ಆರ್.ಪುರ ಸಂಚಾರಿ ಠಾಣೆಯಲ್ಲಿ 15 ಕ್ಕೂ ಹೆಚ್ಚು ವಾಹನಗಳು ಇದ್ದು ಅದರಲ್ಲಿ 10 ಕ್ಕೂ ಹೆಚ್ಚು ವಾಹನಗಳ ವಿಮೆ ಅವಧಿ ಮುಗಿದಿದ್ದು ಇದರ ವಿರುದ್ದ ಈಗಾಗಲೇ ದೂರನ್ನ ನೀಡಲಾಗಿದೆ.ಟ್ರಾಫಿಕ್ ಪೊಲೀಸರು ಮತ್ತು ಆರ್.ಟಿ.ಒ ಅಧಿಕಾರಿಗಳು ಯಾವುದೇ ಸರ್ಕಾರಿ ವಾಹನಗಳನ್ನ ತಪಸಣೆ ಮಾಡದ ಕಾರಣ ಈ ಅವ್ಯವಸ್ಥೆ ಕಂಡುಬರುತ್ತಿದೆ ಎಂದರು.ಇದರ ವಿರುದ್ದ ತನಿಖೆ ನಡೆಯಬೇಕು ಎಂದು ಮನವಿ ಮಾಡಿದರು.

    Share. Facebook Twitter LinkedIn Email WhatsApp

    Related Posts

    BBC-ಬಿಬಿಸಿ ಸಾಕ್ಷ್ಯಚಿತ್ರವನ್ನು ಸಿದ್ದರಾಮಯ್ಯ ಅವರೂ ವಿರೋಧಿಸಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    January 29, 2023

    ಶಿಕ್ಷಣ ಇಂದು ವ್ಯಾಪಾರೋದ್ಯಮವಾಗಿದೆ ಪತ್ರಕರ್ತ ಎಸ್. ಸಿದ್ದರಾಜು.

    January 29, 2023

    ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ: ಹೊತ್ತಿ ಉರಿದ ಕಾರು

    January 29, 2023

    ಟ್ರೆಕ್ಕಿಂಗ್ ಹೋಗೀ ನಂದಿಗಿರಿಧಾಮದ ಪ್ರಪಾತಕ್ಕೆ ಬಿದ್ದ ಯುವಕರು ರಕ್ಷಣೆಗಾಗಿ ಪೊಲೀಸರ ಮೊರೆ

    January 29, 2023

    ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಎಸ್‌ಟಿ ಮೀಸಲಾತಿಗಾಗಿ ಪಾದೆಯಾತ್ರೆ: ಕೆ.ಪಿ. ನಂಜುಂಡಿ ಭಾಗಿ

    January 29, 2023

    ಮೈಸೂರು ವಿವಿಯಲ್ಲಿ ರಾಜ್ಯ ಮಟ್ಟದ ಜಾನಪದ ಪ್ರಪಂಚ ಜಾನಪದ ಪ್ರಶಸ್ತಿ ಪ್ರದಾನ

    January 29, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.