ದೆಹಲಿ : ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ , ಛತ್ತೀಸ್ಗಢ ಮತ್ತು ಮಿಜೋರಾಂ ವಿಧಾನಸಭಾ ಚುನಾವಣೆಗಳಿಗೆ ಮತದಾನ ನಡೆದಿದ್ದು, ಪೋಲ್ ಸ್ಟ್ರಾಟ್ (Pollstrat) ಸಮೀಕ್ಷಾ ಸಂಸ್ಥೆಯು ಇಂದು ಮತಗಟ್ಟೆ ಸಮೀಕ್ಷೆ ಫಲಿತಾಂಶ ಪ್ರಕಟಿಸಿದೆ.
ಪ್ರಸ್ತುತ ಸಮೀಕ್ಷೆ ಪ್ರಕಾರ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ, ರಾಜಸ್ಥಾನದಲ್ಲಿ ಬಿಜೆಪಿ, ಮಧ್ಯ ಪ್ರದೇಶ ಮತ್ತು ಛತ್ತೀಸಗಢದಲ್ಲಿ ಕಾಂಗ್ರೆಸ್ ಹೆಚ್ಚಿನ ಸೀಟುಗಳನ್ನು ಗಳಿಸಲಿದೆ.
ಪೋಲ್ ಸ್ಟ್ರಾಟ್ ಸಮೀಕ್ಷಾ ಸಂಸ್ಥೆಯ ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಾರ ತೆಲಂಗಾಣದಲ್ಲಿ ಒಟ್ಟು 119 ಸೀಟುಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ 49-59, ಬಿಜೆಪಿಗೆ 5-10, ಬಿಆರ್ ಎಸ್- 48-58,ಇತರೆ ಪಕ್ಷಗಳು 6-8 ಸೀಟುಗಳನ್ನು ಗಳಿಸಿದೆ. ಮತಹಂಚಿಕೆಯ ಪ್ರತಿಶತ ಬಗ್ಗೆ ನೋಡುವುದಾದರೆ ಕಾಂಗ್ರೆಸ್ ಶೇ 41.4, ಬಿಜೆಪಿ ಶೇ 15.0, ಬಿಆರ್ ಎಸ್ ಶೇ 42, ಇತರೆ ಶೇ 1.6 ಗಳಿಸಲಿದೆ.
ರಾಜಸ್ಥಾನದ ಒಟ್ಟು 199 ಸೀಟುಗಳಲ್ಲಿ ಕಾಂಗ್ರೆಸ್ ಪಕ್ಷ 90-100, ಬಿಜೆಪಿ-100-110, ಇತರೆ 5-15 ಸೀಟುಗಳನ್ನು ಗಳಿಸಲಿದೆ. ಸೀಟು ಹಂಚಿಕೆ ಪ್ರತಿಶತ ನೋಡುವುದಾದರೆ ಕಾಂಗ್ರೆಸ್ ಶೇ 39.9, ಬಿಜೆಪಿ ಶೇ41.8, ಇತರೆ ಶೇ 18.3 ಇದೆ.
ಒಟ್ಟು 230 ಸೀಟುಗಳಿರುವ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ 111- 121 ಸೀಟು. ಬಿಜೆಪಿ 106-116, ಇತರೆ 0-6 ಸೀಟುಗಳು ಸಿಗಲಿವೆ. ಅದೇ ವೇಳೆ ಸೀಟು ಹಂಚಿಕೆ ಲೆಕ್ಕಾಚಾರ ನೋಡಿದರೆ ಕಾಂಗ್ರೆಸ್ ಪಕ್ಷ 45.6 , ಬಿಜೆಪಿ- ಶೇ 43.3, ಇತರೆ ಶೇ 11.1 ಆಗಿದೆ.
ಛತ್ತೀಸ್ಗಢದ ಒಟ್ಟು 90 ಸೀಟುಗಳಲ್ಲಿ ಕಾಂಗ್ರೆಸ್ 40-50, ಬಿಜೆಪಿ 35-45, ಇತರೆ 0-3 , ಸೀಟು ಹಂಚಿಕೆ ಪ್ರತಿಶತ ಕಾಂಗ್ರೆಸ್ ಶೇ 45, ಬಿಜೆಪಿ ಶೇ 43.8, ಇತರೆ ಶೇ 11.2 ಗಳಿಸಲಿದೆ.