ಬಿಗ್ ಬಾಸ್ ಮನೆಯ (Bigg BossKannada 10) ಆಟ ಫಿನಾಲೆಗೆ ಸಮೀಪಿಸುತ್ತಿದೆ. ದೊಡ್ಮನೆಯಲ್ಲಿ ಫ್ಯಾಮಿಲಿ ರೌಂಡ್ ಶುರುವಾಗಿದೆ. ಇದೀಗ ಮನೆಗೆ ನಮ್ರತಾ (Namratha Gowda) ತಾಯಿಯ ಆಗಮನವಾಗಿದೆ. ಮಗಳಿಗೂ ಮನೆಮಂದಿಗೂ ತಮ್ಮ ಮನೆಯ ಅಡುಗೆ ಊಟ ಬಡಿಸಿ ಸಂಭ್ರಮಿಸಿದ್ದಾರೆ. ಇದರ ನುಡವೆ ಮತ್ತೆ ಮನೆಯಲ್ಲಿ ಸ್ನೇಹಿತ್ ಕುರಿತು ಬಿಸಿ ಬಿಸಿ ಚರ್ಚೆ ನಡೆದಿದೆ.
ಬಿಗ್ ಬಾಸ್’ (Bigg Boss Kannada) ಪಾಸ್ & ಪ್ಲೇ ಎಂದು ಟಾಸ್ಕ್ ನೀಡಿದರು. ಇದನ್ನು ನೀವೆಲ್ಲರೂ ಶಿಸ್ತಿನಿಂದ ಪಾಲಿಸಬೇಕು ಅಂತ ಸ್ಪರ್ಧಿಗಳಿಗೆ ಬಿಗ್ ಬಾಸ್ ಎಚ್ಚರಿಕೆ ಕೂಡ ನೀಡಿದ್ದರು. ಅದರಂತೆ ಒಂದಷ್ಟು ಸಮಯ ಪಾಸ್, ಪ್ಲೇ ಅಂತ `ಬಿಗ್ ಬಾಸ್’ ಹೇಳಿ ಸ್ಪರ್ಧಿಗಳಿಗೆ ಸರಿಯಾಗಿ ಆಟ ಆಡಿಸಿದರು. ಈ ಟಾಸ್ಕ್ ನಿಜಕ್ಕೂ ಮನರಂಜನಾದಾಯಕವಾಗಿತ್ತು
ಬಿಗ್ ಬಾಸ್ನಲ್ಲಿದ್ದಾಗಲೇ ನಮ್ರತಾ ಹಿಂದೆ ಬಿದ್ದಿದ್ದರೂ ಸ್ನೇಹಿತ್. ಹಲವು ಪ್ರೇಮ ನಿವೇದನೆ ಮಾಡಿದ್ದರು. ಆದರೆ ನಮ್ರತಾ, ಸ್ನೇಹಿತ್ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟಿರಲಿಲ್ಲ. ಸ್ನೇಹಿತ್ (Snehith Gowda) ಎಲಿಮಿನೇಷನ್ ನಂತರ ಮಿಸ್ಸಿಂಗ್ ಫೀಲಿಂಗ್ನಲ್ಲಿದ್ರೂ ನಮ್ರತಾ. ಸ್ನೇಹಿತ್ ಮೇಲೆ ನಮ್ರತಾಗೆ ಲವ್ ಆಯ್ತಾ ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಮೂಡಿದ್ದು ಸುಳ್ಳಲ್ಲ. ಇದೀಗ ಮತ್ತೆ ಸ್ನೇಹಿತ್ ಕುರಿತು ತಾಯಿ ಬಳಿ ನಮ್ರತಾ ಮಾತನಾಡಿದ್ದಾರೆ
ಆ ವೇಳೆ ಸ್ನೇಹಿತ್ ಅವರು ನಮ್ಮನ್ನು ಕಾಂಟ್ಯಾಕ್ಟ್ ಮಾಡಿಲ್ಲ ಅಂತ ನಮ್ರತಾ ತಾಯಿ ಹೇಳಿದ್ದಾರೆ. ಸ್ನೇಹಿತ್ಗೆ ಭಯ ಆಗಿರತ್ತೆ ಅಂತ ನಮ್ರತಾ ಹೇಳಿದ್ದಾರೆ. ನಮ್ರತಾ ಗೌಡ ಮನೆಯ ಸರ್ಕಲ್ನಲ್ಲಿ ನಿನ್ನ ಫೋಟೋವನ್ನು ಹಾಕಿಡ್ತಾರೆ, ಬಂದ್ರೆ ಬಿಡಲ್ಲ ಅಂತ ಹೇಳಿ ಹೆದರಿಸಿದ್ದೆ ಎಂದು ವಿನಯ್ ಗೌಡ (Vinay Gowda) ಹೇಳಿದ್ದಾರೆ.