ಪಟಾಕಿ ಹಚ್ಚುವ ಸಂಭ್ರಮದಲ್ಲಿ ಎಚ್ಚರದಿಂದ ಇರುವುದು ಅಗತ್ಯ. ಹಬ್ಬಗಳು ಸಂತೋಷದಾಯಕ ಸಂಭ್ರಮವಾಗಿದ್ದು, ಈ ಸಂದರ್ಭದಲ್ಲಿ ಯಾವುದೇ ಅಪಘಾತಕ್ಕೆ ಒಳಗಾಗದಂತೆ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ.
ಕಣ್ಣುಗಳನ್ನು ರಕ್ಷಿಸುವ ವಿಷಯಕ್ಕೆ ಬಂದಾಗ ಕಣ್ಣಿನ ಅಪಘಾತದ ಸಂದರ್ಭದಲ್ಲಿ ಏನು ಮಾಡಬೇಕು ಎಂದು ತಿಳಿಯುವುದು ಅತ್ಯಗತ್ಯ. ಅಂತಹ ಅಪಘಾತಗಳ ಅಪಾಯವನ್ನು ಕಡಿಮೆ ಮಾಡಲು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವುದು ಅಷ್ಟೇ ಮುಖ್ಯ. ಈ ಸಂಬಂಧ ಒರ್ಬಿಸಿಟ್ ಇನ್ ಇಂಡಿಯಾ ಕಂಟ್ರಿ ನಿರ್ದೇಶಕರಾದ ಡಾ ರಿಶಿ ರಾಜ್ ಬೊರ್ಹಾ ಮಾತನಾಡಿದ್ದಾರೆ.
ಮುನ್ನೆಚ್ಚರಿಕೆ ಅಗತ್ಯ: ಪರಿಸರ ಸ್ನೇಹಿ ಪಟಾಕಿಗಳನ್ನು ಆಯ್ಕೆ ಮಾಡುವುದು, ರಕ್ಷಣಾತ್ಮಕ ಕನ್ನಡಕ ಧರಿಸುವುದು, ಸುರಕ್ಷಿತ ಅಂತರ ಕಾಪಾಡುವುದು ಮುಖ್ಯವಾಗಿದೆ. ಪಟಾಕಿ ಹೊಡೆಯುವ ಸಂದರ್ಭದಲ್ಲಿ ಮಕ್ಕಳ ಮೇಲ್ವಿಚಾರಣೆ ಮಾಡುವುದು ಅತ್ಯಗತ್ಯ ಆಗಿದ್ದು, ಅದು ಕಣ್ಣಿನ ಅಪಘಾತಗಳ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
ಅಪಘಾತವಾದ ಸಂದರ್ಭದಲ್ಲಿ ಏನು ಮಾಡಬೇಕು?: ಅನೇಕ ವೇಳೆ ಎಷ್ಟೇ ಮುನ್ನೆಚ್ಚರಿಕೆ ಪಡೆದ ಬಳಿಕವೂ ಅವಘಡಗು ಸಂಭವಿಸುತ್ತಿರುತ್ತವೆ. ನಿಮ್ಮ ಸುತ್ತಮುತ್ತ ಯಾರಿಗಾದರೂ ಪಟಾಕಿಯಿಂದ ಗಾಯಗಳಾದಾಗ ಈ ಮುನ್ನೆಚ್ಚರಿಕೆಯನ್ನು ತಕ್ಷಣಕ್ಕೆ ಪಾಲಿಸಿ.
ಶಾಂತವಾಗಿರಿ: ಕಣ್ಣಿನ ಅಪಘಾತ ಆದ ಸಂದರ್ಭದಲ್ಲಿ ಯಾವುದೇ ಗಾಬರಿ ಆಗದೇ, ಪರಿಸ್ಥಿತಿ ಎದುರಿಸಿ.
ಕಣ್ಣು ಉಜ್ಜಬೇಡಿ: ಅಪಘಾತದವಾದಾಗ ಕಣ್ಣಿಗೆ ಹಾನಿಯಾದಾಗ ಅದನ್ನು ಉಜ್ಜಬಾರದು. ಇದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ.
ಕಣ್ಣನ್ನು ತೊಳೆಯಿರಿ: ಕಣ್ಣಿನೊಳಗೆ ಯಾವುದಾದರೂ ವಸ್ತು ಗಳು ಅಥವಾ ಏನಾದರೂ ಹೊಕ್ಕಿದ್ದರೆ ಅದನ್ನು ಶುದ್ಧ ನೀರಿನಿಂದ ತೆಗೆಯುವ ಪ್ರಯತ್ನ ಮಾಡಿ. ಸಾಧ್ಯವಾದಲ್ಲಿ ಸ್ಟೆರೈಲ್ ಸಲೈನ್ ಸಲೂಷನ್ ಅನ್ನು ಬಳಕೆ ಮಾಡಬಹುದು.
ಗಾಯಗೊಂಡ ಕಣ್ಣನ್ನು ಸುರಕ್ಷಿತವಾಗಿ ಮುಚ್ಚಿ: ಕಣ್ಣಿಗೆ ಗಾಯವಾದಾಗ ಅದನ್ನು ಶುಚಿಗೊಳಿಸಿ ಮುಚ್ಚಿ. ಈ ವೇಳೆ ಕಣ್ಣಿಗೆ ಮೃದು, ಕಾಟನ್ ಬಟ್ಟೆಯನ್ನು ಹಾಕಿ. ಇದು ಕಣ್ಣಿಗೆ ಆಗುವ ಹಾನಿಯನ್ನು ತಡೆಯುತ್ತದೆ.
ತಕ್ಷಣಕ್ಕೆ ವೈದ್ಯಕೀಯ ಚಿಕಿತ್ಸೆ ಪಡೆಯಿರಿ: ಗಾಯವಾದಾಕ್ಷಣ ನಿಧಾನ ಮಾಡದೇ ತಕ್ಷಣಕ್ಕೆ ಆರೋಗ್ಯ ಸಹಾಯವನ್ನು ಪಡೆಯಿತಿ. ಸಣ್ಣ ಗಾಯಗಳು ಕೂಡ ಕಣ್ಣಿಗೆ ಹಾನಿ ಮಾಡಬಹುದು. ಈ ಹಿನ್ನೆಲೆಯಲ್ಲಿ ಹತ್ತಿರದ ಆಸ್ಪತ್ರೆಗಳ ತುರ್ತು ವಿಭಾಗಕ್ಕೆ ಭೇಟಿ ನೀಡಿ. ಚಿಕಿತ್ಸೆ ಪಡೆಯಿರಿ.
ನಿರ್ಲಕ್ಷ್ಯ ಬೇಡ: ಕಣ್ಣಿಗೆ ಯಾವುದೇ ಸಣ್ಣ ಗಾಯವಾದರೂ ಅದನ್ನು ನಿರ್ಲಕ್ಷಿಸಬೇಡಿ. ತಕ್ಷಣಕ್ಕೆ ವೈದ್ಯಕೀಯ ಚಿಕಿತ್ಸೆಗಳ ಅವಶ್ಯಕತೆ ಬೇಕು. ಅದು ಸಣ್ಣದು ಎಂಬ ಕಾರಣಕ್ಕೆ ನಿರ್ಲಕ್ಷ್ಯ ಮಾಡಿದರೆ, ಅದು ಕಣ್ಣಿನ ದೃಷ್ಟಿ ಹೀನತೆಗೆ ಕಾರಣವಾಗಬಹುದು