ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ಆರ್ಬಿ ತಂಡದ ಆಟಗಾರ ಮಿಸ್ಟರ್ 360 ಅಂತಲೇ ಪ್ರಖ್ಯಾತಿ ಪಡೆದಿರುವ ಎಬಿ ಡಿವಿಲಿಯರ್ಸ್ ಹೆಸರು ಕೇಳಿದರೆ ಸಾಕು ಅವರ ಬಗ್ಗೆ ಒಂದು ತಾಸುಗಟ್ಟಲೇ ವಿವರ ಕೊಡುವುದಲ್ಲದೇ, ಆಟದ ಕಾರ್ಯವೈಖರಿಯ ಮಾಹಿತಿಯನ್ನೇ ಬಿಚ್ಚಿಡುತ್ತಾರೆ. ಇನ್ನು ಎಬಿಡಿ ಅವರು ಐಪಿಎಲ್ನಲ್ಲಿ ತನ್ನ ಜೀವನ ಹೇಗೆ ಬದಲಾವಣೆ ಆಯಿತು ಎನ್ನುವ ಬಗ್ಗೆ ಮನ ಬಿಚ್ಚಿ ಮಾಹಿತಿ ಹಂಚಿಕೊಂಡಿದ್ದಾರೆ.
ಅಲ್ಲದೆ ಅವರು ಡೆಲ್ಲಿ ಡೇರ್ ಡೆವಿಲ್ಸ್ ಹೇಗೆ ಮೋಸ ಮಾಡಿತು ಎಂಬುದರ ಕುರಿತು ಎಳೆ ಎಳೆಯಾಗಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಹಾಗಾದರೆ ಅವರು ಏನು ಹೇಳಿದ್ದಾರೆ ಎನ್ನುವ ಇಂಟರೆಸ್ಟಿಂಗ್ ಮಾಹಿತಿಯನ್ನು ಇಲ್ಲಿ ಗಮನಿಸಿ.
ಇಂಡಿಯನ್ ಪ್ರೀಮಿಯರ್ ಲೀಗ್ನ ಪ್ರಖ್ಯಾತ ಆಟಗಾರರಲ್ಲಿ ಒಬ್ಬರಾದ ಎಬಿ ಡಿವಿಲಿಯರ್ಸ್ ಅವರು, ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮೆಕ್ಗ್ರಾತ್ ಅವರೊಂದಿಗೆ ಕಳೆದ ಕ್ಷಣಗಳ ಕುರಿತು ನೆನೆದಿದ್ದಾರೆ. ನನ್ನ ಐಪಿಎಲ್ ಪ್ರಯಾಣ 2008ರಿಂದಲೇ ಪ್ರಾರಂಭ ಆಯಿತು. ಚೊಚ್ಚಲ ಐಪಿಎಲ್ ನನಗೆ ಸೇರಿದಂತೆ ಬಹಳಷ್ಟು ಆಟಗಾರರಿಗೆ ದೊಡ್ಡ ಸಂದರ್ಭ ಆಗಿತ್ತು. ಐಪಿಎಲ್ ಆರಂಭವು ನನ್ನ ಜೀವನವನ್ನು ಬದಲಾಯಿಸಿತು ಎಂದು ತಿಳಿಸಿದರು.
ನಾನು ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ರಾಯನ್ ಚಾಲೇಂಜರ್ಸ್ ಬೆಂಗಲೂರು ಜೊತೆಗಿನ ನನ್ನ ಸಮಯ ಒಂದು ಅದ್ಭುತ ಕ್ಷಣವಾಗಿದೆ. ಇನ್ನೂ ಹಿಂದೆ ಹೋದರೆ ಗ್ಲೆನ್ ಮೆಕ್ಗ್ರಾತ್ ಅವರೊಂದಿಗೆ ಕಳೆದ ಕ್ಷಣಗಳು ಈಗಲೂ ಕಣ್ಣ ಮುಂದೆ ಬರುತ್ತವೆ. ಆದರೆ ಮೊದಲ ಮೂರು ಐಪಿಎಲ್ ಸೀಸನ್ಗಳ ನಂತರ ಅಂದಿನ ಡೆಲ್ಲಿ ಡೇರ್ ಡೆವಿಲ್ಸ್ ನನಗೆ ಮೋಸ ಮಾಡಿತು. ಮಾತು ಕೊಟ್ಟು ಕೊನೆಗೆ ನನ್ನನ್ನು ಬಿಟ್ಟುಕೊಟ್ಟಿತು ಎಂದು ನೋವು ತೋಡಿಕೊಂಡರು.