ಬೆಂಗಳೂರು : ಸಿಎಂ ಸಿದ್ದರಾಮಯ್ಯರ ಪುತ್ರ ಯತೀಂದ್ರ ಪರ ಬ್ಯಾಟ್ ಬೀಸಿರುವ ಹೆಚ್.ಡಿ. ರೇವಣ್ಣ ನಡೆ ಬಗ್ಗೆ ಮಾಜಿ ಸಿಎಂ ಹಾಗೂ ಸಹೋದರ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ.. ಇಲ್ಲಿದೆ ಉಚಿತ ಸಲಹೆ ಸರಳ ಚಿಕಿತ್ಸೆ- ಪರಿಹಾರ
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರೇವಣ್ಣರಿಗೆ ಏನು ಗೊತ್ತಿದೆ? ಅವರಿಗೆ ಹೃದಯ ವೈಶಾಲ್ಯತೆ ಇದೆ, ನಾವು ಏನು ಮಾಡೋದು? ಎಂದು ಹೇಳಿದ್ದಾರೆ.
ಬೆಳಗ್ಗೆ ಅಷ್ಟೊಂದು ಸುದ್ದಿಯಾಯ್ತ, ಮೂರು ಗಂಟೆಯವರೆಗೂ ಯಾಕೆ ದಾಖಲೆ ರಿಲೀಸ್ ಮಾಡಿಲ್ಲ. ಎರಡುವರೆ ಲಕ್ಷ ಸಿಎಸ್ಆರ್ ಪಂಢ್ ತೆಗೆದುಕೊಳ್ಳುತ್ತಿರಾ? ನಾನು ವಿಧಾನಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸುತ್ತೆನೆ. ಡುಬ್ಲಿಕೇಟ್ ಸಿಎಂಗೆ ಸಿಎಸ್ಆರ್ ಪಂಡ್ಗೆ ತುಂಬಾನೆ ಇಷ್ಟ(ಡಿಕೆಶಿಗೆ). ವಿವೇಕಾನಂದ ಅಂದ್ರೆ ಯಾರು ಅಂತಾರೆ, ಬಿಇಓ ಹೆಸರು ಗೊತ್ತಿಲ್ವಾ? ಎಂದು ಸಿಎಂ ಸಿದ್ದರಾಮಯ್ಯಗೆ ಚಾಟಿ ಬೀಸಿದ್ದಾರೆ.