ಜಗತ್ತಿನ ಶ್ರೀಮಂತ ವ್ಯಕ್ತಿ, ಟ್ವಿಟ್ಟರ್ ಸಂಸ್ಥೆ ಮಾಲಿಕ ಎಲಾನ್ ಮಸ್ಕ್ ನನಗೆ ಹಲವಾರು ದೇಶದಲ್ಲಿ ಹಲವಾರು ಜೈವಿಕ ಮಕ್ಕಳು ಇದ್ದಾರೆ ಅಂತ ಹೇಳಿಕೊಂಡಿದ್ದಾರೆ. ವಿರ್ಯದಾನದ ಮೂಲಕ ನಾನು ಹಲವು ಮಕ್ಕಳಿಗೆ ಜನ್ಮ ನೀಡಿದ್ದೇನೆ ಎಂದು ಸ್ವತಃ ಮಸ್ಕ್ ಹೇಳಿದ್ದರು. ಈಗ ಖ್ಯಾತ ಇನ್ಫ್ಲೂಯೆನ್ಸರ್ ಹಾಗೂ ಅಂಕಣಕಾರ್ತಿ ಆಶ್ಲೇಯ್ ಎಸ್ಟಿ ಕ್ಲೇರ್, ನಾನು ಎಲಾನ್ ಮಸ್ಕ್ನ 13ನೇ ಮಗುವಿಗೆ ಜನ್ಮ ನೀಡಿದ್ದೇನೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ನಾನು ಇತ್ತೀಚೆಗೆ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದೇನೆ. ಅದರ ತಂದೆ ಎಲಾನ್ ಮಸ್ಕ್. ನಾನು ಎಲಾನ್ ಮಸ್ಕ್ನ 13ನೇ ಮಗುವಿಗೆ ಜನ್ಮ ನೀಡಿದ್ದೇನೆ ಎಂದು ಹೇಳುವ ಮೂಲಕ ಖ್ಯಾತ ಇನ್ಫ್ಲೂಯೆನ್ಸರ್ ಹಾಗೂ ಅಂಕಣಕಾರ್ತಿ ಆಶ್ಲೇಯ್ ಎಸ್ಟಿ ಕ್ಲೇರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದರು. ಇದೀಗ ಈ ಬಗ್ಗೆ ಎಲಾನ್ ಮಾಸ್ಕ್ ಸ್ಪಷ್ಟನೆ ನೀಡಿದ್ದಾರೆ.
ಆಶ್ಲೇಐ ಕ್ಲೇಸ್ ಪೋಸ್ಟ್ ಗೆ ಎಲಾನ್ ಮಸ್ಕ್ ವಾವ್ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಐದು ತಿಂಗಳ ಹಿಂದೆ, ನಾನು ಹೊಸ ಮಗುವನ್ನು ಜಗತ್ತಿಗೆ ಸ್ವಾಗತಿಸಿದೆ. ಎಲೋನ್ ಮಸ್ಕ್ ಆ ಮಗುವಿನ ತಂದೆ” ಎಂದು ಲ್ಯಾಟಿನ್ ನುಡಿಗಟ್ಟಿನೊಂದಿಗೆ ಅಲಿಯಾ ಐಕ್ಟಾ ಎಸ್ಟ್ (ದಿ ಡೈ ಈಸ್ ಕಾಸ್ಟ್) ಹೇಳಿದರು.
ಮಗುವಿನ ಸುರಕ್ಷತೆಗಾಗಿ ಮಾಹಿತಿಯನ್ನು ಖಾಸಗಿಯಾಗಿಟ್ಟಿದ್ದೆ ಆದರೆ ಟ್ಯಾಬ್ಲಾಯ್ಡ್ಗಳು ಸುದ್ದಿಯನ್ನು ಪ್ರಕಟಿಸಲು ತಯಾರಿ ನಡೆಸುತ್ತಿವೆ ಎಂದು ತಿಳಿದ ನಂತರ ಸಾರ್ವಜನಿಕವಾಗಿ ಪ್ರಕಟಿಸಲು ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ. “ನಮ್ಮ ಮಗುವಿನ ಗೌಪ್ಯತೆ ಮತ್ತು ಸುರಕ್ಷತೆಯನ್ನು ರಕ್ಷಿಸಲು ನಾನು ಇದನ್ನು ಈ ಹಿಂದೆ ಬಹಿರಂಗಪಡಿಸಿಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ, ಟ್ಯಾಬ್ಲಾಯ್ಡ್ ಮಾಧ್ಯಮ ಹಾನಿಯನ್ನು ಲೆಕ್ಕಿಸದೆ ಹಾಗೆ ಸುದ್ದಿ ಪ್ರಕಟಿಸಲು ಉದ್ದೇಶಿಸಿದೆ ಎಂಬುದು ಸ್ಪಷ್ಟವಾಗಿದೆ” ಎಂದು ಆಶ್ಲೇ ಸೇಂಟ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.
ಮಸ್ಕ್ ಪ್ರತಿಕ್ರಿಯೆಯ ನಂತರ, ಸೇಂಟ್ ಕ್ಲೇರ್ ನೇರವಾಗಿ ಪ್ರತಿಕ್ರಿಯಿಸುವ ಬದಲು ಆನ್ಲೈನ್ ಊಹಾಪೋಹಗಳಲ್ಲಿ ತೊಡಗಿದ್ದಕ್ಕಾಗಿ ಮಸ್ಕ್ ನ ಟೀಕಿಸಿದ್ದಾರೆ. “ಎಲೋನ್, ನಾನು ಕಳೆದ ಹಲವಾರು ದಿನಗಳಿಂದ ಸಂವಹನ ನಡೆಸಲು ಪ್ರಯತ್ನಿಸುತ್ತಿದ್ದೇನೆ ಮತ್ತು ನೀವು ಪ್ರತಿಕ್ರಿಯಿಸಿಲ್ಲ. 15 ವರ್ಷ ವಯಸ್ಸಿನಲ್ಲಿ ನನ್ನ ಒಳ ಉಡುಪುಗಳಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿದ ವ್ಯಕ್ತಿಯ ನಿಂದನೆಗಳಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸುವ ಬದಲು ನೀವು ಯಾವಾಗ ನಮಗೆ ಉತ್ತರಿಸುತ್ತೀರಿ?” ಅವರು ಈಗ ಡಿಲೀಟ್ ಆದ ಕಾಮೆಂಟ್ನಲ್ಲಿ ಬರೆದಿದ್ದಾರೆ.
52 ವರ್ಷದ ಎಲಾನ್ ಮಸ್ಕ್, ಮೂವರು ಮಹಿಳೆಯರಿಂದ 12 ಇತರ ಮಕ್ಕಳನ್ನು ಹೊಂದಿದ್ದಾರೆ. ಅವರು ತಮ್ಮ ಮೊದಲ ಪತ್ನಿ ಜಸ್ಟಿನ್ ವಿಲ್ಸನ್ ಅವರೊಂದಿಗೆ ಐದು ಮಕ್ಕಳನ್ನು ಹೊಂದಿದ್ದಾರೆ. ಸಂಗೀತಗಾರರಾಗಿರುವ ಗ್ರಿಮ್ಸ್ ಅವರೊಂದಿಗೆ, ಮಸ್ಕ್ ಮೂವರು ಮಕ್ಕಳನ್ನು ಹೊಂದಿದ್ದಾರೆ.