ಬಿಗ್ ಬಾಸ್ ಗೆ ಹೋಗಿ ಬಂದ ಬಳಿಕ ನಟಿ ಪ್ರಿಯಾಂಕ ತಿಮ್ಮೇಶ್ ಸಖತ್ ಬ್ಯುಸಿಯಾಗಿದ್ದಾರೆ. ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ನಟಿಸಿದ್ದರು ಹೆಚ್ಚು ಖ್ಯಾತಿ ಘಳಿಸಿದ ಪ್ರಿಯಾಂಕ ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗಿ ಬಂದ ಬಳಿಕ ಸಖತ್ ಖ್ಯಾತಿ ಘಳಿಸಿದ್ದಾರೆ.
ಈ ಮೊದಲು ಬಬ್ಲಿ ಬಬ್ಲಿಯಾಗಿದ್ದ ಪ್ರಿಯಾಂಕಾ ತಿಮ್ಮೇಶ್ ಈಗ ಭರ್ಜರಿ ವರ್ಕೌಟ್ ಮಾಡುತ್ತಾ ಸಖತ್ ಸ್ಲಿಮ್ ಆಗಿದ್ದಾರೆ. ತಾನು ಎಷ್ಟೊಂದು ಸ್ಲಿಮ್ ಆಗಿದ್ದೇನೆ ಎಂನುದನ್ನು ನಟಿ ಟೀ ಶರ್ಟ್ ಎತ್ತಿ ತರಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಅಷ್ಟಾಗಿ ಆಕ್ಟೀವ್ ಆಗಿಲ್ಲದ ಪ್ರಿಯಾಂಕಾ ತಿಮ್ಮೇಶ್ ಎರಡ್ಮೂರು ವರ್ಷಗಳ ಹಿಂದೆ ಬಿಗ್ ಬಾಸ್ ಸೀಸನ್ -8ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಪ್ರವೇಶ ಪಡೆದು ರಾಜ್ಯದಾದ್ಯಂತ ಎಲ್ಲರಿಗೂ ಪರಿಚಿತಳಾಗಿದ್ದಾಳೆ.
ಕನ್ನಡ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಪ್ರಿಯಾಂಕ ತಿಮ್ಮೇಶ್ ತಮ್ಮ ಸೌಂದರ್ಯ ಹಾಗೂ ಪ್ರತಿಭೆಯಿಂದ ದಕ್ಷಿಣ ಭಾರತದ ಕನ್ನಡ, ತಮಿಳು ಹಾಗೂ ಮಲೆಯಾಳಂ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆದರೆ, ಸ್ಟಾರ್ ನಟರೊಂದಿಗೆ ನಟಿಸುವ ಅವಕಾಶಗಳಿಂದ ವಂಚಿತರಾಗಿದ್ದಾರೆ. ಈವರೆಗೆ ಪ್ರಿಯಾಂಕ ನಟನೆಯ ಯಾವುದೇ ಸಿನಿಮಾಗಳು ಸೂಪರ್ ಹಿಟ್ ಎನಿಸಿಕೊಂಡಿಲ್ಲ.
ಕನ್ನಡತಿ ಪ್ರಿಯಾಂಕ ತಿಮ್ಮೇಶ್ ಬಿಗ್ ಬಾಸ್ ಮನೆಯಲ್ಲಿದ್ದಾಗ ತಾನು ಯಾವುದೇ ಡಯಟ್ ಮಾಡುವುದಿಲ್ಲ, ವರ್ಕೌಟ್ ಮಾಡುವುದಿಲ್ಲ, ಸ್ವಲ್ಪ ಯೋಗ ಮಾಡುವುದಾಗಿ ತಿಳಿಸಿದ್ದರು. ಆದರೆ, ಅಲ್ಲಿದ್ದವರು ನೀನು ನಟಿಯಾಗಿದ್ದರೂ ಇಷ್ಟು ದಪ್ಪಗಿದ್ದೀಯ, ವರ್ಕೌಟ್ ಮಾಡಿ ದೇಹವನ್ನು ಕರಗಿಸುವಂತೆ ಕೆಲವರು ಸಲಹೆಯನ್ನೂ ನೀಡಿದ್ದರು. ಇದಾದ ನಂತರ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಾಕ್ಷಣ ಆಕೆಗಿದ್ದ ಖ್ಯಾತಿಗೆ ಮತ್ತಷ್ಟು ಸಿನಿಮಾಗಳಲ್ಲಿ ಅವಕಾಶವೂ ಸಿಕ್ಕಿತ್ತು.
ಇತ್ತೀಚೆಗೆ ಪ್ರಿಯಾಂಕ ಹಾರ್ಡ್ ವರ್ಕೌಟ್ ಹಾಗೂ ಕಠಿಣ ಡಯಟ್ ಅನ್ನು ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾನು ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ ಆಗಿರುವ ಪ್ರಿಯಾಂಕ ಮಾಡ್ರನ್ ನಟಿಗೆ ಇರುವ ಎಲ್ಲ ಅರ್ಹತೆಗಳನ್ನು ಮೈಗೂಡಿಸಿಕೊಂಡಿದ್ದಾರೆ. ತಮ್ಮ ಹಾಟ್ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಂಡು ಅಭಿಮಾನಿಗಳ ಸಂಖ್ಯೆಯನ್ನೂ ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಇದೇ ರೀತಿ ಬುಧವಾರವೂ ಜಿಮ್ ವರ್ಕೌಟ್ ಮಾಡಿದ ಪ್ರಿಯಾಂಕ ತಮ್ಮ ಟೀಶರ್ಟ್ ಅನ್ನು ಎತ್ತಿ ತೋರಿಸಿದ್ದಾರೆ. ಇದನ್ನು ನೋಡಿದವರಿಗೆ ಅಸಲಿಯಾಗಿ ಯಾವ ಉದ್ದೇಶದಿಂದ ತೋರಿಸುತ್ತಿದ್ದಾರೆ ಎಂಬುದೇ ಗೊಂದಲ ಉಂಟುವಾಡುವಂತಿದೆ. ಆದರೆ, ತಾನು ಸಣ್ಣಗಾಗಿರುವ ಫೋಟೋಗಳನ್ನು, ಬೆಲ್ಲಿ ಫ್ಯಾಟ್ ಕರಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ತಮ್ಮ ಫೋಟೋ ಹಂಚಿಕೊಂಡಿರುವ ಪ್ರಿಯಾಂಕ ತಿಮ್ಮೇಶ್ ‘ತೂಕವನ್ನು ಕಳೆದುಕೊಳ್ಳುವುದು ಜೀವನದಲ್ಲಿ ತುಂಬಾ ಕಷ್ಟಕರವಾದ ಕೆಲಸ. ನೀವು ಅದನ್ನು ಒಮ್ಮೆ ಮಾಡಿದರೆ, ಅದಕ್ಕಿಂತ ಸುಲಭವಾದದ್ದು ಯಾವುದೂ ಇಲ್ಲ. ಸೌಂದರ್ಯ ನಮ್ಮ ಕೈಯಲ್ಲಿದೆ. ಜಗತ್ತಿಗೆ ನಮ್ಮನ್ನು ನಾವು ಹೇಗೆ ಪ್ರಸ್ತುತಪಡಿಸುತ್ತೇವೆ ಎಂಬುದು ನಮ್ಮ ಗುರಿ. ಕೊನೆಯ ಫೋಟೋವನ್ನು ನೋಡಲು ಮರೆಯದಿರಿ’ ಎಂದು ಟ್ಯಾಗ್ ಬರೆದುಕೊಂಡಿದ್ದಾರೆ.
ಗಣಪ ಸಿನಿಮಾ ಖ್ಯಾತಿಯ ಪ್ರಿಯಾಂಕ ತಿಮ್ಮೇಶ್ ಕೈಯಲ್ಲಿ ಪ್ರಸ್ತುತ ಎರಡು ಸಿನಿಮಾಗಳಿವೆ. ಅರ್ಜುನ್ ಗೌಡ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಉಳಿದಂತೆ ಶುಗರ್ಲೆಸ್ ಸಿನಿಮಾ ಚಿತ್ರೀಕರಣ ಹಂತದಲ್ಲಿದೆ. ಈ ಸಿನಿಮಾಗಳಿಂದಲಾದರೂ ಬಿಗ್ ಬ್ರೇಕ್ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಜೊತೆಗೆ, ತಾವು ತೆಳ್ಳಗಾಗುತ್ತಿದ್ದು, ಹೆಚ್ಚಿನ ಸಿನಿಮಾ ಆಫರ್ಗಳು ಬರುವ ನಿರೀಕ್ಷೆಯಲ್ಲಿದ್ದಾರೆ.