ಮಣ್ಣಿನ ಮಡಕೆ ಹಾಗೂ ಇತರ ಪಾತ್ರೆಗಳನ್ನು ಬಳಸಿಕೊಂಡರೆ ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಿಂದಿನಿಂದಲೂ ನಾವೆಲ್ಲರೂ ಮಣ್ಣಿನ ಪಾತ್ರೆಗಳಲ್ಲಿ ಹೆಚ್ಚಾಗಿ ಅಡುಗೆಗೆ ಬಳಸುತ್ತಿದ್ದೆವು. ಮಣ್ಣಿನ ಪಾತ್ರೆಯಲ್ಲಿ ಬೇಯುವಂತಹ ಆಹಾರವು ಹೆಚ್ಚಿನ ಪೋಷಕಾಂಶಗಳನ್ನು ಉಳಿಸಿಕೊಳ್ಳುವುದು ಎಂದು ಪರಿಗಣಿಸಲಾಗಿದೆ. ಅದೇ ರೀತಿಯಾಗಿ ಮಣ್ಣಿನ ಪಾತ್ರೆಯಲ್ಲಿ ನೀರನ್ನು ತುಂಬಿಟ್ಟರೆ ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಅದು ತುಂಬಾ ತಂಪಾಗಿ ಇರುವ ಕಾರಣದಿಂದಾಗಿ ಪ್ರಿಡ್ಜ್ ನಲ್ಲಿ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ತುಂಬಿಡಬೇಕಾದ ಪರಿಸ್ಥಿತಿ ಇರಲ್ಲ
ಕೇವಲ 7 ಸೆಕೆಂಡುಗಳಲ್ಲಿ ಹೃದ್ರೋಗ ಪತ್ತೆಹಚ್ಚುವ AI ಆ್ಯಪ್ ಸಿದ್ಧಪಡಿಸಿದ 14 ವರ್ಷದ ಬಾಲಕ!
ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತಾಪಮಾನ ಏರಿಕೆ ಆಗಿದೆ. ಈ ಸಮಯದಲ್ಲಿ ಬಾಯಾರಿಕೆ ಹೆಚ್ಚಾಗಿರುತ್ತದೆ. ಹೀಗಾಗಿ ಎಷ್ಟೇ ನೀರು ಕುಡಿದರೂ ಅದು ನಮಗೆ ಸಾಕಾಗುವುದಿಲ್ಲ ಎಂದೇ ಅನಿಸುತ್ತದೆ. ಅನೇಕ ಮಂದಿ ಬೇಸಿಗೆಯ ಉಷ್ಣತೆ ಸಹಿಸಲಾಗದೇ ಫ್ರಿಡ್ಜ್ ನೀರನ್ನು ಕುಡಿಯುತ್ತಾರೆ. ಆದರೆ ಫ್ರಿಡ್ಜ್ನ ನೀರು ಕುಡಿಯೋದರಿಂದ ಶೀತವಾಗುತ್ತದೆ, ಗಂಟಲು ನೋವು ಶುರುವಾಗುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕ ಕೂಡ.
ಆದರೆ ಬೇಸಿಗೆಗಾಲದಲ್ಲಿ ಮಡಿಕೆಯಲ್ಲಿಟ್ಟ ನೀರು ಫ್ರಿಡ್ಜ್ನಲ್ಲಿಟ್ಟ ನೀರಿನಷ್ಟು ತಂಪಾಗದಿದ್ದರೂ, ಕುಡಿಯಲು ತಂಪಾಗಿರುತ್ತದೆ. ಅಲ್ಲದೇ ಬೇಸಿಗೆಯ ಬಿಸಿಲಿನಿಂದ ಹರಡುವ ಕೆಲವೊಂದಷ್ಟು ರೋಗಗಳನ್ನು ತಡೆಗಟ್ಟಲು ಮಣ್ಣಿನ ಮಡಿಕೆ ನೀರು ಅತ್ಯುತ್ತಮ ನೈಸರ್ಗಿಕ ಔಷಧವಾಗಿದೆ. ಇದಕ್ಕಾಗಿ ಎಷ್ಟೋ ಮಂದಿ ಹೊಸ ಮಡಿಕೆಗಳನ್ನು ಖರೀದಿಸಿ ಮನೆಗೆ ತರುತ್ತಾರೆ. ನೀವು ಸಹ ಮಾರುಕಟ್ಟೆಗೆ ಹೋದಾಗ ವಿವಿಧ ಬಣ್ಣದ ತೆಪೆಗಳಿರುವ ಮಡಿಕೆಗಳನ್ನು ಕಾಣಬಹುದು. ಅದರಲ್ಲಿ ಮುಖ್ಯವಾಗಿ ಕೆಂಪು, ಕಪ್ಪು ಮತ್ತು ಬಿಳಿ ಪತಂಗಗಳಿರುವ ಮಡಿಕೆಗಳನ್ನು ನೀವು ಗಮನಿಸಿರುತ್ತೀರಿ.
ಇಂತಹ ವೇಳೆ ನಿಮಗೆ ಯಾವ ಬಣ್ಣದ ಮಡಿಕೆಗಳನ್ನು ಖರೀದಿಸಬೇಕು? ಯಾವ ಬಣ್ಣದ ಮಡಿಕೆಯಲ್ಲಿ ನೀರು ಕುಡಿಯುವುದು ಹೆಚ್ಚು ಪ್ರಯೋಜನಕಾರಿ ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸುತ್ತದೆ. ಇನ್ನೂ ಈ ಬಗ್ಗೆ ತಜ್ಞರು ಏನು ಹೇಳುತ್ತಾರೆಂದು ನೋಡೋಣ ಬನ್ನಿ.
ವಾಸ್ತವವಾಗಿ ಹೇಳುವುದಾದರೆ ಈ ಮೂರು ಮಡಿಕೆಗಳಲ್ಲಿಯೂ ನೀರು ಕುಡಿಯುವುದು ದೇಹಕ್ಕೆ ಒಳ್ಳೆಯದು. ಆದರೂ ಕಪ್ಪು ಜೇಡಿಮಣ್ಣಿನ ಮಡಿಕೆಯ ನೀರು ಕುಡಿಯುವುದು ಉತ್ತಮ. ಏಕೆಂದರೆ ಇದು ನೀರನ್ನು ಬೇಗನೆ ತಂಪಾಗಿರಿಸುತ್ತದೆ. ಕಪ್ಪು ಬಣ್ಣವು ಶಾಖವನ್ನು ಬೇಗನೆ ಹೀರಿಕೊಳ್ಳುತ್ತದೆ. ಆದ್ದರಿಂದ, ಕಪ್ಪು ಮಡಿಕೆಯಲ್ಲಿರುವ ನೀರು ತುಲನಾತ್ಮಕವಾಗಿ ಬೇಗನೆ ತಣ್ಣಗಾಗುತ್ತದೆ.
ಕೆಂಪು ಮತ್ತು ಬಿಳಿ ಮಡಿಕೆಗಳ ನೀರು ಸಹ ದೇಹಕ್ಕೆ ಪ್ರಯೋಜನಕಾರಿ ಆಗಿದೆ. ಆದರೆ, ಇದು ಕಪ್ಪು ಬಣ್ಣದ ಮಡಿಕೆ ನೀರಿನಷ್ಟು ವೇಗವಾಗಿ ತಣ್ಣಗಾಗುವುದಿಲ್ಲ. ಆದರೂ, ಈ ಎರಡೂ ಮಡಿಕೆಗಳನ್ನೂ ಸಹ ಆಯ್ಕೆ ಮಾಡಿಕೊಳ್ಳುವುದು ಉತ್ತಮವೆಂದು ಪರಿಗಣಿಸಲಾಗುತ್ತದೆ
ಮಡಿಕೆ ಖರೀದಿಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಚಾರಗಳು: ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕೆಲವು ಮಡಿಕೆಗಳ ತಯಾರಿಸಲು ಸಿಮೆಂಟ್ ಅನ್ನು ಬಳಸಲಾಗುತ್ತದೆ. ಆದ್ದರಿಂದ, ಮಡಿಕೆಗಳನ್ನು ಖರೀದಿಸುವಾಗ ನೀವು ಉತ್ತಮವಾದದನ್ನು ಖರೀದಿಸುತ್ತಿದ್ದೀರಾ ಎಂಬುವುದನ್ನು ಖಚಿತಪಡಿಸಿಕೊಳ್ಳಬೇಕು
ನಿಜವಾದ ಮಣ್ಣಿನ ಮಡಕೆಯನ್ನು ಗುರುತಿಸುವುದು ಹೇಗೆ?: ಮಣ್ಣು ಹಗುರವಾಗಿರುತ್ತದೆ. ಆದರೆ ಸಿಮೆಂಟ್ ಮಿಶ್ರಿತ ಗಾರೆ ಭಾರವಾಗಿರುತ್ತದೆ. ಆದ್ದರಿಂದ, ಮಡಿಕೆಯ ತೂಕದ ಬಗ್ಗೆ ಜಾಗರೂಕರಾಗಿರಿ. ಮಣ್ಣಿನ ಕೊಳದಲ್ಲಿನ ನೀರು ಸ್ವಾಭಾವಿಕವಾಗಿ ತಂಪಾಗಿರುತ್ತದೆ.
ಕೊನೆಯದಾಗಿ ನಾವು ಯಾವ ರೀತಿಯ ಮಡಿಕೆಯನ್ನು ಆಯ್ಕೆ ಮಾಡಬೇಕು?: ಜೇಡಿಮಣ್ಣು ಯಾವುದೇ ಬಣ್ಣದ್ದಾಗಿರಲಿ, ಅದು ನೈಸರ್ಗಿಕ ಜೇಡಿಮಣ್ಣಾಗಿದ್ದು, ಇದರಿಂದ ಮಡಿಕೆಯನ್ನು ತಯಾರಿಸಿದ್ದರೆ, ಇಂತಹ ಮಡಿಕೆಯ ನೀರು ಆರೋಗ್ಯಕ್ಕೆ ಒಳ್ಳೆಯದು. ಆದರೂ, ನೀವು ಸಾಧ್ಯವಾದಷ್ಟು ತಂಪಾಗಿರುವ ನೀರನ್ನು ಕುಡಿಯಲು ಬಯಸುವುದಾದರೆ, ಕಪ್ಪು ಬಣ್ಣದ ಮಡಿಕೆ ನೀರು ಅತ್ಯುತ್ತಮ ಆಯ್ಕೆಯಾಗಿದೆ.