ಮಹಿಳೆಯರು ತುಟಿಗಳ ಕುರಿತಾಗಿ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ. ಕೆಲವೊಮ್ಮೆ ಒಣಗಿದ ತುಟಿ, ತುಟಿಯ ಚರ್ಮ ಕಿತ್ತು ಬರುವ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ತುಟಿ ಒಣಗಲು ಮತ್ತು ಚರ್ಮ ಕಿತ್ತುಬರಲು ಕಾರಣ ಮತ್ತು ಪರಿಹಾರವೇನು ಇಲ್ಲಿದೆ ಮಾಹಿತಿ.
ತುಟಿಗಳು ಒಣಗುವುದು ಚಳಿಗಾಲದಲ್ಲಿ ಮಾತ್ರ ಎನ್ನುವ ಭಾವನೆ ತಪ್ಪು. ಬೇಸಿಗೆ ಕಾಲದಲ್ಲಿಯೂ ತುಟಿ ಡ್ರೈ ಆಗುತ್ತೆ. ತುಟಿಯ ಚರ್ಮವು ದೇಹದ ಇತರರ ಭಾಗಗಳ ಚರ್ಮಕ್ಕಿಂತ ತೆಳ್ಳಗೆ ಮತ್ತು ಮೃದುವಾಗಿರುತ್ತದೆ. ಹಾಗಾಗಿ ತುಟಿಯ ಚರ್ಮದ ಕುರಿತಾಗಿ ವಿಶೇಷ ಕಾಳಜಿಯನ್ನು ವಹಿಸಬೇಕಾಗುತ್ತದೆ.
ತುಟಿಗಳಲ್ಲಿ ಕಡಿಮೆ ಪ್ರಮಾದ ತೈಲ ಗ್ರಂಥಿಗಳಿರುತ್ತವೆ. ಶೀತ, ಶುಷ್ಕಗಾಳಿ, ತುಟಿಯುನ್ನು ಒಣಗುವಂತೆ ಮಾಡುತ್ತದೆ. ಇದರಿಂದ ತುಟಿಯ ಚರ್ಮ ಒಣಗಿ ಸಿಪ್ಪೆಯಂತಾಗಿ ಕಿತ್ತು ಬರುತ್ತದೆ. ಚಳಿಗಾಲದಲ್ಲಿ ಹೆಚ್ಚಾಗಿ ತುಟಿಗಳು ಬಿರುಕು ಬಿಡುವುದು, ಚಪ್ಪಟೆಯಂತಾಗುವುದು ಸಹಜವಾಗಿದೆ. ಚಳಿಗಾಲದಲ್ಲಿ ತುಟಿ ಒಣಗಿದಂತಾಗಿ ಚರ್ಮ ಕಿತ್ತು ಬರುವುದು ಮಹಿಳೆಯರಿಗರೆ ಕಿರಿಕಿರಿಯನ್ನು ಉಂಟುಮಾಡುತ್ತದೆ. ಹೊರಗೆ ಹೋಗುವಾಗ ಮಹಿಳಿಯರು ಟೈಟಾನಿಯಂ ಡೈ ಆಕ್ಸೈಡ್ ಮತ್ತು ಜೆನಿಕ್ ಆಕ್ಸೈಡ್ ಅಂಶವನ್ನು ಹೊಂದಿರುವ ಸನ್ಸ್ಕ್ರೀನ್ ಬಳಕೆಯನ್ನು ಮಾಡುತ್ತಾರೆ. ಆದರೂ ತುಟಿಯ ಚರ್ಮ ಒಣಗುತ್ತದೆ.
ಒಣಗಿದ ತುಟಿಗೆ ಕಾರಣಗಳೇನು?
* ನೀರಿನ ಕೊರತೆ : ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ತುಟಿಗಳು ಶುಷ್ಕತೆಯಿಂದ ಕೂಡಿರುತ್ತವೆ. ಹಾಗಾಗಿ ಚೆನ್ನಾಗಿ ನೀರು ಕುಡಿಯಬೇಕು.