ಮೂವರು ಯುವಕರು ವಾಹನದಲ್ಲಿ ಬರುತ್ತಿದ್ದ ವೇಳೆ ಆನೆಗಳ ಹಿಂಡು ರಸ್ತೆ ದಾಟುತ್ತಿತ್ತು ಈ ವೇಳೆ ಮೂವರು ಯುವಕರು ಆನೆಗಳ ಜೊತೆ ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ. ಇದನ್ನು ದೂರದಲ್ಲಿ ಇದ್ದ ಇತರರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಇನ್ನು ಸೆಲ್ಫಿ ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ಒಂದು ಆನೆ ಈ ಮೂವರನ್ನು ಅಟ್ಟಾಡಿಸಿಕೊಂಡು ಬಂದಿದೆ ಈ ವೇಳೆ ಮೂವರು ಜೀವ ಭಯದಲ್ಲಿ ಓಡಿ ಬಂದಿದ್ದಾರೆ ಓಡುವ ಭರದಲ್ಲಿ ಓರ್ವ ರಸ್ತೆಯಲ್ಲೇ ಬಿದ್ದಿದ್ದು ಮೊಬೈಲ್ ಬಿಟ್ಟು ಓಡಿದ ಘಟನೆ ವಿಡೀಯೋ ವೈರಲ್ ಆಗುತ್ತಿದೆ.

