ಮ್ಯಾಕ್ಸ್ ಸಿನಿಮಾ ಮೂಲಕ ಪೇಕ್ಷಕಪ್ರಭುವಿಗೆ ಮ್ಯಾಕ್ಸಿಮ್ ಎಂಟರ್ ಟೈನ್ಮೆಂಟ್ ಕೊಟ್ಟಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಭತ್ತಳಿಕೆಯಿಂದ ಬರ್ತಿರುವ ಬಹುನಿರೀಕ್ಷಿತ ಸಿನಿಮಾ ಬಿಲ್ಲ ರಂಗ ಭಾಷಾ. ಇನ್ನೇನೂ ಕೆಲ ದಿನಗಳಲ್ಲಿ ಕಿಚ್ಚ ಶೂಟಿಂಗ್ ಅಖಾಡಕ್ಕೆ ಇಳಿಯಲಿದ್ದಾರೆ. ಅದಕ್ಕಾಗಿ ಬೆಂಗಳೂರಿನಲ್ಲಿ 3 ಬೃಹತ್ ಸೆಟ್ ಗಳು ರೆಡಿಯಾಗಿವೆ. ಶೀಘ್ರದಲ್ಲೇ ಬಿಲ್ಲ ರಂಗ ಭಾಷಾ ಚಿತ್ರೀಕರಣಕ್ಕೆ ಕಿಕ್ ಸ್ಟಾರ್ಟ್ ಸಿಗಲಿದೆ.
ಈ ಬಾರಿ ಹೊಸ ಪ್ರಯೋಗಕ್ಕೆ ರಂಗಿತರಂಗ ಸಾರಥಿ ಅನೂಪ್ ಭಂಡಾರಿ ಯೋಜನೆ ಹಾಕಿಕೊಂಡಿದ್ದಾರೆ. ಬಿಲ್ಲ ರಂಗ ಭಾಷಾನಿಗಾಗಿ ದೊಡ್ಡ ಪ್ಲಾನ್ ಹಾಕಿಕೊಂಡಿದ್ದು, ಹಾಲಿವುಡ್ ಸಿನಿಮಾಗಳ ರೀತಿ ಕಟ್ಟಿಕೊಡುವ ತಯಾರಿಯಲ್ಲಿದ್ದಾರೆ. ಪಕ್ಕ ಔಟ್ ಅಂಡ್ ಔಟ್ ಕಮರ್ಷಿಯಲ್ ಚಿತ್ರ ಇದಾಗಿದ್ದು, ಸುದೀಪಿಯನ್ಸ್ ಗೆ ಭರ್ಜರಿ ಇಷ್ಟವಾಗಲಿದೆಯಂತೆ. ಭಾರತೀಯ ಹಿನ್ನೆಲೆಯಲ್ಲಿ ಬಿಲ್ಲ ರಂಗ ಭಾಷಾ ಮೂಡಿ ಬರಲಿದ್ದು, ಕಿಚ್ಚನಿಗಾಗಿಯೇ ಬರೆದ ಕಥೆ ಎಂದು ನಿರ್ದೇಶಕ ಅನೂಪ್ ಭಂಡಾರಿ ಹೇಳಿದ್ದಾರೆ.
ಹಾಲಿವುಡ್ ಲೆವೆಲ್ ನಲ್ಲಿ ಸಿದ್ಧವಾಗುತ್ತಿರುವ ಸಿನಿಮಾ ಅಂದ್ಮೇಲೆ ಸಮಯ ಹಿಡಿಯುತ್ತದೆ. ಇನ್ನೂ ಚಿತ್ರೀಕರಣ ಆರಂಭವಾಗಬೇಕಿದೆ. ಹೀಗಾಗಿ ಈ ವರ್ಷ ಬಿಲ್ಲ ರಂಗ ಭಾಷಾ ದರ್ಶನ ಅಸಾಧ್ಯ. ಮುಂದಿನ ವರ್ಷವೇ ಕಿಚ್ಚನ ಸಿನಿಮಾ ತೆರೆಗೆ ಬರುವುದು. ಅಂದಹಾಗೇ ಟಾಲಿವುಡ್ ನಲ್ಲಿ ಹನುಮಾನ್ ಚಿತ್ರ ನಿರ್ಮಿಸಿದ್ದ ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಲ್ಲ ರಂಗ ಭಾಷಾ ಸಿನಿಮಾ ತೆರೆಗೆ ಬರಲಿದ್ದು, ಅದಕ್ಕೆ ತಕ್ಕಂತೆ ಪಾತ್ರ ವರ್ಗ ಕೂಡ ಇರಲಿದೆ.