ಚಿತ್ರದುರ್ಗ: ಎಲ್ಲ ಜಾತಿಯಲ್ಲೂ ರಾಮಭಕ್ತರಿದ್ದಾರೆ. ಬಿಜೆಪಿಯವರು ರಾಮನ ಹೆಸರು ದುರುಪಯೋಗ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್ ಆಂಜನೇಯ ಆರೋಪಿಸಿದರು. ಚಿತ್ರದುರ್ಗದಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ರಾಮಮಂದಿರ ಉದ್ಘಾಟನಾ ಕಾರ್ಯಕ್ರಮ ಆಹ್ವಾನ ಪತ್ರಿಕೆ ಕಾಂಗ್ರೆಸ್ ಪಕ್ಷ ಯಾಕೆ ತಿರಸ್ಕರಿಸಿದೆ ಎಂಬುದು ನಿಮಗೆಲ್ಲರಿಗೂ ಗೊತ್ತಿದೆ.
ಇನ್ನೂ ದೇವಸ್ಥಾನವೇ ಪೂರ್ಣ ಆಗಿಲ್ಲ ಉದ್ಘಾಟನೆ ಮಾಡಲು ಹೊರಟಿದ್ದಾರೆ. ಲೋಕಸಭಾ ಚುನಾವಣೆ ಲಾಭ ಪಡೆಯಲು ತರಾತುರಿಯಲ್ಲಿ ದೇಗುಲ ನಿರ್ಮಾಣ ಮಾಡ್ತಿದ್ದಾರೆ. ಎಲೆಕ್ಷನ್ ಆದಮೇಲೆ ಮಾಡಬೇಕಿತ್ತು. ಆದರೆ ಚುನಾವಣೆಯಲ್ಲಿ ರಾಮನ ಹೆಸರು ಹೇಳಿಕೊಂಡು ವೋಟ್ ಪಡೆಯಬಹುದು ಲೆಕ್ಕಾಚಾರದಲ್ಲಿ ಮಾಡ್ತಿದ್ದಾರೆ.
ಹೀಗಾಗಿ ಬಿಜೆಪಿಯವರು ಉದ್ಘಾಟನೆ ಮಾಡ್ತಿರೋ ಪೂಜೆಗೆ ನಾವು ಹೋಗಲ್ಲ ಅಂತ ಹೇಳಿದ್ದೇವೆ ಅಷ್ಟೇ ಎಂದರು. ನಾವು ಹಿಂದೂಗಳಲ್ಲ ಅಂತಾ ಎಲ್ಲೂ ಹೇಳಿಲ್ಲ, ರಾಮನ ಪೂಜೆಗೆ ನಮ್ಮ ವಿರೋಧವಿಲ್ಲ. ನಾವೆಲ್ಲರೂ ಹಿಂದೂಗಳೇ, ರಾಮನ ಪೂಜೆಯನ್ನೂ ಮಾಡುತ್ತಿಲ್ವೇ? ನಾವೆಲ್ಲ ರಾಮನ ಭಕ್ತರೇ. ಬಿಜೆಪಿ ರಾಮನ ಹೆಸರಲಿ ರಾಜಕೀಯ ಮಾಡ್ತಿರೋದ್ರಿಂದ ನಾವು ಹೋಗಲ್ಲ ಅಂತ ಹೇಳಿದ್ದೇವೆ ಎಂದರು.