ದೇವನಹಳ್ಳಿ ;- ನಾವು ಕೊಟ್ಟ ಮಾತಿನಂತೆ ಶೀಘ್ರದಲ್ಲೇ 10 ಕೆಜಿ ಅಕ್ಕಿಯನ್ನು ಕೊಡುತ್ತೇವೆ ಎಂದು ಸಚಿವ ಕೆ ಹೆಚ್ ಮುನಿಯಪ್ಪ ಹೇಳಿದ್ದಾರೆ.
ದೇವನಹಳ್ಳಿಯಲ್ಲಿ ಮಾತನಾಡಿದ ಅವರು, ಕೇಂದ್ರ ಅಕ್ಕಿ ಕೊಡಲು ನಿರಾಕರಣೆ ಹಿನ್ನೆಲೆ, ಕೇಂದ್ರದ ಸಾಂಸ್ಥಿಕ ಸಂಸ್ಥೆಗಳ ಮೂಲಕ ಅಕ್ಕಿ ಕೊಡಲು ಪ್ಲಾನ್ ರೂಪಿಸಿದ್ದೇವೆ” ಎಂದರು.

ಶಿಘ್ರದಲ್ಲೇ ಅಕ್ಕಿಯನ್ನು ಕೊಡುತ್ತೇವೆ. ನಮ್ಮದೇಯಾದಂತಹ ಪ್ಲಾನ್ ರೂಪಿಸಿದ್ದೇವೆ. ಬೆಳಗ್ಗೆ ಒಂದು ಸಭೆ ಮಾಡಿದ್ದೇನೆ. ಸಂಜೆ ವೇಳೆ ಮುಖ್ಯಮಂತ್ರಿಗಳ ಜೊತೆಗೆ ಪೈನಲ್ ಮಾತುಕತೆ ನಡೆಸಲಿದ್ದೇವೆ. ಆದಾದ ನಂತರ, 15 ರಿಂದ 20 ದಿನಗಳ ಒಳಗೆ ಸಮಯ ನೀಡುತ್ತೇವೆ. ಅಷ್ಟರೊಳಗೆ ಅಕ್ಕಿ ಪೂರೈಕೆ ಮಾಡಬೇಕು ಎಂದು ಹೇಳಿದ್ದೇವೆ” ಎಂದು ಮುನಿಯಪ್ಪ ತಿಳಿಸಿದರು.
ನಿಮ್ಮ ಗ್ಯಾರಂಟಿಯನ್ನು ಬಿಜೆಪಿ ಫುಲ್ ಫಿಲ್ ಮಾಡಬೇಕಾ ಎನ್ನುವ ಬಿಜೆಪಿ ನಾಯಕ ಆರ್ ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಮುನಿಯಪ್ಪ ಅವರು, ”ನಾವು ಕೇಳ್ತಿರೋದು ಭಾರತ ಸರ್ಕಾರವನ್ನು, ಯಾವ ರಾಜ್ಯದಲ್ಲಿ ಅಕ್ಕಿ ಜಾಸ್ತಿ ಇದೆಯೋ ಅದನ್ನು ಶೇಖರಣೆ ಮಾಡಬೇಕು. ಯಾವ ರಾಜ್ಯಕ್ಕೆ ಅಕ್ಕಿ ಬೇಕಾಗಿದೆ. ಅದನ್ನು ಕೊಡೋದು ಕೇಂದ್ರ ಸರ್ಕಾರದ ಕೆಲಸ” ಎಂದು ತಿರುಗೇಟು ನೀಡಿದರು.
