ರಾಮನಗರ:- ನಾವು ರಣಹೇಡಿಗಳಲ್ಲ, ರಣಧೀರರು ಎಂದು ಚನ್ನಪಟ್ಟಣ ಸೋಲಿನ ಬಗ್ಗೆ ಹೆಚ್ ಡಿ ಕುಮಾರಸ್ವಾಮಿ ಖಡಕ್ ಮಾತುಗಳನ್ನಾಡಿದ್ದಾರೆ.
ಪಂಚಮಸಾಲಿ ಮುಖಂಡರಿಗೆ ಕಾಂಗ್ರೆಸ್ ನಿಂದ ಬೆದರಿಕೆ : ಬಸವ ಜಯಮೃತ್ಯುಂಜಯ ಶ್ರೀ ಆರೋಪ!
ಈ ಸಂಬಂಧ ಮಾತನಾಡಿದ ಅವರು, ಚನ್ನಪಟ್ಟಣ ಉಪಚುನಾವಣೆಯ ಸೋಲಿನ ಹೊಣೆ ಕಾರ್ಯಕರ್ತರು, ಮುಖಂಡರದ್ದಲ್ಲ, ಈ ಬೈಎಲೆಕ್ಷನ್ ಸೋಲಿನ ಜವಾಬ್ದಾರಿಯನ್ನ ನಾನು ವೈಯಕ್ತಿಕವಾಗಿ ತೆಗೆದುಕೊಳ್ತೇನೆ. ನಾವು ಮಾಡಿದ ಕೆಲ ವಿಳಂಬದ ನಿರ್ಧಾರವೂ ಇದಕ್ಕೆ ಕಾರಣ ಆಗಿರಬಹುದು. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಿಕೊಂಡು ಕೆಲಸ ಮಾಡ್ತೇವೆ ಎಂದರು.
ನಿಖಿಲ್ ನಾನು ಸ್ಪರ್ಧೆ ಮಾಡಲ್ಲ ಅಂದ್ರು. ರಾಮನಗರ ಜಿಲ್ಲೆಯಲ್ಲೇ ಮುಂದಿನ ಹೋರಾಟ ಮಾಡ್ತೀನಿ ಅಂದಿದ್ರು. ಆ ಹಿನ್ನೆಲೆಯಲ್ಲಿ ನಾನು ಮಂಡ್ಯದಿಂದ ಸ್ಪರ್ಧೆ ಮಾಡಿದೆ. ನಿಖಿಲ್ ಅಧಿಕಾರಕ್ಕಾಗಿ ನಿಂತಿದ್ರೆ ಮಂಡ್ಯದಲ್ಲಿ ನಿಂತು ಗೆಲ್ತಿದ್ರು. ಆದರೆ ದೇವರ ಇಚ್ಛೆ ಎಂದು ಬೇಸರ ವ್ಯಕ್ತಪಡಿಸಿದರು
ನಮ್ಮನ್ನ ಟೂರಿಂಗ್ ಟಾಕೀಸ್ ಅಂತಾರೆ. ರಾಜ್ಯದಲ್ಲಿ ಯಾವುದೇ ಕಡೆ ನಿಂತು ಗೆದ್ದು ಬರೋ ಶಕ್ತಿ ಇದ್ರೆ ಅದು ದೇವೇಗೌಡರ ಕುಟುಂಬಕ್ಕೆ ಮಾತ್ರ. ಈ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧೆ ಅನಿರೀಕ್ಷಿತ. ಅವರನ್ನೇ ನಿಲ್ಲಿಸಬೇಕು ಅನ್ನೋದಿದ್ದಿದ್ರೆ ನಾನು ಕ್ಷೇತ್ರದಿಂದ ಹೋದಾಗಲೇ ನಿಖಿಲ್ಗೆ ವೇದಿಕೆ ಸಿದ್ಧ ಮಾಡ್ತಿದ್ದೆ. ಕಾಂಗ್ರೆಸ್ ಅಧಿಕಾರ ದುರುಪಯೋಗ ಮಾಡಿಕೊಂಡು ಅಧಿಕಾರಕ್ಕೆ ಬಂದಿದೆ ಎಂದರು