ಮಂಗಳೂರು:- ಡಯಾಲಿಸಿಸ್ ಸಮಸ್ಯೆ ನಮ್ಮ ಸರ್ಕಾರದಿಂದ ಆಗಿದ್ದಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ
ಈ ಸಂಬಂಧ ಮಾತನಾಡಿದ ಅವರು, ಡಯಾಲಿಸಿಸ್ ಸಿಬ್ಬಂದಿಯ ಸಮಸ್ಯೆಯ ಬಗ್ಗೆ ನಮಗೆ ಖಾಳಜಿ ಇದೆ. ಟೆಂಟರ್ ಪ್ರಕ್ರಿಯೆ ಮುಗಿಯಲಿ ಆ ಬಳಿಕ ನಿರ್ಧಾರ ಮಾಡೋಣ ಎಂದರು.
ನಾನು ಸಚಿವನಾಗುವ ಮೊದಲೇ ವ್ಯವಸ್ಥೆಯಲ್ಲಿ ಗೊಂದಲ ಇತ್ತು, ಬಿಜೆಪಿ ಸರ್ಕಾರ ಎರಡು ಏಜನ್ಸಿಗಳಿಗೆ ಕೊಟ್ಟಿತ್ತು, ಒಬ್ಬರು ಅರ್ಧದಲ್ಲೇ ಬಿಟ್ಟಿದ್ದರು. ಆ ಏಜನ್ಸಿ ನಿರ್ವಹಣೆ ಸರಿ ಇರಲಿಲ್ಲ, ಹಾಗಾಗಿ ಸಂಬಳ ಸರಿಯಾಗಿ ಕೊಟ್ಟಿರಲಿಲ್ಲ, ಇದೀಗ ಟೆಂಟರ್ ಪ್ರಕ್ರಿಯೆ ಮುಗಿಯಲಿ ಆ ಬಳಿಕ ನಿರ್ಧಾರ ಮಾಡೋಣ ಅಂತ ತಿಳಿಸಿದ್ದಾರೆ.