ವಿಜಯಪುರ: ಮಾಗಡಿ ಶಾಸಕನೇ ಬ್ರಿಟಿಷ ಇದ್ದಂಗೆ ಅದಾನ. ಆ ಶಾಸಕನ ಬಗ್ಗೆ ಹೆಚ್ಚು ಮಾತಾಡಿ ಪ್ರಯೋಜನ ಇಲ್ಲ ಎಂದು ಬಿಜೆಪಿಯವ್ರನ್ನು ಬ್ರಿಟಿಷರಿಗೆ ಹೋಲಿಸಿದ್ದ ಮಾಗಡಿ ಶಾಸಕ ಬಾಲಕೃಷ್ಣಗೆ ಸಂಸದ ರಮೇಶ ಜಿಗಜಿಣಗಿ ತಿರುಗೇಟು ನೀಡಿದರು. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಪುಲ್ವಾಮಾದಲ್ಲಿ ಸೈನಿಕರು ಸಾಯಲು ಮೋದಿ ಯಾಕೆ ಕಾರಣರಾಗುತ್ತಾರೆ? ನಮ್ಮ ಸೈನಿಕರಿಗೆ ಉಗ್ರರು ತೊಂದರೆ ಮಾಡಿದ್ದಕ್ಕೆ ಮೋದಿ ಅವರು ಸರ್ಜಿಕಲ್ ಸ್ಟ್ರೈಕ್ ಮಾಡಿ ಪಾಕಿಸ್ತಾನದೊಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದರು ಇದು ತಪ್ಪಾ? ಎಂದು ಪ್ರಶ್ನಿಸಿದರು.
Most Visited Websites: ಭಾರತೀಯರು ಅತಿ ಹೆಚ್ಚು ಭೇಟಿ ನೀಡಿದ ವೆಬ್ ಸೈಟ್ಗಳು ಯಾವುದು ಗೊತ್ತಾ?
ಇನ್ನು ಬಿಜೆಪಿಯವರು ಬ್ರಿಟಿಷರಿಗಿಂತ ಡೇಂಜರ್ ಇದ್ದಾರೆ ಎಂಬ ಮಾಗಡಿ ಶಾಸಕನ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, ಆ ಶಾಸಕನ ಬಗ್ಗೆ ನಾನೇನು ಮಾತಾನಾಡುವದಿಲ್ಲ. ನೋಡೋದಕ್ಕೆ ಆ ಮಾಗಡಿ ಶಾಸಕನೇ ಬ್ರಿಟಿಷ ಇದ್ದಂಗೆ ಅದಾನ. ಬಿಜೆಪಿ ಜೆಡಿಎಸ್ ಸಮಿಶ್ರ ಸರ್ಕಾರವಾದ್ರೆ ಉತ್ತರ ಪ್ರದೇಶದಲ್ಲಿ ಬಿಎಸ್ ಪಿ ಗೆ ಆದ ಗತಿ ಜೆಡಿಎಸ್ ಗೆ ಆಗತ್ತೆ ಎಂಬ ಹೇಳಿಕೆ ನೀಡಿರುವ ಆ ಶಾಸಕನ ಬಾಯಿ ಇರೋದೇ ಹಾಗೆ ಅದಕ್ಕೆ ಹಾಗೆ ಹೇಳಿಕೊಂಡು ತಿರುಗಾಡ್ತಾರೆ. ನಮ್ಮ ನಾಯಕರು ಏನು ತೀರ್ಮಾನ ಮಾಡಿದ್ದಾರೆ ಅದಕ್ಕೆ ನಾವು ಬದ್ದರಾಗಿರುತ್ತೇವೆ ಎಂದರು.