ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುವ ಅದ್ಭುತ ದೃಶ್ಯಗಳು ನಮ್ಮ ಮನಸ್ಸಿಗೆ ಬಹಳ ಆಪ್ತವಾಗಿರುತ್ತದೆ. ಅಂತೆಯೇ ಇದೀಗ ನಿರಾಶ್ರಿತ ವ್ಯಕ್ತಿಯೊಬ್ಬರನ್ನು ನಾಯಿಯೊಂದು ಅಪ್ಪಿಕೊಂಡ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರನ್ನು ಮೂಕ ವಿಸ್ಮಿರನ್ನಾಗಿಸಿದೆ. ನಿಯತ್ತಿನ ಪ್ರಾಣಿ ಎಂದರೆ ಅದು ನಾಯಿ. ಮನುಷ್ಯ ಹಾಗೂ ಶ್ವಾನಗಳ ನಡುವಿನ ಸ್ನೇಹ ನೋಡಲು ಬಹಳ ಸುಂದರ. ಶ್ವಾನಗಳನ್ನು ಮನುಷ್ಯನ ನಿಜ ಜೀವನದಲ್ಲಿ ನಂಬಿಕಸ್ಥ ಸ್ನೇಹ ಜೀವಿ ಎಂದರೆ ತಪ್ಪಾಗಲಾರದು.
ವೀಡಿಯೋದಲ್ಲಿ ಶ್ವಾನವೊಂದು ನಿರಾಶ್ರಿತ ವ್ಯಕ್ತಿಯೊಬ್ಬರ ಬಳಿ ಬಂದು ಅವರ ಮಡಿಲಲ್ಲಿ ಮಲಗಿಕೊಂಡು ವ್ಯಕ್ತಿಗೆ ಪ್ರೀತಿ ತೋರಿಸುವ ದೃಶ್ಯವನ್ನು ನಾವು ಕಾಣಬಹುದಾಗಿದೆ. ಇದನ್ನು ನೋಡುವಾಗ ಅನೇಕರ ಕಣ್ಣಲ್ಲಿ ನೀರು ತುಂಬಿಕೊಂಡಿರುವುದಂತು ಸಹಜ. ಈಗಿನ ಕಾಲದಲ್ಲಿ ನಮ್ಮವರೇ ನಮ್ಮನ್ನು ಅರ್ಧದಲ್ಲಿ ಬಿಟ್ಟು ಹೋಗುತ್ತಾರೆ. ಆದರೇ ಇಲ್ಲಿ ಮತ್ತೇ ನಾಯಿ ತನ್ನ ನಿಯತ್ತನ್ನು ಎತ್ತಿತೋರಿಸಿದೆ. ಇಲ್ಲಿ ಬಡವ, ಶ್ರೀಮಂತ ಎಂಬ ಭೇದ ಶ್ವಾನಗಳಿಗೆ ಇಲ್ಲ ಎಂಬುವುದು ಸ್ಪಷ್ಟವಾಗಿ ಕಾಣಿಸುತ್ತದೆ.

https://twitter.com/buitengebieden_/status/1476544786333065219?ref_src=twsrc%5Etfw%7Ctwcamp%5Etweetembed%7Ctwterm%5E1476544786333065219%7Ctwgr%5E%7Ctwcon%5Es1_&ref_url=https%3A%2F%2Fstatic.asianetnews.com%2Ftwitter-iframe%2Fshow.html%3Furl%3Dhttps%3A%2F%2Ftwitter.com%2Fbuitengebieden_%2Fstatus%2F1476544786333065219%3Fref_src%3Dtwsrc5Etfw
ಮಾಲೀಕ ಎಷ್ಟೇ ಕಷ್ಟದಲ್ಲಿದ್ದರು ಶ್ವಾನಗಳು ಇವರನ್ನು ಬಿಟ್ಟು ಹೋಗುವುದಿಲ್ಲ ಎಂಬುದಕ್ಕೆ ಈ ವೀಡಿಯೋ ಸಾಕ್ಷಿಯಾಗಿದೆ. ಈ ವೀಡಿ ಯೋವನ್ನು ಬ್ಯುಟಿಂಗೆಬಿಡೇನ್ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋ ಸುಮಾರು 7 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ. ನಾಯಿಯ ಹಾವಭಾವ ಮತ್ತು ಮನುಷ್ಯನ ಮೇಲಿನ ಪ್ರೀತಿಯನ್ನು ಹಲವರು ಕಾಮೆಂಟ್‌ಗಳ ಮೂಲಕ ವ್ಯಕ್ತಪಡಿಸಿದ್ದಾರೆ.