ರಾಜ್ಯದ ಪ್ರತಿಷ್ಠಿತ ಲಿಂಗನಮಕ್ಕಿ ಜಲಾಶಯ ದಿನದಿಂದ ದಿನಕ್ಕೆ ಬರಿದಾಗುತ್ತಲೇ ಸಾಗಿದೆ. ಲಿಂಗನಮಕ್ಕಿ ವಿದ್ಯುದಾಗಾರದಲ್ಲಿ ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಗರಿಷ್ಟ 1819 ಅಡಿ ನೀರಿಮ ಸಂಗ್ರಹಮಟ್ಟ ಹೊಂದಿರುವ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1740 ಅಡಿಗೆ ತಗ್ಗಿದ ಪರಿಣಾಮ ಲಿಂಗನಮಕ್ಕಿ ಪವರ್ ಹೌಸ್ ನಲ್ಲಿ ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಡ್ಯಾಂ ನಲ್ಲಿ ಶೇಕಡಾ ಏಳರಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಿದ್ದು, ಶೇಕಡಾ ಎರಡರಷ್ಟು ಪ್ರಮಾಣದಲ್ಲಿ ಮಾತ್ರ ವಿದ್ಯುತ್ ಉತ್ಪಾಧಿಸಬಹುದಾಗಿದೆ.ಈ ಬಾರಿ ವಿದ್ಯುತ್ ಸಮಸ್ಯೆಯ ತಲೆದೋರುವ ಸಾಧ್ಯತೆಗಳು ಹೆಚ್ಚಿದೆ.
ರಾಜ್ಯದ ವಿದ್ಯುತ್ ಪೂರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಶರಾವತಿ ಕಣಿವೆ ಜಲವಿದ್ಯುತ್ ಯೋಜನೆಯ ಅಚ್ಚುಕಟ್ಟು ಪ್ರದೇಶದಲ್ಲಿ ಈ ಬಾರಿ ಮಳೆ ಕೈಕೊಟ್ಟಿದೆ. ನಿತ್ಯ ಕಾರ್ಮೋಡಗಳ ಸಾಲು ಹಾದು ಹೋದರೂ, ಅದು ಮಳೆಯಾಗಿ ಧರೆಗೆ ಬೀಳುತ್ತಿಲ್ಲ. ಹೀಗಾಗಿ ಶರಾವತಿ ನದಿ ಹರಿಯವನ್ನು ನಿಲ್ಲಿಸಿದೆ. ಲಿಂಗನಮಕ್ಕಿ ಜಲಾಶಯದಲ್ಲಿ ದಿನೇ ದಿನೇ ನೀರಿನ ಪ್ರಮಾಣ ಕುಸಿಯುತ್ತಿರುವುದರಿಂದ, ಶರಾವತಿಗೆ ಸಂಬಂಧಿಸಿದ ನಾಲ್ಕು ವಿದ್ಯುತ್ ಗಾರಗಳ ಪೈಕಿ ಲಿಂಗನಮಕ್ಕಿ ಪವರ್ ಹೌಸ್ನಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಉಳಿದಂತೆ ಗೇರುಸೊಪ್ಪ, ಶರಾವತಿ ಹಾಗೂ ಮಹಾತ್ಮ ಗಾಂಧಿ ಪವರ್ ಹೌಸ್ನಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿದೆಯಾದರೂ ಕಡಿಮೆ ಪ್ರಮಾಣದಲ್ಲಿ ಆಗುತ್ತಿದೆ

1,819 ಅಡಿ ನೀರು ಸಂಗ್ರಹ ಸಾಮರ್ಥ್ಯದ ಲಿಂಗನಮಕ್ಕಿ ಇದೀಗ ಡೆಡ್ ಸ್ಟೋರೆಜ್ನ ಗಡಿಯನ್ನ ಸಮೀಪಿಸುತ್ತಿದೆ. ಪ್ರಸ್ಥುತ ಡ್ಯಾ ನಲ್ಲಿ 1740.6 ಅಡಿ ನೀರು ಸಂಗ್ರಹವಿದೆ. 151.64 ಟಿಎಂಸಿ ಸಾಮರ್ಥ್ಯದ ಲಿಂಗನಮಕ್ಕಿ ಡ್ಯಾ ನಲ್ಲಿ ಈಗ ಶೇಕಡಾ 7.42 ರಷ್ಟು ನೀರು ಸಂಗ್ರಹವಿದೆ. 1725 ಅಡಿಯವರೆಗೂ ವಿದ್ಯುತ್ ಉತ್ಪಾದನೆ ಮಾಡಬಹುದು. ಆನಂತರ ಜಲಾಶಯದ ನೀರಿನ ಮಟ್ಟದ 5 ಪರ್ಸೆಂಟ್ ನೀರನ್ನ ಕುಡಿಯುವ ನೀರಿನ ಉದ್ದೇಶಕ್ಕಾಗಿ ಉಳಿಸಿಕೊಳ್ಳಲಾಗುತ್ತದೆ. 1715 ಅಡಿಗೆ ಇಳಿದರೆ, ಜಲಾಶಯ ಬಹುತೇಕ ಬರಿದಾಗಿದೆ ಎಂದೇ ಅರ್ಥೈಸಬಹುದಾಗಿದೆ.
ಶರಾವತಿಗೆ ಸಂಬಂಧಿಸಿದ, ಗೇರುಸೊಪ್ಪ, ಮಹಾತ್ಮಗಾಂಧಿ, ಶರಾವತಿ ಹಾಗೂ ಲಿಂಗನಮಕ್ಕಿ ಪವರ್ ಹೌಸ್ಗಳು ಒಟ್ಟು 1436 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಲ್ಲವು. ಈ ಪೈಕಿ ಏಪ್ರಿಲ್ ನಿಂದ ಇಲ್ಲಿಯವರೆಗೂ ಲಿಂಗನಮಕ್ಕಿಯಲ್ಲಿ 30 ಮಿಲಿಯನ್ ಯುನಿಟ್ ಶರಾವತಿಯಲ್ಲಿ 93 ಮಿಲಿಯನ್ ಯುನಿಟ್, ಗೇರುಸೊಪ್ಪದಲ್ಲಿ 91 ಮಿಲಿಯನ್ ಯುನಿಟ್ ಹಾಗೂ ಮಹಾತ್ಮ ಗಾಂಧಿ ಪವರ್ ಹೌಸ್ನಲ್ಲಿ 107 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಲಿಂಗನಮಕ್ಕಿ ಪವರ್ ಹೌಸ್ನಲ್ಲಿರುವ ಎರಡು ಯುನಿಟ್ಗಳಿದ್ದು, ಈ ಘಟಕಗಳು ಸದ್ಯ ವಿದ್ಯುತ್ ಉತ್ಪಾದನೆ ಮಾಡುತ್ತಿಲ್ಲ. ಇನ್ನೂ ಶರಾವತಿ ಪವರ್ ಹೌಸ್ನಲ್ಲಿ 10 ಪವರ್ ಯುನಿಟ್ಗಳಲ್ಲಿದ್ದು, ಮಹಾತ್ಮಗಾಂಧಿ ಪವರ್ ಹೌಸ್ನಲ್ಲಿ ನಾಲ್ಕು ಯುನಿಟ್ಗಳಿವೆ, ಗೇರುಸೊಪ್ಪ ಪವರ್ ಹೌಸ್ನಲ್ಲಿ ನಾಲ್ಕು ಪವರ್ ಯುನಿಟ್ ಇದ್ದು ಸದ್ಯ ಚಾಲ್ತಿಯಲ್ಲಿದೆ.
ಪ್ರಸ್ಥುತ ಶರಾವತಿ ಕಣಿವೆ ಯೋಜನಾ ವ್ಯಾಪ್ತಿಯಲ್ಲಿ 339 ಮಿಲಿಯನ್ ಯುನಿಟ್ ವಿದ್ಯುತ್ ಅನ್ನು ತಯಾರಿಸಬಹುದು. ಶರಾವತಿಯಲ್ಲಿ 21 ಪ್ರತಿದಿನ 21 ಮಿಲಿಯನ್ ಯುನಿಟ್ ವಿದ್ಯುತ್ ತಯಾರಿಸಬಹುದು. ಈಗ ಕ್ರಿಟಿಕಲ್ ಕಂಡಿಷನ್ ಇರುವುದರಿಂದ ಮೂರರಿದಂ ನಾಲ್ಕು ಮಿಲಿಯನ್ ಯುನಿಟ್ ವಿದ್ಯುತ್ ತಯಾರಿಸಲಾಗುತ್ತಿದೆ. ಗೇರುಸೊಪ್ಪ ಪವರ್ ಹೌಸ್ ನಲ್ಲಿ ಕೂಡ ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ಉತ್ಪಾಧಿಸಲಾಗುತ್ತಿದೆ. ಇನ್ನು ಹದಿನೈದು ದಿನಗಳಲ್ಲಿ ಮಳೆಯಾಗದಿದ್ದರೆ ಶರಾವತಿ ಕಣಿವೆ ಪ್ರದೇಶದ ನಾಲ್ಕು ಪವರ್ ಹೌಸ್ ಗಳು ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ.2003 ರಲ್ಲಿ ರಾಜ್ಯದಲ್ಲಿ ಭೀಕರ ಬರಗಾಲ ಬಂದ ಸಂದರ್ಭದಲ್ಲಿ ಡ್ಯಾಂ ನ ನೀರಿನ ಮಟ್ಟ 1725.45 ಅಡಿ ಕನಿಷ್ಟ ಮಟ್ಟ ತಲುಪಿತ್ತು. ಒಟ್ಟಿನಲ್ಲಿ ಶರಾವತಿ ಕಣಿವೆ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಬೇಕೆಂಬುದು ಎಲ್ಲರ ಆಶಯವಾಗಿದೆ.
