ಆಸ್ಟ್ರೇಲಿಯಾ: ನಡೆದಾಡುವ ಅಪರೂಪದ ಪಿಂಕ್ ಹ್ಯಾಂಡ್ ಫಿಶ್ 22 ವರ್ಷದ ಬಳಿಕ ಪತ್ತೆಯಾಗಿದೆ. ಟಾಸ್ಮೇನಿಯನ್ ಕರಾವಳಿಯ ಬಳಿ ಆಸ್ಟ್ರೇಲಿಯಾದ ಕಾಮನ್‍ವೆಲ್ತ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ ಆರ್ಗನೈಸೇಶನ್‍ನ ಸಂಶೋಧಕರ ತಂಡ ಈ ಮೀನು ಪತ್ತೆ ಮಾಡಿದ್ದಾರೆ. ಈ ಅಪರೂಪದ ಮೀನು 1999ರಲ್ಲಿ ಒಮ್ಮೆ ಕಾಣಿಸಿಕೊಂಡಿತ್ತು. ಇದೀಗ ಕಾಣಿಸಿಕೊಂಡಿರುವ ಬಗ್ಗೆ ಸಂಶೋಧಕರ ತಂಡ ತಿಳಿಸಿದೆ.
ಸಂಶೋಧಕರ ತಂಡ ಟಾಸೈನ್ ಸಮುದ್ರದ ಒಳಗೆ ಕ್ಯಾಮೆರಾವನ್ನು ಇಟ್ಟಿದ್ದರು. 4 ಸಾವಿರ ಮೀಟರ್ ಅಡಿಯವರೆಗೆ ಕ್ಯಾಮೆರಾವನ್ನು ಇಳಿಬಿಟ್ಟಿದ್ದರು. ಒಂದು ವರ್ಷದ ನಂತರ ಕ್ಯಾಮೆರಾವನ್ನು ಹೊರತೆಗೆದಿದ್ದಾರೆ. ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳನ್ನು ಪರೀಕ್ಷಿಸಿದಾಗ ಗುಲಾಬಿ ಹ್ಯಾಂಡ್ ಫಿಶ್ ನೋಡಿ ಸಂತಸಗೊಂಡಿದ್ದಾರೆ. ಗುಲಾಬಿ ಹ್ಯಾಂಡ್ ಫಿಶ್ ಕೇವಲ 150 ಅಡಿ ಆಳದಲ್ಲಿ ಕಂಡುಬಂದಿದೆ.

A very rare walking fish has been spotted for the first time in 22 years! Was that on your 2021 bingo card? 🐟
We’ve confirmed that the endangered pink handfish has been seen in a marine park off Tasmania’s south-west coast. https://t.co/nYFRsxk7Lf
— CSIRO (@CSIRO) December 23, 2021
ವೈರಲ್ ವೀಡಿಯೋದಲ್ಲಿ ಏನಿದೆ?: ಸಂಶೋಧಕರ ತಂಡ ಗುಲಾಬಿ ಹ್ಯಾಂಡ್ ಫಿಶ್ ಕಾಣಿಸಿಕೊಂಡ 35 ಸೆಕೆಂಡುಗಳ ವೀಡಿಯೋವನ್ನು ಅಧಿಕೃತ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಮುದ್ರದ ತಳದಲ್ಲಿ ನಡೆದಾಡಲು ಪುಟ್ಟ ಕೈಗಳನ್ನು ಹೊಂದಿರುವ ಈ ಮೀನು, ತಿಳಿ ಗುಲಾಬಿ ಬಣ್ಣದಲ್ಲಿದ್ದು ನೋಡಲೂ ಆಕರ್ಷಕವಾಗಿದೆ. ತನ್ನ ಕೈಗಳ ಸಹಾಯದಿಂದ ಮುಂದೆ ಸಾಗುತ್ತಿರುವುದನ್ನು ನಾವು ವೀಡಿಯೋದಲ್ಲಿ ನೋಡಬಹುದಾಗಿದೆ.