ನವದೆಹಲಿ: ಮಧ್ಯಪ್ರದೇಶ(Madhya Pradesh) ಮತ್ತು ಛತ್ತೀಸ್ಗಢ(Chhattisgarh) ವಿಧಾನಸಭೆ ಚುನಾವಣೆಗೆ ಮತದಾನ ಆರಂಭವಾಗಿದೆ. ಮಧ್ಯಪ್ರದೇಶದ ಎಲ್ಲಾ 230 ಸ್ಥಾನಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. 252 ಮಹಿಳೆಯರು ಸೇರಿದಂತೆ ಒಟ್ಟು 2,533 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಛತ್ತೀಸ್ಗಢದಲ್ಲಿ ಎರಡನೇ ಮತ್ತು ಕೊನೆಯ ಹಂತದಲ್ಲಿ 70 ಸ್ಥಾನಗಳಿಗೂ ಮತದಾನ ನಡೆಯಲಿದೆ. ನವೆಂಬರ್ 7 ರಂದು 20 ಸ್ಥಾನಗಳಿಗೆ ಮತದಾನ ನಡೆದಿದೆ.
ರಾಜ್ಯದ 70 ಸ್ಥಾನಗಳಲ್ಲಿ 958 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಸಂಪೂರ್ಣ ಒತ್ತು ನೀಡಿದೆ. ಆದರೆ ಪ್ರಚಾರದಲ್ಲಿ ಬಿಜೆಪಿ ಕಾಂಗ್ರೆಸ್ಗಿಂತ ಮೇಲುಗೈ ಸಾಧಿಸಿದೆ. ಇದೀಗ ಶುಕ್ರವಾರ ನಡೆಯಲಿರುವ ಮತದಾನದಲ್ಲಿ ಮತದಾರರು ತಮ್ಮ ನಿರ್ಧಾರವನ್ನು ಇವಿಎಂಗಳಲ್ಲಿ ಮುದ್ರೆ ಹಾಕಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ 36 ಸಭೆಗಳನ್ನು ನಡೆಸಿದ್ದು, ರಾಹುಲ್ ಮತ್ತು ಪ್ರಿಯಾಂಕಾ 21 ಸಭೆಗಳನ್ನು ನಡೆಸಿದ್ದಾರೆ. ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಗರಿಷ್ಠ 160 ಸಭೆಗಳನ್ನು ನಡೆಸಿದ್ದರೆ, ಕಮಲ್ ನಾಥ್ 114 ಸಭೆಗಳನ್ನು ನಡೆಸಿದ್ದಾರೆ. ವರಾಜ್ ನಂತರ, ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿಯಿಂದ ಗರಿಷ್ಠ 80 ಸಭೆಗಳನ್ನು ನಡೆಸಿದರು. ಕಾಂಗ್ರೆಸ್ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಸಾಕಷ್ಟು ಸಭೆಗಳನ್ನು ನಡೆಸಿದ್ದರು.