ಬಳ್ಳಾರಿ :ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕು ಆಡಳಿತ ವತಿಯಿಂದ ವಿಶ್ವಕರ್ಮ ಜಕಣಾಚಾರ್ಯ ಸಂಸ್ಕರಣ ದಿನಾಚರಣೆಯನ್ನು ತಾಲೂಕು ಕಚೇರಿಯ ಸಭಾಂಗಣದಲ್ಲಿ ಆಚರಿಸಲಾಯಿತು. ಈ ದಿನಾಚರಣೆಯ ವೇಳೆ ಶಾಸಕ ಜೆ.ಎನ್ ಗಣೇಶ್, ತಸಿಲ್ದಾರ್ ಗೌಸಿಯಾ ಬೇಗಮ್ ವಿಶ್ವಕರ್ಮ ಜಯಂತಿ ಉದ್ದೇಶಿಸಿ ಮಾತನಾಡಿದರು.
ಈ ವೇಳೆ ಸಮುದಾಯದ ಮುಖಂಡರಾದ ಹಿರೇಹಾಳ ವಿಶ್ವಕರ್ಮ ಸಮಾಜದ ಕಾಳಿ ಹಸ್ತೇಮದ್ರಾ ಸ್ವಾಮಿ, ಸಂಘದ ಅಧ್ಯಕ್ಷ ಡಿ. ಎ. ರುದ್ರಪ್ಪ ಆಚಾರ್ಯ, ಪ್ರಮುಖರಾದ ಮೌನೇಶ್ ಆಚಾರ್ಯ, ಡಿ ರವಿ, ರಾಘವೇಂದ್ರ, ಡಿ ಕೃಷ್ಣ, ಎಂ ಮಂಜುನಾಥ, ವೆಂಕಣ್ಣ, ವೀರಭದ್ರಪ್ಪ ಆಚಾರ್ಯ, ನಾರಾಯಣ, ಸೇರಿ ಸಮಾಜದ ಮುಖಂಡರು ಹಾಗೂ ತಾಲೂಕು ಆಡಳಿತ ಸಿಬ್ಬಂದಿ ಅವರು ಇದ್ದರು.
