ಹುಬ್ಬಳ್ಳಿ : ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ರಾಜ್ಯ ಹೆದ್ದಾರಿ ೧೩೭ ರ ನವಲಗುಂದ ಗದಗ ರಸ್ತೆಯಲ್ಲಿರುವ ರೇಲ್ವೆ ಗೇಟ್ ನಂ 18ರಲ್ಲಿ ನೂತನ ಮೇಲ್ಸೇತುವೆ ಕಾಮಗಾರಿ ಪ್ರಾರಂಭ ವಾದರೂ,ಅದಕ್ಕೆ ಜಮೀನು ಕಳೆದುಕೊಂಡ ರೈತರಿಗೆ ಯಾವುದೇ ರೀತಿಯ ನೋಟಿಸು ಹಾಗೂ ಪರಿಹಾರ ನೀಡದ ಹಿನ್ನಲೆ ಜಮೀನು ಕಳೆದುಕೊಂಡ ಮಾಲಕರಿಂದ ಹಾಗೂ ರೈತ ಹೋರಾಟ ಸಮಿತಿಯಿಂದ ಬುಧವಾರ ರೇಲ್ವೆ ಗೇಟ್ ೧೮ರ ಬಳಿ ರಸ್ತೆ ತಡೆ ಮಾಡಿ ಕೆಲಕಾಲ ಪ್ರತಿಭಟನೆ ಮಾಡಿದರು.
3ನೇ ಏಕದಿನ ಸರಣಿ: ಭಾರತಕ್ಕೆ ಭರ್ಜರಿ ಗೆಲುವು; ಗೆಲುವಿಗೆ ಕ್ಯಾಪ್ಟನ್ ಕೊಟ್ಟ ಕಾರಣ ಹೀಗಿದೆ!
ಈ ಸಂದರ್ಭದಲ್ಲಿ ಹೋರಾಟದ ನೇತೃತ್ವ ವಹಿಸಿ ಮಾತನಾಡಿದ ನ್ಯಾಯವಾದಿ ಪ್ರಕಾಶ ಅಂಗಡಿ ಮಾತನಾಡಿ ಕಳೆದ ಒಂದೂವರೆ ವರ್ಷದಿಂದ ಪಟ್ಟಣದ ಹಿತದೃಷ್ಟಿಯಿಂದ ನಾವು ಮೇಲಸೇತುವೆ ಮಾಡಲು ಅವಕಾಶ ಮಾಡಿದೆವು ಆದರೆ ಇಲ್ಲಿಯವರೆಗೂ ಯಾವುದೇ ನೋಟಿಸ್ ಆಗಲಿ ಪರಿಹಾರವನ್ನು ನೀಡಿಲ್ಲ ಇದ್ಕಕೆ ಸಂಬಂದಿಸಿದ ಜಿಲ್ಲಾಧಿಕಾರಿ, ಹಾಗೂ ಉಪವಿಭಾಗಧಿಕಾರಿಗಳಿ ಭೇಟಿ ಮಾಡಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದ ಹಿನ್ನಲೆ ರಸ್ತೆ ತಡೆ ಮಾಡಿ ಹೋರಾಟ ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರದ ಹಣ ಬರುವವರೆಗೂ ಯಾವುದೇ ಕಾಮಗಾರಿಯನ್ನು ಮಾಡದಂತೆ ರೇಲ್ವೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು, ಭೂಮಿ ಕಳೆದುಕೊಂಡವರಿಗೆ ಹೆಚ್ಚಿನ ಪರಿಹಾರ ನೀಡಬೇಕು, ಅಲ್ಲದೆ ಒಂದು ತಿಂಗಳ ಒಳಗಾಗಿ ರೈತರ ಬ್ಯಾಂಕ ಖಾತೆಗೆ ಪರಿಹರದ ಹಣವನ್ನು ಜಮಾ ಮಾಡಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ಭಗವಂತಪ್ಪ ಪುಟ್ಟಣ್ಣವರ ಮಾತನಾಡಿ ತಕ್ಷಣ ರೇಲ್ವೆ ಬ್ರಿಡ್ಜ್ ಗೆ ಭೂಮಿ ಕಳೆದುಕೊಂಡ ರೈತರಿಗೆ ತಕ್ಷಣ ಪರಿಹಾರವನ್ನು ನೀಡಬೇಕು ಇಲ್ಲವಾದರೆ ರೈತ ಹೋರಾಟ ಸಮಿತಿಯಿಂದ ಅನ್ಯಾಯಕ್ಕೋಳಗಾದ ಭೂ ಮಾಲಕರು ಜೊತೆಗೂಡಿ ಉಗ್ರವಾಗಿ ಹೋರಾಟ ಮಾಡಲಾಗುವದು ಎಂದರು.
ಪ್ರತಿಭಟನ ಸ್ಥಳಕ್ಕೆ ತಹಶೀಲ್ದಾರ್ ಸುಧೀರ್ ಸಾಹುಕಾರ್ ಆಗಮಿಸಿ ಪ್ರತಿಭಟನಾಕಾರರನ್ನು ಮನವಲಿಸಿ, ಮನವಿಯನ್ನು ಸ್ವೀಕರಿಸಿ ಜೊತೆಗೆ ಉಪವಿಭಾಗಧಿಕಾರಿಗಳ ಜೊತೆ ಮಾತನಾಡಿ ೨ತಿಂಗಳಒಳಗಾಗಿ ಪರಿಹಾರ ನೀಡುವದಾಗಿ ಭರವಸೆ ನೀಡಿದರು. ರೈತರ್ ಪ್ರತಿಭಟನೆ ಹಿನ್ನಲೆ ಕೆಲಕಾಲ ಸಂಚಾರ ಸ್ಥಗಿತವಾದ ಹಿನ್ನಲೆ ದಾರಿಯುದ್ಧಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಈ ಸಂದರ್ಭದಲ್ಲಿ ಕರಿವಾಳಪ್ಪ ಕಿಲಾರಿ, ನಿಂಗಪ್ಪ ಮುಂಡಸದ, ಬಾಬುಸಾಬ ಇಸ್ಮಾಯಿಲ್,ಈರಪ್ಪ ಆಡಕಾವು,ಚಾಂದಸಾಬ್ ಹಂಚಿನಾಳ,ನಿಂಗಪ್ಪ ವಿಟೋಜಿ,ಯಲ್ಲಪ್ಪ ಆಡಕಾವು,ಅಲ್ಲಾಬಕ್ಷ ಕಿನಕೇರಿ,ಈರಣ್ಣ ಕರವೀರಮಠ,ಸಂಗಮೇಶ ಅಂಗಡಿ, ಬಸವರಾಜ ಹಾದಿಮನಿ,ಗುರುಸಿದ್ದಪ್ಪ ಕೊಪ್ಪದ,ಡಿ. ಎಲ್. ಆಡಕಾವು, ದಸ್ತಾಗೀರ ಸಂಗಟಿ, ನಿಂಗಪ್ಪ ಬಡ್ದೆಪ್ಪನವರ, ರೇಲ್ವೆ ಇಲಾಖೆಯ ಅಧಿಕಾರಿಗಳು, ಸಿ ಪಿ ಆಯ್ ರವಿ ಕಪ್ಪತ್ತನವರ, ಪಿ ಎಸ್ ಆಯ್ ಸಿಧ್ದಾರೂಢ ಆಲದಕಟ್ಟಿ ಅವರು ಹಾಜರಿದ್ದರು.