ವಯೋಸಹಜ ಕಾಯಿಲೆಯಿಂದ ಹಿರಿಯ ನಟಿ ಲೀಲಾವತಿ ಅವರು ಶುಕ್ರವಾರ ( ಡಿಸೆಂಬರ್ 8) ವಿಧಿವಶರಾಗಿದ್ದಾರೆ.
ತಾಯಿಯನ್ನು ಕಳೆದುಕೊಂಡು ವಿನೋದ್ ರಾಜ್ ಅವರು ತೀವ್ರ ದುಃಖಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಪ್ರಸ್ತುತ ಪೀಳಿಗೆಗೆ ಕಿವಿಮಾತು ಹೇಳಿದ್ದಾರೆ. ತಾಯಿಯನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳಿ. ಅಮ್ಮನಿಲ್ಲದೆ ನಾವಿಲ್ಲ, ನಾವು ಎತ್ತರಕ್ಕೆ ಬೆಳೆದಾಗ ನಿನ್ನಿಲ್ಲದೆ ನಾನಿಲ್ಲ ಅಂತ ಯಾಕೆ ಹೇಳೋಕೆ ಆಗಲ್ಲ. ತಾಯಿಯನ್ನ ಬಿಟ್ಟೋರು ಏಳಿಗೆ ಕಾಣಲ್ಲ, ಯಾವ ಸಮಾಜವೂ ಹತ್ರ ಸೇರಿಸಲ್ಲ. ಒಬ್ಬ ತಾಯಿ ಮಗುವನ್ನ ನೋಡಿಕೊಳ್ಳುತ್ತಾಳೆ. ನಂತರ ಅದೇ ಮಗು ತಾಯಿಯನ್ನ ನೋಡ್ಕೋಬೇಕು. ಯಾರು ತಾಯಿಯನ್ನ ಕೇವಲವಾಗಿ ನೋಡಬೇಡಿ. ಯಾರು ತಾಯಿಯನ್ನ ಆಶ್ರಮಗಳಿಗೆ ಸೇರಿಸಬೇಡಿ.
ತಾಯಿಯೇ ದೇವರು, ತಾಯಿ ಬಿಟ್ರೆ ಜಗದಲ್ಲಿ ಏನಿಲ್ಲ ಎಂದು ವಿನೋದ್ ರಾಜ್ ಲೀಲಾವತಿ ನೆನಪಿನಲ್ಲಿ
ಭಾವುಕ ಸಂದೇಶ ರವಾನಿಸಿದ್ದಾರೆ.