ಪ್ಯಾರಿಸ್: ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದ ಮಹಿಳೆಯರ 50 ಕೆಜಿ ವಿಭಾಗದ ಫೈನಲ್ ನಲ್ಲಿ ಸೆಣೆಸಬೇಕಿದ್ದ ಅವರು, ನಿಗದಿತ ತೂಕಕ್ಕಿಂತ ಕೇವಲ 150 ಗ್ರಾಂ ತೂಕ ಹೆಚ್ಚಾಗಿದ್ದ ಕಾರಣಕ್ಕೆ ಆ ಪಂದ್ಯದಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡರು. ಆ ಹಿನ್ನೆಲೆಯಲ್ಲಿ ತೀವ್ರವಾಗಿ ನೊಂದಿರುವ ಅವರು, ಕುಸ್ತಿ ಕ್ರೀಡೆಗೆ ವಿದಾಯ ಹೇಳಿದ್ದಾರೆ.
ಫೈನಲ್ ಪಂದ್ಯಕ್ಕೂ ಮುನ್ನ ಅನರ್ಹಗೊಳಿಸಿದ್ದರ ವಿರುದ್ಧವಾಗಿ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ನಲ್ಲಿ ಮನವಿ ಸಲ್ಲಿಸಿದ್ದರು. ಇದೀಗ ವಿನೇಶ್ ಅವರ ಮೇಲ್ಮನವಿ ವಿಚಾರಣೆಯ ಗಡುವನ್ನು ಆಗಸ್ಟ್ 11 ರವರೆಗೆ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ವಿಸ್ತರಿಸಿದೆ.
PM Narendra Modi: ಪ್ರಧಾನಿ ನರೇಂದ್ರ ಮೋದಿ ಉಪಯೋಗಿಸುವ ಫೋನ್ ಯಾವುದು ಗೊತ್ತಾ..?
ವಾಸ್ತವವಾಗಿ ವಿನೇಶ್ ಅವರ ಮೇಲ್ಮನವಿಯ ತೀರ್ಪು ಇಂದೇ ಬರಬೇಕಿತ್ತು. ಆದರೆ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ನ ತಾತ್ಕಾಲಿಕ ವಿಭಾಗದ ಅಧ್ಯಕ್ಷರು ಮುಂದೂಡಿದ್ದಾರೆ. ಪದೇ ಪದೇ ಈ ಪ್ರಕರಣದ ತೀರ್ಪಿನ ಗಡುವನ್ನು ಮುಂದೂಡುತ್ತಿರುವುದನ್ನು ಗಮನಿಸಿದರೆ, ಈ ಪ್ರಕರಣ ಸಾಕಷ್ಟು ಗಂಭೀರತೆ ಪಡೆದುಕೊಂಡಿದೆ ಎಂಬುದನ್ನು ನಾವಿಲ್ಲಿ ಅರಿತುಕೊಳ್ಳಬಹುದಾಗಿದೆ.
ಮತ್ತೆ ಗಡುವು ವಿಸ್ತರಣೆ
ವಾಸ್ತವವಾಗಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಯಾವುದಾದರೂ ಮೇಲ್ಮನವಿ ಬಂದರೆ, ಇದಕ್ಕೆ ಸಂಬಂಧಿಸಿದಂತೆ ತೀರ್ಪನ್ನು ನೀಡಲು 24 ಗಂಟೆಗಳ ಕಾಲಾವಕಾಶ ನೀಡಲಾಗುತ್ತದೆ. ಆದರೆ, ವಿನೇಶ್ ಫೋಗಟ್ ಪ್ರಕರಣದಲ್ಲಿ ಮಾತ್ರ ವಿಳಂಬವಾಗಲಿದೆ. ಸಿಎಎಸ್ ಅಡ್ ಹಾಕ್ ವಿಭಾಗದ ಅಧ್ಯಕ್ಷರು ಸಮಿತಿಗೆ ತೀರ್ಪನ್ನು ನೀಡಲು ಸಮಯದ ಗಡುವನ್ನು ಕೊಂಚ ವಿಸ್ತರಿಸಿದ್ದಾರೆ. ಇದರ ಪ್ರಕಾರ, ಈಗ ಸಮಿತಿಯು ತನ್ನ ನಿರ್ಧಾರವನ್ನು ಸ್ಥಳೀಯ ಕಾಲಮಾನ ಸಂಜೆ 6 ಗಂಟೆಯೊಳಗೆ ನೀಡಬಹುದು ಎಂದು ವರದಿಯಾಗಿದೆ.